More

    ಯುವಜನೋತ್ಸವ, 31 ಪದವಿ ಕಾಲೇಜ್‌ಗಳಿಂದ 500 ವಿದ್ಯಾರ್ಥಿಗಳು ಸ್ಪರ್ಧೆ

    ಕೊಟ್ಟೂರು: ಕೊಟ್ಟೂರೇಶ್ವರ ಕಾಲೇಜ್‌ನಲ್ಲಿ ಇದೇ ಪ್ರಥಮ ಬಾರಿಗೆ ಜು.9 ಮತ್ತು 10ರಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ವಿಜಯನಗರ ಜಿಲ್ಲಾ ಪದವಿ ಕಾಲೇಜ್ ವಿದ್ಯಾರ್ಥಿಗಳ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಕೊಟ್ಟೂರೇಶ್ವರ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಹೇಳಿದರು.

    ಈ ಅಂತರ್ ಕಾಲೇಜು ಯುವಜನೋತ್ಸವದಲ್ಲಿ ಹೊಸಪೇಟೆ ಹೊರತುಪಡಿಸಿ ಜಿಲ್ಲೆಯ 31 ಪದವಿ ಕಾಲೇಜ್‌ಗಳ ವಿದ್ಯಾರ್ಥಿಗಳು 28 ಸ್ಪರ್ಧೆಯಲ್ಲಿ 500 ಮಕ್ಕಳು ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಸಂಗೀತ ವಿಭಾಗದಲ್ಲಿ 6 ಸ್ಪರ್ಧೆ, ನೃತ್ಯದಲ್ಲಿ 2, ಸಾಹಿತ್ಯದಲ್ಲಿ 4, ರಂಗಕಲೆಯಲ್ಲಿ 4, ಲಲಿತಾ ಕಲೆಯಲ್ಲಿ 6 ಸೇರಿವೆ. ಶನಿವಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವೀ.ವಿ ಸಂಘದ ಅಧ್ಯಕ್ಷರಾದ ಎಚ್.ಎಂ.ಗುರುಸ್ವಾಮಿ ವಹಿಸಲಿದ್ದು, ವಿವಿ ಕುಲಪತಿ ಪ್ರೊ.ಸಿದ್ದು ಪಿ. ಅಲಗೂರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಿಂಡಿಕೇಟ್ ಸದಸ್ಯರಾದ ಪದ್ಮವಿಠಲ್, ಡಾ. ಅಜಯ್ ಹಾಗೂ ಕಲಾವಿದರಾದ ನಾಡೋಜ ಬೆಳಗಲ್ಲು ವೀರಣ್ಣ, ಸ್ಥಳೀಯ ಕಲಾಕೇಂದ್ರದ ಅಧ್ಯಕ್ಷ ಎಂ.ಎಂ.ಜೆ. ಸತ್ಯಾಪ್ರಕಾಶ ಸೇರಿದಂತೆ ಅನೇಕರು ಹಾಜರಿರುತ್ತಾರೆ. ಎರಡನೇ ದಿನವಾದ ಭಾನುವಾರದ ಸಮರೋಪದಲ್ಲಿ ಅಧ್ಯಕ್ಷತೆಯನ್ನು ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧರಾಮ ಕಲ್ಮಠ ವಹಿಸಲಿದ್ದಾರೆ. ವಿ.ವಿ ಯುವಜನೋತ್ಸವದ ಸಂಚಾಲಕ ಡಾ.ಶಾಂತನಾಯಕ್ ಹಾಗೂ ರಂಗಕಲಾವಿದೆ ಡಾ.ಕೆ.ನಾಗರತ್ನಮ್ಮ, ಮತ್ತೊಬ್ಬ ಕಲಾವಿದ ಹಿ.ಮಾ. ಕೊಟ್ರಯ್ಯ ಮುಂತಾದವರು ಭಾಗವಹಿಸಲಿದ್ದಾರೆ ಎಂದರು. ಕೊಟ್ಟೂರೇಶ್ವರ ಪದವಿ ಕಾಲೇಜ್ ಪ್ರಾಚಾರ್ಯ ಪ್ರೊ.ಶಾಂತಮೂರ್ತಿ ಬಿ. ಕುಲಕರ್ಣಿ, ಕೊಟ್ಟೂರೇಶ್ವರ ಕಾಲೇಜು ಪ.ಪೂ.ಕಾಲೇಜು ಪ್ರಾಚಾರ್ಯ ಎಂ.ಎಚ್. ಪ್ರಶಾಂತ ಕುಮಾರ್ ಹಾಗೂ ಯುವಜನೋತ್ಸವದ ಸಂಚಾಲಕಿ ಕುಸುಮಾ ಸಜ್ಜನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts