More

    VIDEO | ಎರಡೂ ಕೈಗಳಿಲ್ಲದೆ ಹುಟ್ಟಿದ ಮಹಿಳೆಗೆ ಡ್ರೈವಿಂಗ್ ಲೈಸೆನ್ಸ್‌!

    ತಿರುವನಂತಪುರಂ: ಡ್ರೈವಿಂಗ್ ಲೈಸೆನ್ಸ್‌ಗಾಗಿ ಎರಡೂ ಕೈಗಳಿಲ್ಲದೆ ಹುಟ್ಟಿದ ಯುವತಿ ಆರು ವರ್ಷಗಳ ನಿರಂತರ ಪ್ರಯತ್ನ ಕೊನೆಗೂ ಫಲ ನೀಡಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ 32 ವರ್ಷದ ಅಂಗವಿಕಲ ಜಿಲುಮೋಲ್ ಎಂ.ಥಾಮಸ್ ಅವರಿಗೆ ಡ್ರೈವಿಂಗ್ ಲೈಸೆನ್ಸ್‌ ದಾಖಲೆ ಹಸ್ತಾಂತರಿಸಿದ್ದಾರೆ. ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದನ್ನು ಈ ಯುವತಿ ಸಾಭಿತು ಮಾಡಿ ತೋರಿಸಿದ್ದಾಳೆ. ಈ ಕಥೆಯು ಜೀವನ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

    ಹ್ಯಾಂಡ್ಸ್ ಫ್ರೀ ಡ್ರೈವಿಂಗ್ ಲೈಸೆನ್ಸ್ ಸಿಕ್ಕಿದೆ. ಹುಟ್ಟಿದಾಗಿನಿಂದಲೂ ಕೈಗಳಿಲ್ಲದ ಮಹಿಳೆ ಇದೀಗ ಕಾರು ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಏಷ್ಯಾದಲ್ಲೇ ಇಂತಹ ಸಾಹಸ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೇರಳದಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ.

    ಕೇರಳ ಮೂಲದ ಮಹಿಳೆಯ ಹೆಸರು ಜಿಲುಮೋಲ್ ಥಾಮಸ್.. ಆಕೆಗೆ 32 ವರ್ಷ. ಆಕೆಗೆ ಹುಟ್ಟಿದಾಗಿನಿಂದಲೂ ಎರಡು ಕೈಗಳಿಲ್ಲದೆ ಇರುವುದನ್ನು ಕಂಡು ತಂದೆ-ತಾಯಿ ಹಾಗೂ ಮನೆಯಲ್ಲಿದ್ದವರು ನೊಂದಿದ್ದರು. ಅವಳ ಬದುಕು ಹೇಗೆ ಹೋಗುವುದೋ ಎಂಬ ಚಿಂತೆ ಎಲ್ಲರಲ್ಲೂ ಇತ್ತು. ಆದರೆ, ಮಹಿಳೆ ತನಗೆ ಇರುವ ನ್ಯೂನತೆಯನ್ನು ಪರಿಗಣಿಸದೆ ಮುಂದೆ ಸಾಗುತ್ತಿದ್ದಳು.

    ಜಿಲುಮೋಲ್​ ಥಾಮಸ್ ನಾಲ್ಕು ಚಕ್ರದ ವಾಹನ ಚಾಲನಾ ಪರವಾನಗಿ ಪಡೆದಿದ್ದಾರೆ. ತನ್ನ ಕಾಲುಗಳಿಂದ ಕಾರು ಓಡಿಸುವುದು ಅವಳ ಕನಸು. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು 6 ವರ್ಷಗಳ ಕಾಲ ಶ್ರಮಿಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಮಹಿಳೆಗೆ ಚಾಲನಾ ಪರವಾನಗಿ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ.

    ಕೊಚ್ಚಿಯಲ್ಲಿರುವ Vi Innovations Pvt Ltd, ಸಹಾಯಕ ತಂತ್ರಜ್ಞಾನವನ್ನು ಬಳಸಿಕೊಂಡು ತನ್ನ 2018 ಮಾರುತಿ ಸೆಲೆರಿಯೊದಲ್ಲಿ ಬಯಸಿದ ಎಲೆಕ್ಟ್ರಾನಿಕ್ ಮಾರ್ಪಾಡುಗಳನ್ನು ಮಾಡಿದ್ದು, ಆಕೆಯ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

    ಜಿಲುಮೋಲ್​​ ಥಾಮಸ್ ಮಾತನಾಡಿ, ಡ್ರೈವಿಂಗ್ ಸ್ಕೂಲ್‌ಗೆ ಸೇರಿದಾಗ ಎಲ್ಲರೂ ತನ್ನನ್ನು ಗೇಲಿ ಮಾಡಿದರು ಮತ್ತು ಕೈಗಳಿಲ್ಲದೆ ಓಡಿಸುವುದು ನಿಜವಾಗಿಯೂ ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ, ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಗುರಿ ತಲುಪಿದ್ದೇನೆ ಎಂದರು.

    ಕೈಗಳಿಲ್ಲದೆ ಚಾಲನಾ ಪರವಾನಗಿ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವಳು ತನ್ನ ಕಾಲುಗಳನ್ನು ಬಳಸಿ ಮತ್ತು ಧ್ವನಿ ಕಮಾಂಡ್ ಸಿಸ್ಟಮ್ ಮೂಲಕ ಕಾರನ್ನು ಓಡಿಸುತ್ತಾಳೆ ಎಂದು ಕೇರಳ ಮೋಟಾರು ವಾಹನ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts