More

    ರಾಮಮಂಟಪ ಮುಳುಗಡೆಗೆ 3 ಅಡಿ ಬಾಕಿ

    ತೀರ್ಥಹಳ್ಳಿ : ಶುಕ್ರವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ತಾಲೂಕಿನಾದ್ಯಂತ ಎಲ್ಲ ನದಿಗಳೂ ತುಂಬಿ ಹರಿಯುತ್ತಿದೆ. ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಪಟ್ಟಣದ ತುಂಗಾ ತೂಗು ಸೇತುವೆಯ ಕಳಗೆ 79 ಅಡಿ ಮಟ್ಟದಲ್ಲಿ ನೀರು ಹರಿಯುತ್ತಿದೆ. ತುಂಗಾ ನದಿಯಲ್ಲಿರುವ ಐತಿಹಾಸಿಕ ರಾಮ ಮಂಟಪ ಮುಳುಗಡೆಗೆ ಕೇವಲ ೩ ಅಡಿ ಬಾಕಿ ಇದೆ. ಕಳೆದ ೨೪ ಗಂಟೆಗಳಲ್ಲಿ ತಾಲೂಕಿನಲ್ಲಿ 61.2 ಮಿಮೀ ಮಳೆಯಾಗಿದೆ. ಆದರೆ ಆಗುಂಬೆ ಸೇರಿದಂತೆ ತುಂಗಾ ನದಿಯ ಮೇಲ್ಭಾಗದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ನದಿಯಲ್ಲಿ ಒಂದೇ ದಿನ ಸುಮಾರು 5 ಅಡಿಯಷ್ಟು ನೀರಿನ ಪ್ರಮಾಣ ಹೆಚ್ಚಿದೆ. ಶನಿವಾರ ರಾತ್ರಿ ಸುರಿದ ಮಳೆಗೆ ಹೆದ್ದೂರು ಗ್ರಾಪಂ ವ್ಯಾಪ್ತಿಯ ಮುಂಡುವಳ್ಳಿ ಗ್ರಾಮದ ಹೊನ್ನಮ್ಮ ಎಂಬುವವರ ಮನೆಯ ಮಾಡು ಕುಸಿದಿದೆ. ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕುಂದ, ಕಲ್ಮನೆ ಭಾಗದಲ್ಲಿ ಮಾಲತಿ ನದಿ ದಡದ ತಗ್ಗು ಪ್ರದೇಶದಲ್ಲಿರುವ ಕೃಷಿ ಭೂಮಿಗೆ ಭಾನುವಾರ ನದಿ ನೀರು ನುಗ್ಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts