More

    ಕರೊನಾ ಇದೆಯೆಂದು ಮುಜುಗರ: ಪಿಯುಸಿ ಪರೀಕ್ಷೆಯಿಂದಲೇ ದೂರ!

    ಬಳ್ಳಾರಿ: ಜಿಲ್ಲೆಯಲ್ಲಿ ಮೂವರು ವಿದ್ಯಾರ್ಥಿಗಳು ಕರೊನಾ ಮುಜುಗರದಿಂದ ಪಿಯು ದ್ವಿತೀಯ ವರ್ಷದ ಇಂಗ್ಲಿಷ್ ಪರೀಕ್ಷೆಯಿಂದ ದೂರವುಳಿದರು!

    ಬಳ್ಳಾರಿಯ ಮೂವರು ಹಾಗೂ ಹೊಸಪೇಟೆಯ ಒಬ್ಬ ವಿದ್ಯಾರ್ಥಿ ಕ್ವಾರಂಟೈನ್‌ನಲ್ಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ, ಎನ್-95 ಮಾಸ್ಕ್ ಹಾಗೂ ಕೈಗವಸುಗಳನ್ನು ನೀಡಲಾಗಿದೆ. ಇದನ್ನೂ ಓದಿ: ಇಲ್ಲಿ ಯಾರನ್ನೂ ಉದ್ಧಾರ ಆಗೋಕೆ ಬಿಡಲ್ಲ …

    ಆದರೆ, ಹೊಸಪೇಟೆಯ ಒಬ್ಬ ಹಾಗೂ ಬಳ್ಳಾರಿಯ ಇಬ್ಬರು ವಿದ್ಯಾರ್ಥಿಗಳು ಕುಟುಂಬ ಸದಸ್ಯರಿಗೆ ಕರೊನಾ ಬಂದಿರುವುದು, ಇಲ್ಲವೇ ಕ್ವಾರಂಟೈನ್‌ನಲ್ಲಿರುವುದು ಸ್ನೇಹಿತರಿಗೆ ತಿಳಿಯುತ್ತದೆ ಮತ್ತು ಮಾಸ್ಕ್-ಕೈಗವಸು ಹಾಕಿಕೊಂಡು ಪರೀಕ್ಷೆ ಬರೆಯುವುದು ಕೂಡ ಕಷ್ಟ ಎಂಬ ಕಾರಣಕ್ಕೆ ಪರೀಕ್ಷೆ ಬರೆದಿಲ್ಲ. ಕ್ವಾರಂಟೈನ್‌ನಲ್ಲಿರುವ ಒಬ್ಬ ವಿದ್ಯಾರ್ಥಿ ಬಳ್ಳಾರಿಯ ಬೆಸ್ಟ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದಾನೆ.

    ಇನ್ನೊಂದೆಡೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಬೇವೂರು ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯೊಬ್ಬಳು ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಯನ್ನು ಪೂರ್ಣ ಬರೆಯದೆ ಅರ್ಧಕ್ಕೆ ಬಿಟ್ಟು ಹೋಗಿದ್ದಾಳೆ. ಎಲ್ಲರಂತೆ ಬೆಳಗ್ಗೆ ಪರೀಕ್ಷೆಗೆ ಹಾಜರಾಗಿದ್ದಾಳೆ. ಮೊದಲೇ ಹುಷಾರಿಲ್ಲದ ಕಾರಣ ಪರೀಕ್ಷೆ ಬರೆಯುವುದು ಬೇಡವೆಂದು ಕುಟುಂಬದವರು ತಿಳಿಸಿದ್ದರು. ಆದರೂ, ಹಾಜರಾಗಿದ್ದಾಳೆ. ಪರೀಕ್ಷೆ ಆರಂಭವಾಗಿ ಅರ್ಧ ಗಂಟೆ ಬಳಿಕ ಅಸ್ವಸ್ಥಳಾಗಿ, ಮನೆಗೆ ತೆರಳಿದ್ದಾಳೆ.

    ಇದನ್ನೂ ಓದಿ ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್​ ಸಿಂಗ್​; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ

    ಗಾಂಧಿ ಜಯಂತಿ ಸೇರಿ ಎಲ್ಲ ಜಯಂತಿಗಳ ರಜೆ ರದ್ದು ಮಾಡಲು ದೊರೆಸ್ವಾಮಿ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts