More

    ಕಾರಣವನ್ನೇ ಹೇಳದೆ ಮೂವರು ಸೋದರಿಯರ ಮದುವೆಯಾದವನಿಗೆ ‘ಕರ್ವಾ ಚೌತ್’ ಸಂಭ್ರಮ​

    ಉತ್ತರ ಭಾರತದಲ್ಲಿ ಗೃಹಿಣಿಯರು ತಮ್ಮ ಪತಿಯ ಒಳಿತಿಗಾಗಿ ಕರ್ವಾ ಚೌತ್​ ಹಬ್ಬವನ್ನು ಆಚರಿಸುವ ಪದ್ಧತಿಯಿದೆ. ಈಗಾಗಲೇ ಬಾಲಿವುಡ್ ನಟಿಯರು ಸೇರಿ ಸೆಲೆಬ್ರಿಟಿಗಳು ಹಬ್ಬವನ್ನು ಆಚರಿಸಿದ್ದಾರೆ. ಆದರೆ ಈ ಕೃಷ್ಣಾ ಎಂಬುವರಿಗೆ ತ್ರಿಬಲ್​ ಧಮಾಕಾ ನೋಡಿ…!

    ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ನಿವಾಸಿ ಕೃಷ್ಣಾ ಅವರಿಗೆ ಮೂವರು ಪತ್ನಿಯರು. ಪ್ರತಿವರ್ಷವೂ ಈ ಮೂವರೂ ಸೇರಿ ಕರ್ವಾ ಚೌತ್​ ಹಬ್ಬ ಆಚರಿಸಿ, ಪತಿಯ ಒಳಿತಿಗಾಗಿ ದೇವರ ಬಳಿ ಬೇಡುತ್ತಾರೆ.
    ಮೂವರೂ ಮಹಿಳೆಯರು ಸ್ವಂತ ಅಕ್ಕತಂಗಿಯರು. 12 ವರ್ಷಗಳ ಹಿಂದೆ ಒಬ್ಬನನ್ನೇ ವಿವಾಹವಾಗಿ, ಇಂದಿನವರೆಗೆ ಅನ್ಯೋನ್ಯವಾಗಿ ಜೀವನ ನಡೆಸಿಕೊಂಡು ಬಂದಿದ್ದಾರೆ. ಮೂವರಲ್ಲಿ ಪ್ರತಿಯೊಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಇವರೆಲ್ಲ ಒಟ್ಟಾಗಿ ಕಾಶಿರಾಮ್​ ಕಾಲನಿಯಲ್ಲಿ ವಾಸವಾಗಿದ್ದಾರೆ.

    ಇವರಿಗೆ ತಮ್ಮ ವಿವಾಹದ ಬಗ್ಗೆ ಮಾತನಾಡಲು ಧೈರ್ಯ, ಇಷ್ಟ ಇಲ್ಲ. ಆದರೆ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮೂವರು ಮಹಿಳೆಯರೂ ಪದವೀಧರರಾಗಿದ್ದು, ತಮ್ಮ ಮಕ್ಕಳನ್ನೂ ಚೆನ್ನಾಗಿ ಓದಿಸುತ್ತಿದ್ದಾರೆ. ಮೂವರನ್ನೂ ಒಬ್ಬನಿಗೇ ಕೊಡಲು ನಮಗೆ ಇಷ್ಟ ಇರಲಿಲ್ಲ. ಆದರೆ ಕೃಷ್ಣ ಯಾಕೆ ಮೂವರನ್ನೂ ಮದುವೆಯಾದ ಎಂಬುದು ಗೊತ್ತಿಲ್ಲ. ಇಲ್ಲಿನವರೆಗೆ ಕಾರಣವನ್ನೇ ಹೇಳಿಲ್ಲ ಎಂದು ಸಂಬಂಧಿಯೋರ್ವರು ತಿಳಿಸಿದ್ದಾರೆ. (ಏಜೆನ್ಸೀಸ್)

    80 ಶಿಕ್ಷಕರಿಗೆ ಕರೊನಾ; 84 ಶಾಲೆಗಳು ಮತ್ತೆ ಬಂದ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts