More

    ಆಂಗ್ಲ ಭಾಷೆ ಲಕ ತೆರವಿಗೆ 3 ದಿನಗಳ ಗಡುವು

    ಎನ್.ಆರ್.ಪುರ: ಆಂಗ್ಲ ಭಾಷೆಯ ಲಕ ತೆರವುಗೊಳಿಸಿ ಮೂರು ದಿನಗಳೊಳಗಾಗಿ ಕನ್ನಡ ಭಾಷೆ ಲಕ ಹಾಕಬೇಕೆಂದು ತಾಲೂಕು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್ ಹೇಳಿದರು.

    ಶನಿವಾರ ಕರವೇಯಿಂದ ಹಮ್ಮಿಕೊಂಡಿದ್ದ ಆಂಗ್ಲ ಭಾಷೆ ಫಲಕ ತೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಅಂಗಡಿಗಳ ಲಕ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು. ಕರ್ನಾಟಕದಲ್ಲಿ ಇರುವವರೆಲ್ಲರೂ ಕನ್ನಡಿಗರೇ. ಅನ್ಯ ಭಾಷೆ ಲಕ ತೆರವುಗೊಳಿಸದಿದ್ದರೆ ಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದರು.
    ಸರ್ಕಾರ ಮಾಡದ ಕಾರ್ಯವನ್ನು ಕರವೇ ಮಾಡುತ್ತಿದೆ. ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ಬಂಧಿಸಿದ್ದಲ್ಲದೆ, ಔಷಧ, ಊಟ ನೀಡದೆ ದೌರ್ಜನ್ಯ ನಡೆಸಿಕೊಳ್ಳುತ್ತಿದ್ದಾರೆ. ನಾರಾಯಣಗೌಡ ಅವರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ತಾಲೂಕು ಕರವೇ ಅಧ್ಯಕ್ಷ ಹರ್ಷ ಮಾತನಾಡಿ, ಶೇ.60-40ರ ಅನುಪಾತದಲ್ಲೇ ಕನ್ನಡ ಲಕ ಅಳವಡಿಸದಿದ್ದರೆ ಇತರ ಭಾಷೆಯ ಲಕಗಳನ್ನು ತೆರವುಗೊಳಿಸಲಾಗುವುದು ಎಂದರು.
    ಬಿ.ಎಚ್.ಕೈಮರದಿಂದ ಪ್ರವಾಸಿಮಂದಿರದವರೆಗೆ ನಂತರ ವಾಟರ್ ಟ್ಯಾಂಕ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ಮೂಲಕ ಕಾರ್ಯಕರ್ತರು ಸಾಗಿ ತಹಸೀಲ್ದಾರ್ ತನುಜಾ ಟಿ.ಸವದತ್ತಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಅಂಗಡಿಗಳಿಗೆ ತೆರಳಿ ಇತರ ಭಾಷೆಯ ಲಕವನ್ನು ಮೂರು ದಿನಗಳೊಳಗಾಗಿ ತೆರವುಗೊಳಿಸಿ ಕನ್ನಡ ಲಕ ಅಳವಡಿಸುವಂತೆ ಸೂಚಿಸಿದರು.
    ರಜಿ, ಸುಚಿತ್ರಾ, ಸುಜಾತಾ, ಭಾನು, ಸುಹೇಲ್ ಖಾನ್, ಸುದೀಪ್, ಮಂಜು, ವಿವೇಕ್, ಬಿನು, ವರ್ಗೀಸ್, ರಾಬರ್ಟ್, ಆಕಾಶ್ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts