More

    ದ್ವಿತೀಯ ಪಿಯು ಪರೀಕ್ಷೆ-1ರ ಕೀ ಉತ್ತರ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ

    ಬೆಂಗಳೂರು ಕರ್ನಾಟಕಾ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾ.1ರಿಂದ 18ರ ವರೆಗೆ ನಡೆದಿರುವ ದ್ವಿತೀಯ ಪಿಯುಸಿ ಪರೀಕ್ಷೆ-1ರ ವಿಷಯವಾರು ಮಾದರಿ ಉತ್ತರಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಉತ್ತರಗಳಿಗೆ ಮಾ.21ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

    ಮಾ.20ರಿಂದ 22ರ ವರೆಗೆ ನಡೆಯಲಿರುವ ಪರೀಕ್ಷೆಗಳ ಉತ್ತರಗಳನ್ನು ನಂತರ ಪ್ರಕಟಿಸಲಾಗುತ್ತದೆ. ದ್ವಂದ್ವಾರ್ಥ ಬರುವ ಪ್ರಶ್ನೆಗಳು, ಅಪೂರ್ಣ ಪ್ರಶ್ನೆಗಳು, ಪಠ್ಯದಲ್ಲಿ ಇಲ್ಲವೇ ಇರುವುದು, ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯಲ್ಲಿ ಬೇರೆ ಬೇರೆ ಅರ್ಥ ಬರುವಂತದ್ದು, ಒಂದು ಆಯ್ಕೆಗಿಂತ ಹೆಚ್ಚು ಆಯ್ಕೆಗಳು ಸರಿ ಇರುವ ಬಹು ಆಯ್ಕೆ ಪ್ರಶ್ನೆಗಳಿಗೆ ಆಕ್ಷೇಪಣೆ ಸಲ್ಲಿಸಬಹುದು.

    ಮಾ.19ರಿಂದ 21ರ ಸಂಜೆ 5 ಗಂಟೆಯವರೆಗೆ ಆಕ್ಷೇಪಣೆಗಳನ್ನು ಮಂಡಳಿ ವೆಬ್‌ಸೈಟ್ https://kseab.karnataka.gov.in/ ಸಲ್ಲಿಸಬಹುದು. ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts