More

    ಪಿಜಿ ವಸತಿನಿಲಯದಲ್ಲಿ ಅಗ್ನಿ ಅವಘಡ: ಮೂವರು ವಿದ್ಯಾರ್ಥಿನಿಯರ ಸಾವು, ಕಟ್ಟಡದಿಂದ ಹಾರಿ ಇಬ್ಬರು ಪಾರು

    ಚಂಡೀಗಢ: ಪಿಜಿ ವಸತಿ ನಿಲಯದಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಮೂವರು ಯುವತಿಯರು ದುರಂತ ಸಾವಿಗೀಡಾಗಿರುವ ಘಟನೆ ಚಂಡೀಗಢದ 32ನೇ ಸೆಕ್ಟರ್​ನಲ್ಲಿ ನಡೆದಿರುವುದಾಗಿ ಜಿಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಶನಿವಾರ ತಿಳಿಸಿದೆ.

    ವಸತಿ ನಿಲಯದಲ್ಲಿ ಒಟ್ಟು 36 ವಿದ್ಯಾರ್ಥಿನಿಯರಿದ್ದರು. ಅಗ್ನಿ ಅವಘಡ ಸಂಭವಿಸಿದಾಗ ಬಹುತೇಕರು ಹೊರಗಡೆ ಬಂದಿದ್ದಾರೆ. ಆದರೆ, ದುರಾದೃಷ್ಟವಶಾತ್​ ಮೂವರು ವಿದ್ಯಾರ್ಥಿನಿಯರು ಸಾವಿಗೀಡಾಗಿದ್ದಾರೆ. ಸುಟ್ಟ ಗಾಯಗಳು ಮತ್ತು ಉಸಿರಾಟದ ತೊಂದರೆಯಿಂದಾಗಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ. ಮೂವರಲ್ಲಿ ಇಬ್ಬರು ಪಂಜಾಬ್​ ಮೂಲದವರಾಗಿದ್ದು, ಒಬ್ಬಳು ಹರಿಯಾಣದವಳು ಎಂದು ಹೇಳಲಾಗಿದೆ.

    ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಶೌಚಗೃಹದ ಕಿಟಕಿಯಿಂದ ಕೆಳಗೆ ಜಿಗಿದು ಪಾರಾಗಿದ್ದಾರೆ. ಆದರೂ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದಲ್ಲಿ ಹಲವು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ಈವರೆಗೂ ತಿಳಿದುಬಂದಿಲ್ಲ. ಆದರೆ, ಓರ್ವ ವಿದ್ಯಾರ್ಥಿನಿ ತನ್ನ ಲ್ಯಾಪ್​ಟಾಪ್​ ಅನ್ನು ಚಾರ್ಜಿಂಗ್​ನಲ್ಲಿ ಇಟ್ಟಿದ್ದಾಗ ಅಡಾಪ್ಟರ್​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಮೂವರು ವಿದ್ಯಾರ್ಥಿನಿಯರು 19-22 ವಯೋಮಾನದವರಾಗಿದ್ದು, ಅವರನ್ನು ಮುಸ್ಕಾನ್​, ರಿಯಾ ಮತ್ತು ಪ್ರಾಕ್ಷಿ ಎಂದು ಗುರುತಿಸಲಾಗಿದೆ. ಇವರು ವಸತಿ ನಿಯಲದ ಮೊದಲನೇ ಮಹಡಿಯಲ್ಲಿ ವಾಸವಿದ್ದರು ಎಂದು ಚಂಡೀಗಢದ ಪೊಲೀಸ್​ ವರಿಷ್ಠಾಧಿಕಾರಿ ವಿನೀತ್​ ಕುಮಾರ್​ ಮಾಹಿತಿ ನೀಡಿದ್ದಾರೆ.

    ವಸತಿ ನಿಲಯದ ಎತ್ತರ ಮಹಡಿಯನ್ನು ನಿಯಮ ಬಾಹಿರವಾಗಿ ನಿರ್ಮಿಸಲಾಗಿದೆ ಎಂದು ಇದೇ ವೇಳೆ ಪೊಲೀಸರು ತಿಳಿಸಿದ್ದು, ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts