More

    ಬಿಎಂಟಿಸಿಯ 32 ಸಿಬ್ಬಂದಿಗೆ ಕರೊನಾ ಸೋಂಕು

    ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 32 ಸಿಬ್ಬಂದಿಗೆ ಕರೊನಾ ವೈರಸ್ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.
    ಕಳೆದ ಒಂದು ವಾರದಲ್ಲಿಯೇ 20 ಸಿಬ್ಬಂದಿಗೆ ಸೋಂಕು ತಗುಲಿದ್ದು, ಇದರ ಪ್ರಮಾಣ ಇದೀಗ 32ಕ್ಕೆ ಏರಿದೆ.

    ಜೂನ್ 12ರಂದು ಬಿಎಂಟಿಸಿ ಸಿಬ್ಬಂದಿಗೆ ಮೊದಲ ಬಾರಿಗೆ ಸೋಂಕು ತಗುಲಿತ್ತು. ಅಲ್ಲಿಂದ ಎರಡನೇ ವಾರ ಅದು 16ಕ್ಕೆ ಏರಿಕೆಯಾಯಿತು. ಈಗ 32 ಸಿಬ್ಭಂದಿಗೆ ತಗುಲಿದ್ದು, ಈ ಪೈಕಿ 12 ಸಿಬ್ಬಂದಿ ಗುಣಮುಖರಾಗಿದ್ದಾರೆ.

    ಇದನ್ನೂ ಓದಿ: 50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ರಜೆ: ಇನ್ನೊಂದು ಇಲಾಖೆ ಸೇರ್ಪಡೆ

    ಬಹುತೇಕ ಇಲಾಖೆಗಳಂತೆ ಬಿಎಂಟಿಸಿ ಎಲ್ಲಾ ಸಿಬ್ಬಂದಿಗೂ ಸೋಂಕಿನ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಈ ಮೂಲಕ ಸೋಂಕು ಹರಡುವಿಕೆಯನ್ನು ತಡೆಯಲು ಮುಂದಾಗಿದೆ.
    ಇದಾಗಲೇ 50 ವರ್ಷಕ್ಕಿಂತ ಮೇಲ್ಪಟ್ಟ ಸಿಬ್ಬಂದಿಗೆಗಳಿಗೆ ರಜೆ ನೀಡಲಾಗಿದೆ.

    ಈ ನಡುವೆ ಬಸ್‌ ಸಂಚಾರದ ಕುರಿತು ಮಾಹಿತಿ ನೀಡಿರುವ ಬಿಎಂಟಿಸಿ ರಾತ್ರಿ 8 ಗಂಟೆಗೆ ಬಸ್ ಸಂಚಾರ ಸ್ಥಗಿತಗೊಳ್ಳುವುದಾಗಿ ಹೇಳಿದೆ. ಎಲ್ಲಾ ಡಿಪೋಗಳಿಂದ ರಾತ್ರಿ 8 ಗಂಟೆ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲಾಗುವುದು. ಒಂದು ವೇಳೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಅಂಥ ಸಂದರ್ಭದಲ್ಲಿ ಮಾತ್ರ ಮೆಜೆಸ್ಟಿಕ್, ಶಿವಾಜಿನಗರ, ಬನಶಂಕರಿ, ಕೆಂಗೇರಿ, ಯಶವಂತಪುರ ಮುಂತಾದ ನಿಲ್ದಾಣಗಳಿಂದ ರಾತ್ರಿ 9 ಗಂಟೆ ತನಕ ಬಸ್ ಓಡಿಲಾಗುವುದು ಎಂದಿದೆ.

    ಕರೊನಾ ಸೋಂಕಿತ ಪತ್ನಿ ಕಳಿಸಲು ಪತಿಯ ರಂಪಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts