More

    ಕಲಾ ವಿಭಾಗದಲ್ಲಿ ರೈತನ ಮಗ ಕರಿಗೌಡ ದಾಸನಗೌಡ್ರ ರಾಜ್ಯಕ್ಕೆ ಟಾಪರ್​

    ಬಳ್ಳಾರಿ: 2019-20ನೇ ಸಾಲಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಇಡೀ ರಾಜ್ಯಕ್ಕೆ ಟಾಪರ್​ ಆಗಿ ಕೃಷಿಕನ ಪುತ್ರ ಕರಿಗೌಡ ದಾಸನಗೌಡ್ರ ಹೊರಹೊಮ್ಮಿದ್ದಾರೆ.

    ಹೂವಿನಹಡಗಲಿ ತಾಲೂಕಿನ ಮಹಾಜನದಹಳ್ಳಿಯ ಕರಿಗೌಡ ಅವರು ಕೊಟ್ಟೂರಿನ ಇಂದು ಪಿಯು ಕಾಲೇಜು ವಿದ್ಯಾರ್ಥಿ. 600ಕ್ಕೆ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಇದನ್ನೂ ಓದಿರಿ ದ್ವಿತೀಯ ಪಿಯು ರಿಸಲ್ಟ್; ಹೆಣ್ಮಕ್ಳೇ ಸ್ಟ್ರಾಂಗ್​, ಉಡುಪಿ-ದಕ್ಷಿಣ ಕನ್ನಡ ಫಸ್ಟ್

    ಕರಿಗೌಡರ ತಂದೆ ಮೂರು ಎಕರೆ ಕೃಷಿ ಜಮೀನು ಹೊಂದಿದ್ದು, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಯುತ್ತಾರೆ. ರಜೆಯಲ್ಲಿ ಕರಿಗೌಡ ಕೂಡ ಕೃಷಿ ಕೆಲಸಕ್ಕೆ ಹೋಗುತ್ತಿದ್ದರು. ಇವರ ಅಕ್ಕ ಕೊಟ್ಟೂರಿನ ಗ್ರಾಮ ಲೆಕ್ಕಾಧಿಕಾರಿ. ಭಾವ ಪೊಲೀಸ್​. ಅಕ್ಕನ ಮನೆಯಿಂದಲೇ ಕರಿಗೌಡ ಕಾಲೇಜಿಗೆ ಹೋಗುತ್ತಿದ್ದರು.

    ಇದೇ ಸಂದರ್ಭದಲ್ಲಿ ಫಲಿತಾಂಶ ಕುರಿತು ವಿಜಯವಾಣಿ ಜತೆ ಸಂತಸ ಹಂಚಿಕೊಂಡ ಕರಿಗೌಡ, ‘ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಗುರಿ ಸಾಧನೆಗಾಗಿ ವಿಷಯಗಳನ್ನು ಇಷ್ಟಪಡುವ ಜತೆಗೆ ಕಟ್ಟಪಟ್ಟು ಓದಿದ್ದೆ’ ಎಂದು ಹೇಳಿದರು.

    ನಿತ್ಯರಾತ್ರಿ 11 ಗಂಟೆವರೆಗೆ ಓದುತ್ತಿದ್ದೆ. ಬೆಳಗ್ಗೆ ಎದ್ದು ಓದುವ ಅಭ್ಯಾಸ ಇರಲಿಲ್ಲ. ಕಾಲೇಜಿನಲ್ಲಿ ಆಯೋಜಿಸುತ್ತಿದ್ದ ಕಿರು ಪರೀಕ್ಷೆಗಳು, ಪ್ರೇರಣಾತ್ಮಕ ತರಗತಿಗಳಿಂದ ತುಂಬಾ ಅನುಕೂಲ ಆಯಿತು. ಕರೆಸ್ಪಾಂಡೆನ್ಸ್ ಮೂಲಕ ಬಿಎ ಓದಿ ಕೆಎಎಸ್ ಗೆ ತರಬೇತಿ ಪಡೆಯಲು ಬಯಸಿದ್ದೇನೆ ಎಂದು ತಿಳಿಸಿದರು. ಕರಿಗೌಡ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ ಶೇ.87 ಅಂಕ ಪಡೆದಿದ್ದರು.

    ಟಾಪ್​ 10: ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯು ಕಲಾ ವಿಭಾಗದ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಟಾಪ್​ 10 ಸ್ಥಾನ ಅಲಂಕರಿಸಿದ್ದಾರೆ. 2015ರಿಂದ ಇದೇ ಕಾಲೇಜಿನ ವಿದ್ಯಾರ್ಥಿಗಳೇ ರಾಜ್ಯಕ್ಕೆ ಟಾಪರ್​ಗಳಾಗಿ ಹೊರಹೊಮ್ಮುತ್ತಿದ್ದಾರೆ. 2015ರಲ್ಲಿ ಮೊದಲ ಎರಡು, 2016ರಲ್ಲಿ ಮೂರು, 2017ರಲ್ಲಿ ಐದು, 2018ರಲ್ಲಿ ಮೊದಲ ಎಂಟು ಸ್ಥಾನಗಳು ಇಂದು ಕಾಲೇಜಿನ ಪಾಲಾಗಿದ್ದವು. 2019 ಹಾಗೂ 2020ರಲ್ಲಿ ಎಲ್ಲ 10 ಸ್ಥಾನಗಳು ಈ ಕಾಲೇಜಿಗೇ ಲಭಿಸಿವೆ. ಈ ವರ್ಷ ಎಸ್.ಎಂ.ಸ್ವಾಮಿ (592 ಅಂಕ) 2ನೇ ಮತ್ತು ಮೊಹಮ್ಮದ್ ರಫೀಕ್ (592 ಅಂಕ) ಮೂರನೇ ಸ್ಥಾನ ಪಡೆದಿದ್ದಾರೆ.

    ಅಫಜಲಪುರ ತಾಪಂ ಅಧ್ಯಕ್ಷೆಯನ್ನೇ ವರಿಸಿದ ​ಉಪಾಧ್ಯಕ್ಷ, ಇನ್ಮುಂದೆ ಪತಿ-ಪತ್ನಿ ದರ್ಬಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts