More

    ಕೆಲಸ ಕಳೆದುಕೊಂಡ ಮೂವರು ಸ್ನೇಹಿತರು ಹಣಕ್ಕಾಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದರು

    ನವದೆಹಲಿ: ಕೆಲಸ ಕಳೆದುಕೊಂಡ ಮೂವರು ಹಣಕ್ಕಾಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದಿದ್ದಾರೆ.

    ದೆಹಲಿಯಲ್ಲಿ ಘಟನೆ ನಡೆದಿದೆ. ಈ ಮೂವರು ಲಾಕ್​ಡೌನ್​​ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ಕೈಲಿದ್ದ ಹಣವೂ ಖಾಲಿಯಾಗಿತ್ತು. ಇದರಿಂದ ಮುಂದೇನು ಮಾಡಬೇಕೆಂದು ತೋಚದೆ ಪೊಲೀಸರಂತೆ ಸೋಗು ಹಾಕಿಕೊಂಡರು. ನಂತರ ಅಪರಿಚಿತರನ್ನು ಕಿಡ್ನ್ಯಾಪ್​ ಮಾಡಿ, ಅವರ ಕುಟುಂಬದಿಂದ ಹಣ ಕೀಳುವ ಪ್ರಯತ್ನ ಮಾಡಿದರು. ಆದರೆ ಅವರ ಮೊದಲ ಪ್ರಯತ್ನ ವಿಫಲವಾಯಿತು..ಹಣವೂ ಸಿಗಲಿಲ್ಲ…ಇವರು ನಿಜವಾದ ಪೊಲೀಸರ ಬಳಿ ಸಿಕ್ಕಿಬಿದ್ದರು.

    ಸ್ವಪ್ನಿಲ್​, ರವಿಶರ್ಮಾ ಮತ್ತು ಕೇಶವ್​ ಸೆಹಗಲ್​ ಎಂಬ ಮೂವರು ಸ್ನೇಹಿತರು ಪೊಲೀಸ್​ ಡ್ರೆಸ್​ ಹಾಕಿಕೊಂಡು, ವಾಕಿಟಾಕಿಯನ್ನೆಲ್ಲ ಇಟ್ಟುಕೊಂಡು ಪಕ್ಕಾ ಪೊಲೀಸರಂತೆ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದವರಂತೆ ಪೋಸ್​ ಕೊಡುತ್ತಿದ್ದರು.
    ಹಾಗೇ ವೆರ್ನಾ ಕಾರಿನಲ್ಲಿ ಬಂದ ಮಂದೀಪ್​ ಮತ್ತು ಜಗದೀಪ್​ ಎಂಬುವರನ್ನು ಚೆಕಿಂಗ್​ ಮಾಡುವ ನೆಪದಲ್ಲಿ ತಡೆದ ಆರೋಪಿಗಳು, ನಂತರ ಅವರನ್ನು ಅಪಹರಿಸಿದ್ದಾರೆ. ಕಾರನ್ನು ನೋಡಿ, ಇವರು ಶ್ರೀಮಂತರೇ ಇರಬಹುದು ಎಂದು ಅಪಹರಣ ಮಾಡಿದರು. ಇದೆಲ್ಲ ನಡೆದಿದ್ದು ನಜಾಫ್​ಗಡ್​ ಬಳಿ.

    ಹಾಗೇ ನಜಾಫ್​ಗಡ್​ ಬಳಿ ಇಬ್ಬರು ಕಾಣೆಯಾಗಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮರಾವನ್ನೂ ಪರಿಶೀಲನೆ ಮಾಡಿದ್ದಾರೆ. ಆಗ ಈ ಮೂವರೂ ಕಾರನ್ನು ನಿಲ್ಲಿಸಿದ್ದು, ನಂತರ ಅಪಹರಣ ಮಾಡಿದ್ದು ಗೊತ್ತಾಗಿದೆ. ತನಿಖೆಯ ನಂತರ ಸತ್ಯ ಬೆಳಕಿಗೆ ಬಂದಿದೆ. ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)

    ಆ.15ರಂದು ಸ್ಫೋಟಕ್ಕೆ ಸಂಚು ರೂಪಿಸಿದ್ದವನ ಬಂಧನ; ಸ್ಫೋಟಕ ವಶ; ಈತನಿಗಿತ್ತು ಐಸಿಸ್​ನೊಂದಿಗೆ ನೇರ ಸಂಪರ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts