More

    9 ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

    ಚಿತ್ರದುರ್ಗ: ಜಿಲ್ಲೆಯ 6 ತಾಲೂಕುಗಳ 23 ಕೇಂದ್ರಗಳಲ್ಲಿ ಮಾರ್ಚ್ 9ರಿಂದ 29ರವರೆಗೆ ನಡೆಯಲಿರುವ ಸೆಕೆಂಡ್‌ಪಿಯುಸಿ ವಾರ್ಷಿಕ ಪರೀಕ್ಷೆ 15 660 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ.

    ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆಗಳು ನಡೆಯಲಿದೆ. ಜಿಲ್ಲಾಡಳಿತ ಪ್ರತಿ ಕೇಂದ್ರಕ್ಕೆ ಜಿಲ್ಲಾಡಳಿತ ವೀಕ್ಷಕರನ್ನು ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳನ್ನು ಕೊಂಡೊಯ್ಯಲು ತಹಸೀಲ್ದಾರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಿದೆ. ಜಿಪಿಎಸ್ ಅಳವಡಿಸಿರುವ ವಾಹ ನಗಳಲ್ಲಿ ನಿಗದಿತ ಮಾರ್ಗ,ಸಮಯದೊಳಗೆ ಪೊಲೀಸ್ ರಕ್ಷಣೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ತಂಡಗಳು ಸಜ್ಜಾಗಿವೆ. ಇಲಾಖೆ ಸಿಟಿಂಗ್ ಹಾಗೂ ಫ್ಲೈಯಿಂಗ್ ಸ್ಕ್ವ್ಯಾಡ್‌ಗಳು ನೇಮಿಸಿದೆ.

    ಪರೀಕ್ಷಾ ಕೇಂದ್ರಗಳಿಗೆ ಪೋನ್,ಸ್ಮಾರ್ಟ್ ಫೋನ್,ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಮೇಲ್ವಿಚಾರಕರು,ಸಿ ಬ್ಬಂದಿ ಮೊಬೈಲ್ ಬಳಸುವಂತಿಲ್ಲ. ಮುಖ್ಯಸ್ಥರು ಪರೀಕ್ಷಾ ಕಾರ‌್ಯಕ್ಕೆ ಬಳಸಬೇಕು. ಕೇಂದ್ರಗಳ ಒಳಗೆ ಪಾಲಕರಿಗೆ ಪ್ರವೇಶವಿಲ್ಲ. ಪ್ರತಿ ಕೇಂದ್ರ ದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲೆಯ 128 ಕಾಲೇಜುಗಳು ಸಂಯೋಜಿತವಾಗಿವೆ.

    ಹಿಜಾಬ್ ನಿಷೇಧ
    ಪ್ರತಿ ವಿದ್ಯಾರ್ಥಿಯನ್ನು ತಪಾಸಣೆ ಮಾಡಲಾಗುತ್ತದೆ. ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ತಪಾಸಣಾ ಸ್ಥಳವಿರಲಿದೆ. ಸುಪ್ರಿಂಕೋರ್ಟ್ ಆ ದೇಶದಂತೆ ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಚಿತ್ರದುರ್ಗ ತಾಲೂಕಲ್ಲಿ 8 ಪರೀಕ್ಷಾ ಕೇಂದ್ರಗಳು ಚ ಳ್ಳಕೆರೆ-3,ಹಿರಿಯೂರು-4, ಹೊಸದುರ್ಗ-4,ಮೊಳಕಾಲ್ಮೂರು- 2 ಹಾಗೂ ಹೊಳಲ್ಕೆರೆ ತಾಲೂಕಲ್ಲಿ 2 ಪರೀಕ್ಷಾ ಕೇಂದ್ರಗಳಿವೆ ಎಂದು ಪಿಯು ಡಿಡಿ ರಾಜು ತಿಳಿಸಿದ್ದಾರೆ.

    ಕೋಟ್.
    ಪರೀಕ್ಷಾ ದಿನಗಳಂದು ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುವುದು. ಮಾರ್ಚ್ 10ರಂದು ನಾಯಕಹಟ್ಟಿ ಜಾತ್ರೆಗೆಂದು ವಿಶೇಷ ಬಸ್‌ಗಳನ್ನು ಬಿಡಲಾಗುತ್ತಿದ್ದರೂ,ಅಂದು ಬೆಳಗ್ಗೆ 11ರವರೆಗೆ ಹಾಗೂ ಮಧ್ಯಾಹ್ನ 2 ಗಂಟೆ ನಂತರ ದಲ್ಲಿ ವಿದ್ಯಾರ್ಥಿಗಳಿಗೆ ಅಡಚಣೆ ಉಂಟಾಗದಂತೆ ಬಸ್‌ಗಳನ್ನು ಓಡಿಸಲಾಗುವುದು.
    ಸಿದ್ದೇಶ್ ಹೆಬ್ಬಾಳ್,ವಿಭಾಗೀಯ ನಿಯಂತ್ರಕರು,ಕೆಎಸ್‌ಆರ್‌ಟಿಸಿ,ಚಿತ್ರದುರ್ಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts