More

    ದೆಹಲಿ, ಉತ್ತರ ಪ್ರದೇಶಗಳಲ್ಲಿ ಉಗ್ರ ದಾಳಿಗೆ ಸಂಚು ರೂಪಿಸಿದ ಐಎಸ್​ಐಎಸ್​: ಮೂವರು ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

    ನವದೆಹಲಿ: ದೆಹಲಿ-ಎನ್​ಸಿಆರ್, ಉತ್ತರ ಪ್ರದೇಶಗಳಲ್ಲಿ ಉಗ್ರ ದಾಳಿ ನಡೆಸಲು ಐಎಸ್​ಐಎಸ್ ಸಂಚು ರೂಪಿಸಿದೆ ಎಂಬ ಅಂಶ ಬಹಿರಂಗವಾಗಿದೆ.
    ಮಹತ್ವದ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರು ಮೂವರು ಉಗ್ರರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಈ ಆತಂಕಕಾರಿ ಅಂಶ ಹೊರಗೆ ಬಂದಿದೆ. ಮೂವರೂ ಉಗ್ರರು ಇಸ್ಲಾಮಿಕ್​ ಸ್ಟೇಟ್ ಇನ್ ಇರಾಕ್ ಆ್ಯಂಡ್ ಸಿರಿಯಾ ಅಥವಾ ಐಎಸ್​ಐಎಸ್​ಗೆ ಸೇರಿದವರು.

    ಬಂಧಿತರಲ್ಲಿ ಇಬ್ಬರು ಹಿಂದು ನಾಯಕ ಸುರೇಶ್ ಕುಮಾರ್ ಹತ್ಯೆ ಪ್ರಕರಣದ ಆರೋಪಿಗಳು. ಅವರಲ್ಲೊಬ್ಬ ತಮಿಳುನಾಡಿನಲ್ಲಿ ಹಿಂದು ನಾಯಕರೊಬ್ಬರ ಹತ್ಯೆ ಪ್ರಯತ್ನದ ಆರೋಪಿಯೂ ಹೌದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಉದ್ಯೋಗಾವಕಾಶ ಅರಸಿ ನೇಪಾಳಕ್ಕೆ ಹೋಗಿದ್ದರು. ಅಲ್ಲಿ ಪರಿಚಿತರಾದ ವಿದೇಶಿ ಮೂಲದವರೊಬ್ಬರು ಸೋಷಿಯಲ್ ಮೀಡಿಯಾ ಮೂಲಕ ಈ ಮೂವರನ್ನು ನಿಯಂತ್ರಿಸುತ್ತಿದ್ದರು. ಅವರ ಮೂಲಕ ದೆಹಲಿ-ಎನ್​ಸಿಆರ್, ಉತ್ತರ ಪ್ರದೇಶಗಳಲ್ಲಿ ಉಗ್ರ ದಾಳಿ ನಡೆಸಲು ಸ್ಕೆಚ್ ರೂಪಿಸಲಾಗಿತ್ತು.

    ಬಂಧಿತರನ್ನು ಖ್ವಾಜಾ ಮೊಯಿನುದ್ದೀನ್​, ಅಬ್ದುಲ್ ಸಮದ್, ಸೈಯದ್ ನವಾಜ್ ಎಂದು ಗುರುತಿಸಲಾಗಿದೆ. ಖ್ವಾಜಾ ಐಎಸ್​ಐಎಸ್​ನ ತಮಿಳುನಾಡು ಮೊಡ್ಯೂಲ್​ನ ಸದಸ್ಯನಾಗಿದ್ದು, ಐಎಸ್​ಐಎಸ್ ಸಂಬಂಧಿತ ಪ್ರಕರಣಗಳಲ್ಲಿ ಆರೋಪಿ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts