More

    32ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ: ಮುಂದುವರೆದ ಕಾವೇರಿ ಹೋರಾಟ

    ಮಂಡ್ಯ: ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಶಿಫಾರಸು ಮಾಡುತ್ತಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ರೈತರ ಹಿತ ಕಡೆಗಣಿಸಿ ನೀರು ಹರಿಸಿದ ರಾಜ್ಯಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ 112 ಹಾಗೂ ಸರದಿ ಉಪವಾಸ ಸತ್ಯಾಗ್ರಹ 31ನೇ ದಿನ ಪೂರೈಸಿತು.
    ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಉಪವಾಸದಲ್ಲಿ ದೇವರಹಳ್ಳಿ ಡಿ.ಎನ್.ಲಿಂಗೇಗೌಡ, ಕ್ಯಾತಘಟ್ಟ ಕೆ.ಬಿಳೀಗೌಡ, ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ, ಅರಗನಹಳ್ಳಿ ಪುನೀತ್‌ಗೌಡ, ಕಾರಸವಾಡಿ ಸಚಿನ್, ಗುತ್ತಲು ಬಡಾವಣೆ ಜೆ.ಬಸವರಾಜ್ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
    ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ ಮಾತನಾಡಿ, ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಕಾವೇರಿ ಕಣಿವೆ ಜಲಾಶಯಗಳು ನೀರಿಲ್ಲದೆ ಖಾಲಿಯಾಗಿವೆ. ಪರಿಣಾಮ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಲಿದೆ. ರಾಜ್ಯಸರ್ಕಾರ ಯಾವ ರೀತಿ ನಿರ್ವಹಣೆ ಮಾಡಲಿದೆ ಗೊತ್ತಿಲ್ಲ. ನೀರಿಲ್ಲದೆ ರೈತ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ.ಬೇಸಿಗೆ ಬೆಳೆಗೂ ನೀರಿಲ್ಲ. ಇದರಿಂದಾಗಿ ರೈತನ ಕಷ್ಟ ಹೇಳ ತೀರದಾಗಿದೆ. ಕಾವೇರಿ ಚಳವಳಿ ಕುರಿತು ಮುಂದಿನ ನಿರ್ಧಾರದ ಬಗ್ಗೆ ಡಿ.31ಅಥವಾ 2024ರ ಜ.1ರಂದು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಎಲ್ಲ ಸಂಘಟನೆಗಳೊಂದಿಗೆ ಚರ್ಚಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts