More

    32ನೇ ಉಪಕಾಲುವೆಯ ಕೆಳಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ರೈತರಿಂದ ರಸ್ತೆ ಸಂಚಾರ ತಡೆ

    ಗೊರೇಬಾಳ: 24ದಿನಗಳಿಂದ ಎಡದಂಡೆ ನಾಲೆಯ 32ನೇ ಉಪಕಾಲುವೆಯ ಕೆಳಭಾಗಕ್ಕೆ ನೀರು ಹರಿಯದಿರುವುದನ್ನು ಖಂಡಿಸಿ ಕೆ.ಹಂಚಿನಾಳ ಕ್ಯಾಂಪಿನ ಹತ್ತಿರ ರೈತರು ಶುಕ್ರವಾರ ದಿಢೀರನೇ ಗಂಗಾವತಿ-ರಾಯಚೂರು ರಸ್ತೆ ಸಂಚಾರ ತಡೆ ಪ್ರತಿಭಟನೆ ನಡೆಸಿದರು.

    ಜಿಪಂ ಸದಸ್ಯ ಬಸವರಾಜ ಹಿರೇಗೌಡರ ಮಾತನಾಡಿ, ನಿರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷೃದಿಂದ ಮೇಲ್ಭಾಗದಲ್ಲಿ ನೀರು ಅಕ್ರಮ ಬಳಕೆ ಹೆಚ್ಚಿದೆ. ಕೇಳಭಾಗದ ರೈತರು ಕಂಗಾಲಾಗಿದ್ದಾರೆ. ಶಾಸಕ ವೆಂಕಟರಾವ್ ನಾಡಗೌಡ ರೈತರ ಬಗ್ಗೆ ಹುಸಿ ಭರವಸೆ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಟೇಲೆಂಡಗೆ ನೀರು ಹರಿಸದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ನಂತರ ಪ್ರತಿಭಟನಾ ಸ್ಥಳಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಸೂಗಪ್ಪ ಆಗಮಿಸಿ, ರೈತರು ಕಚೇರಿಗೆ ಮಾಹಿತಿ ನೀಡದೆ ಯಾಕೇ ಸಂಚಾರ ತಡೆ ನಡೆಸಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಬಸವರಾಜ ಹಿರೇಗೌಡರ, ‘ಕಾಲುವೆಯ ಮೇಲೆ ನಿಗಾವಹಿಸಿ ಸಮರ್ಪಕ ನೀರು ಹರಿಸಿದ್ದರೆ ಯಾವ ರೈತರು ಪ್ರತಿಭಟನೆಗೆ ಇಳಿಯುತ್ತಿರಲಿಲ್ಲ. ಸಸಿಗಳು ದಿನಗಳು ತುಂಬಿ ನಾಟಿಗೆ ತಡವಾಗುತ್ತಿರುವುದನ್ನು ಗಮನಿಸಿ ಪ್ರತಿಭಟನೆಗೆ ಇಳಿಯಲಾಯಿತು ಎಂದು ಸಮಜಾಯಿಸಿ ನೀಡಿದರು. ನಂತರ ಸೂಗಪ್ಪ ರೈತರ ಮನವಿ ಸ್ವೀಕರಿಸಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

    ರವಡಕುಂದಾ ಸಂಸ್ಥಾನ ಹಿರೇಮಠದ ಸ್ವಾಮೀಜಿ ಮರಿಸಿದ್ಧಲಿಂಗ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ವೆಂಕಟೇಶ್ವರರಾವ್, ಗಾದೆಪ್ಪ ಕುರುಬರ, ಸಣ್ಣಬೀಮನಗೌಡ, ಗ್ರಾಪಂ ಸದಸ್ಯ ಪಿ.ರಾಮುಲು, ಬಾಲಯ್ಯ ಉಪ್ಪಾರ, ಕರಟೂರಿ ಪ್ರಸಾದ, ಹೇಮರಡ್ಡಿ ಉಪ್ಪರ, ಸಿಂಹಾದ್ರಿ ಶ್ರೀನಿವಾಸ, ಹೊನ್ನೂರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts