More

    ಅಸ್ತಿತ್ವಕ್ಕಾಗಿ ಎಂಇಎಸ್ ಗಡಿ ಕ್ಯಾತೆ

    ಅಥಣಿ ಗ್ರಾಮೀಣ: ಎಂಇಎಸ್‌ನ ಪ್ರಾಬಲ್ಯ ಕುಸಿಯುತ್ತಿದೆ. ಹೀಗಾಗಿ ಅದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರ ಕೆದಕುತ್ತಿದೆ. ಅದಕ್ಕೆ ಯಾವುದೇ ಮಹತ್ವ ಕೊಡಬೇಕಾಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

    ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ 4.96 ಕೋಟಿ ರೂ. ವೆಚ್ಚದಲ್ಲಿ ಗ್ರಾಮದಿಂದ ತೀರ್ಥ ಗ್ರಾಮದವರೆಗೆ ಸಂಪರ್ಕ ರಸ್ತೆ ಪಕ್ಕ ನಿರ್ಮಿಸಲಾಗುವ ತಡೆಗೋಡೆ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

    ಮರಾಠರಿಗೂ ಮತ್ತು ಎಂಇಎಸ್‌ಗೂ ಯಾವುದೇ ಸಂಬಂಧವಿಲ್ಲ. ಮರಾಠಿಗರು ಈಗ ಬಿಜೆಪಿಗೆ ಮತ ಚಲಾಯಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಎಂಇಎಸ್ ಗಡಿ ಕ್ಯಾತೆ ವಿಚಾರ ಮುನ್ನೆಲೆಗೆ ತಂದು ಕನ್ನಡಿಗರು ಮತ್ತು ಮರಾಠಿಗರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಸಚಿವರು ನೀಡುವ ಗೊಂದಲದ ಹೇಳಿಕೆ ನಿಲ್ಲಸದಿದ್ದರೆ ಬೆಳಗಾವಿಯ ಎಲ್ಲ ರಾಜಕಾರಣಿಗಳು ತಕ್ಕ ಪ್ರತ್ಯುತ್ತರ ನೀಡಿ ಹೋರಾಡಲು ತಯಾರಿದ್ದೇವೆ. ಮಹಾರಾಷ್ಟ್ರದ ಜತ್ತ ತಾಲೂಕಿನ 44 ಗ್ರಾಮಗಳ ಜನ ಮೈಶಾಳ ನದಿ ನೀರು ಪಡೆಯಲು ಕರ್ನಾಟಕಕ್ಕೆ ಸೇರುತ್ತೇವೆ ಎಂದು ಆಗ್ರಹಿಸುತ್ತಿದ್ದು, ನೀರು ಪೂರೈಸಿ ಮಹಾ ಸರ್ಕಾರ ಅವರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾರದರ್ಶಕ ಹಾಗೂ ಭ್ರಷ್ಟಾಚಾರರಹಿತ ಆಡಳಿತಕ್ಕೆ ಗುಜರಾತ ಮತದಾರರು ಬಿಜೆಪಿಗೆ ಬಹುಮತ ನೀಡಿದ್ದಾರೆ ಎಂದರು. ಕೃಷ್ಣಾ ನದಿ ದಡದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ಸಂಭವಿಸುವ ನಷ್ಟ ತಡೆಗಟ್ಟಲು ನದಿ ಇಂಗಳಗಾಂವ ತೀರ್ಥಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಎರಡೂ ಬದಿ 6 ರಿಂದ 7 ಮೀ. ಎತ್ತರದ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದರು. ಶಂಕರಗೌಡ ಪಾಟೀಲ, ಗುರುಬಸು ತೆವರಮನಿ, ಕುಮಾರ ಮಠಪತಿ, ಶಿವರುದ್ರ ಗುಳಪ್ಪನವರ, ಅಣ್ಣಪ್ಪ ಮದಭಾವಿ, ಮಲ್ಲಪ್ಪ ಠಕ್ಕಣ್ಣವರ, ಯಲ್ಲಪ್ಪ ಡಪರೆ, ವೀರೇಶ ಮಠಗಾರ, ಮಹಾಂತೇಶ ಪಾಟೀಲ, ನೀರಾವರಿ ಇಲಾಖೆ ಅಧಿಕಾರಿ ಎಸ್.ಬಿ. ಬಾಗಿ, ಪ್ರವೀಣ ಹುಣಸಿಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts