More

    ಎಲೆಕ್ಟ್ರಾನಿಕ್ಸ್​ ಚಿಪ್​ ಅಳವಡಿಸಿ ಗ್ರಾಹಕರಿಗೆ ಮೋಸವೆಸಗುತ್ತಿದ್ದ 33 ಪೆಟ್ರೋಲ್​ ಬಂಕ್ಸ್​ ಸೀಜ್! ​

    ಹೈದರಾಬಾದ್​: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಗ್ರಾಹಕರಿಗೆ ಮೋಸವೆಸಗುತ್ತಿದ್ದ 33 ಪೆಟ್ರೋಲ್​ ಬಂಕ್​ಗಳನ್ನು ಸೈಬರಬಾದ್ ಪೊಲೀಸರು ಸೀಜ್​ ಮಾಡಿದ್ದಾರೆ.

    ಪೆಟ್ರೋಲ್​ ಬಂಕ್​ನಲ್ಲಿ ಇಂಧನ ತುಂಬುವಾಗ ಮೀಟರ್​ನಲ್ಲಿ ಕೈಚಳಕ ತೋರುವಂತೆ ಎಲೆಕ್ಟ್ರಾನಿಕ್ಸ್​ ಚಿಪ್​ ಬಳಸುತ್ತಿದ್ದ ಅಂತಾರಾಜ್ಯ ಖದೀಮರ ಗ್ಯಾಂಗ್​ ಬಂಧಿಸಿದ ಬೆನ್ನಲ್ಲೇ 33 ಪೆಟ್ರೋಲ್​ ಬಂಕ್​ಗಳನ್ನು ಸೀಜ್​ ಮಾಡಿದ್ದಾರೆ.

    ಎರಡು ರಾಜ್ಯದ ಪೊಲೀಸರು ಮತ್ತು ಕಾನೂನು ಮಾಪನಶಾಸ್ತ್ರ ವಿಭಾಗದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಹುದೊಡ್ಡ ಗ್ಯಾಂಗ್​ ಸಿಕ್ಕಿಬಿದ್ದಿದೆ. ಈ ಗ್ಯಾಂಗ್​ ಬಂಕ್​​ಗಳಲ್ಲಿ ಇಂಧನ ತುಂಬುವ ಯಂತ್ರಕ್ಕೆ ಇಂಟಿಗ್ರೇಟೆಡ್​ ಚಿಪ್​ ಅಳವಡಿಸಿ, ಮೀಟರ್​ನಲ್ಲಿ ಸರಿಯಾದ ಅಂಕಿ-ಅಂಶ ಮತ್ತು ಕಡಿಮೆ ಇಂಧನ ತುಂಬುವಂತೆ ಮಾಡಿ ತಮ್ಮ ಕೈಚಳಕವನ್ನು ತೋರುತ್ತಿದ್ದರು. ಈ ಮೂಲಕ ಕೋಟ್ಯಾಂತರ ಹಣವನ್ನು ಗ್ರಾಹಕರಿಗೆ ಮೋಸ ಮಾಡುತ್ತಿದ್ದರು.

    ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮನೆಯೊಳಗಿಂದ ರಕ್ತ ಹರಿದು ಬರುವುದನ್ನು ನೋಡಿ ಬೆಚ್ಚಿಬಿದ್ದ ಜನರು!

    ಪ್ರತಿ ಸಾವಿರ ಮಿಲಿ ಲೀಟರ್​ಗೆ 970 ಮಿಲಿಲೀಟರ್​ ಪೆಟ್ರೋಲ್ ಅಥವಾ ಡೀಸೆಲ್​​ ಮಾತ್ರ ಹೊರ ಬರುವಂತೆ ಚಿಪ್​ ಅಳವಡಿಸಿದ್ದರು. ಸೀಜ್​ ಮಾಡಿರುವ 33 ಬಂಕ್​ಗಳಲ್ಲಿ 17 ಪಂಪ್​ ಇಂಡಿಯನ್​ ಆಯಿಲ್​ ಕಾರ್ಪೋರೇಷನ್ ಲಿಮಿಟೆಡ್​, ಭಾರತ್​ ಪೆಟ್ರೋಲಿಯಂ ಕಾರ್ಪೋರೇಷ್​ ಲಿಮಿಟೆಡ್​ (9), ಹಿಂದೂಸ್ಥಾನ್​ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್​ (2) ಮತ್ತು ಉಳಿದ ಎರಡು ಬಂಕ್​ ಎಸ್ಸಾರ್​ಗೆ ಸೇರಿದ್ದಾಗಿವೆ. ​

    ಈ ಇಂಟಿಗ್ರೇಟೆಡ್​ ಚಿಪ್ಸ್​ಗಳನ್ನು ಬಂಕ್​ ಮಾಲೀಕರ ಒಪ್ಪಿಗೆ ಪಡದೇ ಅಳವಡಿಸುತ್ತಿದ್ದರು. ಈ ಮೂಲಕ ಕೋಟ್ಯಾಂತರ ರೂಪಾಯಿಯನ್ನು ಗ್ರಾಹಕರಿಗೆ ಗೊತ್ತಿಲ್ಲದೇ ಅಕ್ರಮವಾಗಿ ಸಂಗ್ರಹಿಸಿದ್ದಾರೆಂದು ಸೈಬರಾಬಾದ್​ ಪೊಲೀಸ್​ ಆಯುಕ್ತ ವಿ.ಸಿ ಸಜ್ಜನರ್​ ಮಾಹಿತಿ ನೀಡಿದ್ದಾರೆ.

    ಗ್ಯಾಂಗ್​ನಿಂದ 14 ಇಂಟಿಗ್ರೇಟೆಡ್​ ಚಿಪ್ಸ್​, 8 ಡಿಸ್​ಪ್ಲೇಗಳು, ಮೂರು ಜಿಬಿಆರ್​ ಕೇಬಲ್​ಗಳು, ಒಂದು ಮದರ್​ ಬೋರ್ಡ್​ ಮತ್ತು ಒಂದು ಹುಂಡೈ ಐ20 ಕಾರನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಗಳನ್ನು ಬಾಷಾ ಬಾಬಾ, ಮದಸುಗುರಿ ಶಂಕರ ಮತ್ತು ಮಲ್ಲೇಶ್ವರ ರಾವ್​ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಆಂಧ್ರ ಪ್ರದೇಶದ ಎಲೂರು ಪಟ್ಟಣದವರು.

    ಇದಲ್ಲದೆ, ಎರಡು ರಾಜ್ಯದ 9 ಮಾಲೀಕರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ಐವರು ಮಾಲೀಕರು ಪರಾರಿಯಾಗಿದ್ದಾರೆ. ಇನ್ನು ಕೆಲವರು ಸಹ ಎಸ್ಕೇಪ್​ ಆಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

    ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts