More

    ಇಬ್ಬರು ಮಕ್ಕಳಿಗೆ ಮೂರು ಅಪ್ಪಂದಿರು; ಆ ಮಕ್ಕಳನ್ನು ಪಡೆಯೋದಕ್ಕೆ ಖರ್ಚು ಮಾಡಿದ್ದು 88 ಲಕ್ಷ ರೂಪಾಯಿ!

    ವಾಷಿಂಗ್ಟನ್​: ಸಲಿಂಗ ಪ್ರೇಮ ತಪ್ಪಲ್ಲ ಎಂದು ವಿವಿಧ ದೇಶಗಳು ಹೇಳಿವೆ. ಅವರು ಒಟ್ಟಾಗಿ ಬದುಕುವುದಕ್ಕೂ ಕಾನೂನಾತ್ಮಕವಾಗಿ ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ ಪ್ರೀತಿಸಿ ಒಟ್ಟಿಗೆ ಬದುಕುತ್ತಿರುವ ಮೂರು ಸಲಿಂಗಕಾಮಿಗಳ ಬದುಕಿನ ಹೋರಾಟದ ಕಥೆಯಿದು.

    ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಯಾನ್ ಜೆಂಕಿನ್ಸ್, ಅಲನ್ ಮೇಫೀಲ್ಡ್, ಜೆರೆಮಿ ಅಲೆನ್ ಹಾಡ್ಜಸ್ ಬದುಕುತ್ತಿದ್ದಾರೆ. ಇಯಾನ್​ ಮತ್ತು ಅಲನ್​ ಒಟ್ಟಿಗೆ ಬದುಕಲಾರಂಭಿಸಿದ 17 ವರ್ಷಗಳು ಕಳೆದಿವೆಯಂತೆ. ಇವರಿಬ್ಬರಿಗೆ ಮತ್ತೊಬ್ಬ ಜೋಡಿಯಾಗಿ ಜೆರೆಮಿ ಸೇರಿಕೊಂಡು ಎಂಟು ವರ್ಷಗಳು ಕಳೆದಿವೆ. ಇವರಿಗೆ ಒಂದು ಮುದ್ದಾದ ಹೆಣ್ಣು ಮಗು ಮತ್ತೊಂದು ಮುದ್ದಾದ ಗಂಡು ಮಗುವಿದೆ. ಅಂದ ಹಾಗೆ ಈ ಮಕ್ಕಳನ್ನು ಪಡೆಯುವುದಕ್ಕೆ ಈ ಮೂರು ಜನರ ಕುಟುಂಬ ಬರೋಬ್ಬರಿ 88 ಲಕ್ಷ ರೂಪಾಯಿ ಖರ್ಚು ಮಾಡಿದೆಯಂತೆ.

    ಇಬ್ಬರು ಬಾಡಿಗೆ ತಾಯಂದಿರು ಮತ್ತು ಎಗ್​ ಡೋನರ್​ಗಳ ಸಹಕಾರದಿಂದ ಈ ಕುಟುಂಬ ಮಕ್ಕಳನ್ನು ಪಡೆದುಕೊಂಡಿದೆ. ಈ ಮಕ್ಕಳನ್ನು ಪಡೆಯಲು ವೈದ್ಯಕೀಯವಾಗಿ ಸಾಕಷ್ಟು ಖರ್ಚಾಗಿದೆಯಂತೆ. ಹಾಗೆಯೇ ಮೂರೂ ಜನರನ್ನು ಅಪ್ಪ ಎಂದು ಗುರುತಿಸಲು ಕಾನೂನಾತ್ಮಕವಾಗಿ ಸಾಕಷ್ಟು ಹೋರಾಟ ಮಾಡಬೇಕಾಗಿ ಬಂದಿತಂತೆ. ಅದೆಲ್ಲ ಸೇರಿದರೆ ಖರ್ಚಿನ ಮೊತ್ತ 88 ಲಕ್ಷ ರೂಪಾಯಿ ಆಗಿದೆ. ಸಾಮಾಜಿಕವಾಗಿ ಮತ್ತು ಕಾನೂನಾತ್ಮಕವಾಗಿ ಸಾಕಷ್ಟು ಕಷ್ಟ ಪಟ್ಟಿರುವ ಈ ಕುಟುಂಬ ಇದೀಗ ಸಮಾಜಕ್ಕೆ ಮತ್ತೊಂದು ಕೊಡುಗೆ ನೀಡಿದೆ. ಇಯಾನ್​ ವೃತ್ತಿಯಲ್ಲಿ ಒಬ್ಬ ವೈದ್ಯನಾಗಿದ್ದು, ಪ್ರವೃತ್ತಿಯಲ್ಲಿ ಉತ್ತಮ ಬರಹಗಾರನಾಗಿದ್ದಾನೆ. ತಮ್ಮ ಜೀವನದ ನೋವಿನ ಮತ್ತು ಹೋರಾಟದ ಕಥೆಯನ್ನು ಒನ್​ ಬೇಬಿ ಅಂಡ್​ ಥ್ರೀ ಫಾದರ್​ ಹೆಸರಿನ ಪುಸ್ತಕ ಮಾಡಿ ಪ್ರಕಟಿಸಿದ್ದಾನೆ. ವಿಶ್ವದಲ್ಲೇ ಅತ್ಯಂತ ವಿಶೇಷ ಕುಟುಂಬವಾಗಿ ಈ ಕುಟುಂಬ ಹೊರಹೊಮ್ಮಿದೆ. (ಏಜೆನ್ಸೀಸ್​)

    ಬಿಜೆಪಿ ಸೇರಿದ ಮಿಥುನ್​ ಚಕ್ರವರ್ತಿಗೆ ನಕ್ಸಲ್​ ಪಟ್ಟ ಕೊಟ್ಟ ಟಿಎಂಸಿ!

    ದಿನೇಶ್​ ಕಲ್ಲಹಳ್ಳಿ ದೂರು ವಾಪಸ್​ ಪಡೆದಿದ್ದು ಏಕೆ? ಆ ಪತ್ರದಲ್ಲಿ ಏನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts