More

    ಉರುಳಿಬಿದ್ದ ಟ್ರಕ್​: ಮೂವರು ಮಹಿಳಾ ಕಾರ್ಮಿಕರ ಸಾವು, 12 ಮಂದಿಯ ಸ್ಥಿತಿ ಗಂಭೀರ

    ಮಹೊಬಾ (ಉತ್ತರ ಪ್ರದೇಶ): ಸೋಮವಾರ ತಡರಾತ್ರಿ ಉತ್ತರ ಪದೇಶದ ಝಾನ್ಸಿ-ಮಿರ್ಜಾಪುರ್​​ ಹೆದ್ದಾರಿಯಲ್ಲಿ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ ಒಂದು ಉರುಳಿಬಿದ್ದು ಮೂವರು ಮಹಿಳಾ ಕಾರ್ಮಿಕರು ಸಾವಿಗೀಡಾಗಿ, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಯಾರೂ ಊಹಿಸಿರದ ಗುಟ್ಟೊಂದನ್ನು ರಟ್ಟು ಮಾಡಿದ್ರೂ ಡೊನಾಲ್ಡ್​ ಟ್ರಂಪ್​…!

    ವಲಸೆ ಕಾರ್ಮಿಕರ ಗುಂಪೊಂದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಪೂರ್ವ ಉತ್ತರ ಪದೇಶದ ತಮ್ಮ ಗ್ರಾಮಗಳಿಗೆ ಕಾಲ್ನಡಿಗೆಯಲ್ಲಿ ಬರುವಾಗ ನಡುದಾರಿಯಲ್ಲಿ ಸಿಕ್ಕ ಟ್ರಕ್​ ಡ್ರೈವರ್​ ಡ್ರಾಪ್​ ಕೊಡುವುದಾಗಿ ಹತ್ತಿಸಿಕೊಂಡು ಉತ್ತರ ಪ್ರದೇಶದತ್ತ ಬರುವಾಗು ದುರ್ಘಟನೆ ಸಂಭವಿಸಿದೆ.

    ಲಾಕ್​ಡೌನ್​ ಆದಾಗಿನಿಂದ ಕೆಲಸವಿಲ್ಲದೇ ತಮ್ಮ ಊರುಗಳಿಗೆ ಮರುಳುವ ಪ್ರಯತ್ನದಲ್ಲಿ ಈವರೆಗೆ 50 ವಲಸೆ ಕಾರ್ಮಿಕರು ಕಳೆದು 10 ದಿನಗಳಲ್ಲಿ ಮೃತಪಟ್ಟಿದ್ದಾರೆ. ಕಳೆದ ಶನಿವಾರವಷ್ಟೇ 26 ಕಾರ್ಮಿಕರು ಅಪಘಾತದಲ್ಲಿ ಸಾವಿಗೀಡಾಗಿದ್ದರು. ಅಲ್ಲದೆ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಲಖನೌದಿಂದ 180 ಕಿ.ಮೀ. ದೂರದಲ್ಲಿರುವ ಔರೈಯಾ ಜಿಲ್ಲೆಯಲ್ಲಿ ಎರಡು ಟ್ರಕ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು.

    ಇದನ್ನೂ ಓದಿ: ಲಾಕ್​ಡೌನ್​​​ ವೇಳೆ ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದವ ಸಿಕ್ಕಿಬಿದ್ದಿದ್ದೇ ರೋಚಕ…!

    ಭೀಕರ ಅಪಘಾತಕ್ಕೆ ಇಡೀ ರಾಷ್ಟ್ರವೇ ಕಂಬನಿ ಮಿಡಿದಿತ್ತು. ಇದರಿಂದ ಅಂತಾರಾಜ್ಯ ಗಡಿಯನ್ನೇ ಸಿಎಂ ಯೋಗಿ ಆದಿತ್ಯನಾಥ್​ ಅವರು ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೆ, ಕಾಲ್ನಡಿಗೆ, ಟ್ರಕ್​, ಸೈಕಲ್​ನಲ್ಲಿ ತವರಿಗೆ ಮರಳುವವರನ್ನು ತಡೆದು ಅವರಿಗೆ ಆಶ್ರಯ ಮತ್ತು ಆಹಾರ ವ್ಯವಸ್ಥೆ ಮಾಡಿಕೊಡಿ ಎಂದು ಯೋಗಿ ಆದೇಶಿಸಿದ್ದಾರೆ. (ಏಜೆನ್ಸೀಸ್​)

    ಮೊಬೈಲ್ ರೀಚಾರ್ಜ್ ಹಣ ವಾಪಸ್ ಕೊಡುವ ಸೋಗಿನಲ್ಲಿ ಪೊಲೀಸ್ ಪೇದೆಗೂ ವಂಚಿಸಿದ ಸೈಬರ್ ಕಳ್ಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts