More

    30 ಕೋಟಿ ರೂ. ಮೌಲ್ಯದ ಕೊಕೇನ್​ ಕಳ್ಳ ಸಾಗಣೆ; ಲೈಬೀರಿಯನ್​ ಮೂಲದ ಮಹಿಳೆ ಅರೆಸ್ಟ್​​

    ಬೆಂಗಳೂರು: ಆಫ್ರಿಕಾ ಖಂಡದ ಅಡಿಸ್ ಅಬಾಬಾದಿಂದ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಲೈಬೀರಿಯಾ ಮಹಿಳೆಯ ಬಳಿ 30 ಕೋಟಿ ರೂ. ಮೌಲ್ಯದ ಮಾದಕ ಕೊಕೇನ್ ಪತ್ತೆಯಾಗಿದೆ.

    ಕಂದಾಯ ಗುಪ್ತಚರ ನಿರ್ದೇಶನಾಲಯದ (ಡೈರೆಕ್ಟರೇಟ್ ಆಫ್​​ ರೆವೆನ್ಯೂ ಇಂಟೆಲಿಜೆನ್ಸ್) ಅಧಿಕಾರಿಗಳು ಲಿಬೇರಿಯನ್ ಮೂಲದ 34 ವರ್ಷದ ಮಹಿಳೆಯೊಬ್ಬರು ಕಪ್ಪು ಬಣ್ಣದ ಸೂಟ್‌ಕೇಸ್‌ನಲ್ಲಿ ಬಟ್ಟೆಗಳ ಮಧ್ಯೆ ಬಚ್ಚಿಟ್ಟಿದ್ದಂತಹ 30 ಕೋಟಿ ರೂ.ಮೌಲ್ಯದ ಎರಡು ಕೆ.ಜಿ ಕೊಕೇನ್‌ನೊಂದಿಗೆ ಬಂಧಿಸಿದ್ದಾರೆ.

    ಮಾದಕವಸ್ತು ಕಳ್ಳ ಸಾಗಣೆ

    ಭಾರತದ ಪ್ರವಾಸಿ ವೀಸಾದಲ್ಲಿ ಇಥಿಯೋಪಿಯನ್ ಏರ್‌ಲೈನ್ಸ್‌ನಿಂದ ಅಡಿಸ್ ಅಬಾಬಾದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 26 ರಂದು ಬಂದಿಳಿದ ಕೂಡಲೇ ಹೊರಗೆ ನಡೆದುಹೋಗುವಾಗ ಅನುಮಾನದ ಮೇಲೆ ಡಿಆರ್‌ಐ ಅಧಿಕಾರಿಗಳು ತಡೆದು ಪರಿಶೀಲಿಸಿದಾಗ ಮಾದಕವಸ್ತು ಕಳ್ಳ ಸಾಗಣೆ ಬೆಳಕಿಗೆ ಬಂದಿದೆ.

    ವಿಮಾನ ನಿಲ್ದಾಣದ ಹೊರಗಿನ ವ್ಯಕ್ತಿಗೆ ಸರಕುಗಳನ್ನು ಹಸ್ತಾಂತರಿಸಲು ಈಕೆಯನ್ನು ನೇಮಿಸಿಕೊಂಡಿದ್ದರು. ಆರೋಪಿಗೆ ಸರಕನ್ನು ಗುರುತಿಸಲು ಮತ್ತು ಬ್ಯಾಗ್‌ಗಳನ್ನು ಹಸ್ತಾಂತರಿಸಲು ಕೋಡ್ ವರ್ಡ್ ಸಹ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    seized kokain

    ಇದನ್ನೂ ಓದಿ: ಅಡುಗೆಮನೆಯಲ್ಲಿ ಶುರುವಾದ ವಾಗ್ವಾದ; ಪ್ರಿಯಕರನನ್ನು ಚುಚ್ಚಿ ಕೊಂದ ಪ್ರಿಯತಮೆ

    ಆರೋಪಿ ಪರಾರಿ

    ಆಕೆಗೆ ವಿಮಾನ ಟಿಕೆಟ್‌ಗಳ ಜತೆಗೆ ದೊಡ್ಡ ಮೊತ್ತದ ಹಣವನ್ನು ನೀಡಲಾಗಿತ್ತು ಮತ್ತು ಕೆಲವು ದಿನಗಳವರೆಗೆ ಸ್ಟಾರ್ ಹೋಟೆಲ್ನಲ್ಲಿ ಉಳಿಯಲು ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿ ಆಕೆಯ ವಿವರಗಳನ್ನು ಪರಿಶೀಲಿಸಿದಾಗ ಗೊತ್ತಾಗಿದೆ. ಈಕೆ ಸಿಕ್ಕಿ ಬೀಳುತ್ತಿದ್ದಂತೆ ಮಾದಕ ಪಡೆಯಲು ಬಂದಿದ್ದ ಆರೋಪಿ ಪರಾರಿಯಾಗಿದ್ದು ಅಧಿಕಾರಿಗಳು ಆತನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

    ಒಂದು ತಿಂಗಳ ಅಂತರದಲ್ಲಿ ಇದು ಎರಡನೇ ಪ್ರಕರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ.

    11 ಕೋಟಿ ರೂ. ಮೌಲ್ಯದ ಕೊಕೈನ್ ಪತ್ತೆಯಾಗಿತ್ತು

    ಏಪ್ರಿಲ್ ೨೮ರಂದು ನೈಜೀರಿಯಾ ಮೂಲದ 40 ವರ್ಷದ ಮಹಿಳೆಯಿಂದ ಸುಮಾರು 11 ಕೋಟಿ ಮೊತ್ತದ ಒಂದು ಕೆ.ಜಿ ಕೊಕೈನ್ ಮಾದಕವನ್ನು ವಶಪಡಿಸಿಕೊಳ್ಳಲಾಗಿತ್ತು. ಕೆಲವು ಮಾದಕ ದ್ರವ್ಯದ ಮಾತ್ರೆಗಳನ್ನು ಆಕೆ ನುಂಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದೊಂದು ಅಂತಾರಾಷ್ಟ್ರೀಯ ಮಟ್ಟದ ಮಾದಕ ವಸ್ತು ಕಳ್ಳ ಸಾಗಾಣಿಕೆ ಜಾಲವಾಗಿದೆ. ಪ್ರಮುಖವಾಗಿ ಚೆನ್ನೈ, ಮುಂಬೈ, ದೆಹಲಿ ಮತ್ತು ಬೆಂಗಳೂರಿನಲ್ಲಿ ಹದ್ದಿನ ಕಣ್ಣಿಡಲಾಗಿದ್ದು, ಇಂತಹ ಕಳ್ಳಸಾಗಾಣೆಯನ್ನು ಪತ್ತೆಹಚ್ಚಲು ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts