More

  ಸಿಎಂ ಆಪ್ತ ಕಾರ್ಯದರ್ಶಿ ಸೋಗಿನಲ್ಲಿ ವಂಚಿಸಿದ್ದ ಅಪರಾಧಿಗೆ 3 ವರ್ಷ ಜೈಲು

  ಬೆಂಗಳೂರು: ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಸೋಗಿನಲ್ಲಿ ಬಿಡಿಎ ಸೈಟ್ ಕೊಡಿಸುವುದಾಗಿ 30.82 ಲಕ್ಷ ರೂ. ವಂಚಿಸಿದ್ದ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

  ಅಪರಾಧಿ ಜಾನ್ ಮೈಕೆಲ್ ಶಿಕ್ಷೆಗೆ ಒಳಗಾದವ. ತಾನು ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ, ಆಡಳಿತಾತ್ಮಕವಾಗಿ ಮತ್ತು ರಾಜಕೀಯವಾಗಿ ತುಂಬಾ ಪ್ರಭಾವ ಹೊಂದಿದ್ದೇನೆ ಎಂದು ಜಾನ್ ಮೈಕೆಲ್ ಹೇಳಿಕೊಂಡಿದ್ದ.

  2011ರಲ್ಲಿ 30.82 ಲಕ್ಷ ರೂ. ಪಡೆದು ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ಸೈಟ್ ಎಂದು ನಕಲಿ ದಾಖಲೆ ಸೃಷ್ಟಿಸಿ ವಿತರಿಸಿದ್ದರು. ಸೈಟ್ ಜಾಗಕ್ಕೆ ಹೋದಾಗ ಸಂತ್ರಸ್ತರಿಗೆ ಸತ್ಯಾಂಶ ತಿಳಿದು ಹಣ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿತ್ತು. ನೊಂದ ಸಂತ್ರಸ್ತರು, ರಾಮಮೂರ್ತಿನಗರ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲಾಗಿತ್ತು.

  ಮುಖ್ಯಮಂತ್ರಿ ಹೆಸರು ದುರ್ಬಳಕ್ಕೆ ಮಾಡಿಕೊಂಡ ಕಾರಣಕ್ಕೆ ಹೆಚ್ಚಿನ ತನಿಖೆ ಸಲುವಾಗಿ ಸಿಐಡಿಗೆ ಪ್ರಕರಣದ ತನಿಖೆಯನ್ನು ವರ್ಗಾವಣೆ ಮಾಡಲಾಗಿತ್ತು. ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡು ಜಾನ್ ಮೈಕೆಲ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 48ನೇ ಸಿಸಿಎಚ್ ನ್ಯಾಯಾಲಯ, ವಾದ-ಪ್ರತಿವಾದ ಆಲಿಸಿ ಜಾನ್ ಮೈಕೆಲ್ ಅಪರಾಧಿ ಎಂದು ೋಷಣೆ ಮಾಡಿ 3 ವರ್ಷ ಜೈಲು ಶಿಕ್ಷೆ ಮತ್ತು 44.10 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts