More

    307 ಕೋಟಿ ರೂ. ಸಾಲ, ಬಡ್ಡಿ ಮರುಪಾವತಿ

    ಇಂಡಿ: 2017ರಲ್ಲಿ ಭೀಮಾಶಂಕರ ಸಕ್ಕರೆ ಕಾರ್ಖಾನೆ ಪ್ರಾರಂಭದಿಂದ ಇಲ್ಲಿಯವರೆಗೆ 307 ಕೋಟಿ ರೂ. ಸಾಲ ಮತ್ತು ಬಡ್ಡಿ ಮರುಪಾವತಿ ಮಾಡಲಾಗಿದೆ ಎಂದು ಶಾಸಕ, ಭೀಮಾಶಂಕರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

    ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 2017-18ರಲ್ಲಿ 4 ಕೋಟಿ ರೂ. ಬಡ್ಡಿ ಮತ್ತು 4 ಕೋಟಿ ರೂ. ಸಾಲ ಸೇರಿ ಒಟ್ಟು 8 ಕೋಟಿ ರೂ., 2018-19 ರಲ್ಲಿ 23 ಕೋಟಿ ರೂ. ಬಡ್ಡಿ ಮತ್ತು 10 ಕೋಟಿ ರೂ. ಸಾಲ ಸೇರಿ ಒಟ್ಟು 33 ಕೋಟಿ ರೂ., 2019-20 ರಲ್ಲಿ 39 ಕೋಟಿ ರೂ. ಬಡ್ಡಿ ಮತ್ತು 27 ಕೋಟಿ ರೂ. ಸಾಲ ಸೇರಿ ಒಟ್ಟು 67 ಕೋಟಿ ರೂ., 2020-21 ರಲ್ಲಿ 39 ಕೋಟಿ ರೂ. ಬಡ್ಡಿ ಮತ್ತು 46 ಕೋಟಿ ರೂ. ಸಾಲ ಸೇರಿ ಒಟ್ಟು 85 ಕೋಟಿ ರೂ., 2021-22 ರಲ್ಲಿ 39 ಕೋಟಿ ರೂ. ಬಡ್ಡಿ ಮತ್ತು 16 ಕೋಟಿ ರೂ. ಸಾಲ ಸೇರಿ ಒಟ್ಟು 55 ಕೋಟಿ ರೂ., 2022-23 ರಲ್ಲಿ 37 ಕೋಟಿ ರೂ. ಬಡ್ಡಿ ಮತ್ತು 17 ಕೋಟಿ ರೂ. ಸಾಲ ಸೇರಿ ಒಟ್ಟು 55 ಕೋಟಿ ರೂ. ಹೀಗೆ ಒಟ್ಟು 307 ಕೋಟಿ ರೂ. ಬಡ್ಡಿ ಮತ್ತು ಸಾಲ ಪರುಪಾವತಿ ಮಾಡಲಾಗಿದೆ ಎಂದರು.

    ಕಾರ್ಖಾನೆ ಪ್ರತಿದಿನ 3500 ಟನ್‌ದಿಂದ 5000 ಟನ್‌ವರೆಗೆ ಕಬ್ಬು ನುರಿಸುತ್ತಿದೆ. ಪ್ರತಿವರ್ಷ 5 ಲಕ್ಷ ಟನ್‌ಗಿಂತಲೂ ಅಧಿಕ ಕಬ್ಬು ನುರಿಸಿದೆ. ಸದ್ಯದಲ್ಲಿಯೇ 200 ಕೋಟಿ ರೂ. ವೆಚ್ಚದಲ್ಲಿ ಇಥೆನಾಲ್ ಘಟಕ ಮುಂಬರುವ ನವೆಂಬರ್‌ದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದರು.

    ಅದಲ್ಲದೆ ಕಾರ್ಖಾನೆ ಪ್ರತಿದಿನ 14 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಅದರಲ್ಲಿ ಹಂಗಾಮಿನಲ್ಲಿ ಕಾರ್ಖಾನೆಗೆ ಪ್ರತಿದಿನ 5 ಮೆಗಾವ್ಯಾಟ್ ಹಾಗೂ 9 ಮೆಗಾವ್ಯಾಟ್ ಕೆಪಿಟಿಸಿಎಲ್‌ದವರಿಗೆ ನೀಡಲಾಗುತ್ತಿದೆ ಎಂದರು.

    ಚುನಾವಣೆ ನಡೆದರೆ ಕಾರ್ಖಾನೆಗೆ ಸಾಲದ ಹೊರೆ ಹೆಚ್ಚಾಗುತ್ತದೆ ಎಂಬ ಕಾರಣದಿಂದ ಅವಿರೋಧ ಆಯ್ಕೆಗೆ ಪ್ರಯತ್ನಿಸಿದೆವು. ಆದರೆ ಕೆಲವರು ಬೇಕಂತಲೇ ಚುನಾವಣೆಗೆ ನಿಂತಿದ್ದಾರೆ. ಅದಕ್ಕೆ ನನಗೇನೂ ಸಿಟ್ಟಿಲ್ಲ. ಆದರೆ ಪೂರ್ಣ ಪೆನಲ್ ಮಾಡಿಕೊಂಡು ನಿಂತು ಚುನಾವಣೆ ಎದುರಿಸಬೇಕಿತ್ತು. ಅವರಿಗೆ ಪೆನಲ್ ಮಾಡಿಕೊಳ್ಳಲು ಅಭ್ಯರ್ಥಿಗಳೇ ಸಿಕ್ಕಿಲ್ಲ ಎಂದು ಮಾಜಿ ಶಾಸಕರ ವಿರುದ್ಧ ವ್ಯಂಗ್ಯವಾಡಿದರು.

    ಅಭ್ಯರ್ಥಿಗಳಾದ ಸಿದ್ದುಗೌಡ ಪಾಟೀಲ ಹೂವಿನಹಳ್ಳಿ, ಎಂ.ಆರ್. ಪಾಟೀಲ, ಜಟ್ಟೆಪ್ಪ ರವಳಿ, ಬಿ.ಎಂ. ಕೋರಿ, ಸುರೇಶಗೌಡ ಪಾಟೀಲ, ಬಸವರಾಜ ಧನಶ್ರೀ, ಅಶೋಕ ಗಜಾಕೋಶ, ವಿಶ್ವನಾಥ ಬಿರಾದಾರ, ಲಲಿತಾ ನಡಗೇರಿ, ಸರೋಜಿನಿ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts