More

    297 ಅಕ್ರಮ ಕಟ್ಟಡಗಳಿಗೆ ನೋಟಿಸ್

    ಕಾರವಾರ: ನಗರದಲ್ಲಿನ ಅಕ್ರಮ ಕಟ್ಟಡಗಳ ಸಾಲಿಗೆ ಮತ್ತೆ 297 ಆಸ್ತಿಗಳು ಸೇರ್ಪಡೆಯಾಗಿವೆ. ಅನುಮತಿ ಪಡೆಯದೆ ನಿರ್ವಿುಸಿದ ಹಲವು ವಾಣಿಜ್ಯ ಹಾಗೂ ವಸತಿ ಕಟ್ಟಡಗಳನ್ನು ಕಳೆದ ಎರಡು ತಿಂಗಳಲ್ಲಿ ನಗರಸಭೆ ಅಧಿಕಾರಿಗಳು ಗುರುತಿಸಿ ಅವುಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

    ಯಾವುದೇ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ವಣಕ್ಕೆ, ರಿಪೇರಿಗೆ, ವಿಸ್ತರಣೆಗೆ ನಗರಸಭೆಯ ಅನುಮತಿ ಬೇಕಿದೆ. ಆದರೆ, ಹಲವರು ಪ್ರಾರಂಭದಲ್ಲಿ ಪರವಾನಗಿ ಪತ್ರ ಪಡೆದು ನಂತರ ಇನ್ನೇಕೆ ಅನುಮತಿ ಎಂದು ನಿರ್ಲಕ್ಷ್ಯಂದ ವಿಸ್ತರಣೆ ಅಥವಾ ರಿಪೇರಿ ಮಾಡಿದ್ದರು. ಅಂಥವರಿಗೆ ಶಾಕ್ ಉಂಟಾಗಿದೆ. ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾಗ ಪೌರಾಯುಕ್ತೆಯಾಗಿದ್ದ ಪ್ರಿಯಾಂಗಾ ಎಂ. ಅವರಿಂದ ಈ ಕಠಿಣ ಕ್ರಮವಾಗಿದೆ. ಕೆಲ ವರ್ಷಗಳ ಹಿಂದೆ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರ (ಕೆಡಿಎ) 40 ಕ್ಕೂ ಹೆಚ್ಚು ಕಟ್ಟಡಗಳನ್ನು ಅಕ್ರಮ ಎಂದು ಗುರುತಿಸಿ ಕ್ರಮ ವಹಿಸುವಂತೆ ನಗರಸಭೆಗೆ ಮಾಹಿತಿ ನೀಡಿತ್ತು. ಆ ಕಟ್ಟಡಗಳ ಮೇಲೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಈಗ ಅಕ್ರಮಗಳ ಪಟ್ಟಿಗೆ ಮತ್ತಷ್ಟು ಕಟ್ಟಡಗಳು ಸೇರ್ಪಡೆಯಾದಂತಾಗಿದೆ.

    ದುಪ್ಪಟ್ಟು ಶುಲ್ಕ: ಪೌರಾಡಳಿತ ಕಾಯ್ದೆಯ ಸೆಕ್ಷನ್ 102ರಡಿ ಅಕ್ರಮ ಕಟ್ಟಡಗಳಿಂದ ದುಪ್ಪಟ್ಟು ಕರ ವಸೂಲಿ ಮಾಡಲು ಅವಕಾಶವಿದೆ. ಅದರಂತೆ ನಾವು ಅಂಥ ಕಟ್ಟಡ ಮಾಲೀಕರಿಂದ ಎರಡು ಪಟ್ಟು ಕರವನ್ನು ಆಕರಿಸಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ ಮಾಹಿತಿ ನೀಡಿದ್ದಾರೆ.

    ಅಪಾರ್ಟ್​ವೆುಂಟ್​ಗೇಕಿಲ್ಲ ನಿಯಮ…?: ನಗರದಲ್ಲಿ ಅನುಮತಿ ಪಡೆಯದೇ ಕಾಮಗಾರಿ ನಡೆಸಿದ ಸಣ್ಣ-ಪುಟ್ಟ ಕಟ್ಟಡಗಳನ್ನೂ ಗುರುತಿಸಿ ನೋಟಿಸ್ ನೀಡಲಾಗಿದೆ. ಆದರೆ, ಸಾಕಷ್ಟು ಬೃಹತ್ ಅಪಾರ್ಟ್​ವೆುಂಟ್​ಗಳು ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಹೆಚ್ಚುವರಿ ಮಹಡಿಗಳನ್ನು ನಿರ್ವಿುಸಿವೆ. ಆದರೂ ಅದರ ಬಗ್ಗೆ ನಗರಸಭೆ ಮೌನವೇಕೆ..? ಕೆಲ ವಾಣಿಜ್ಯ ಕಟ್ಟಡಗಳನ್ನು ರಸ್ತೆ, ರ್ಪಾಂಗ್ ಇಲ್ಲದೆ ಕಟ್ಟಿದ್ದರೂ ಅಧಿಕಾರಿಗಳು ಅವುಗಳ ವಿರುದ್ಧ ಕ್ರಮ ವಹಿಸದಿರುವುದರ ಹಿಂದಿನ ಗುಟ್ಟೇನು..? ಎಂದು ನಗರಸಭೆ ಕೆಲ ಸದಸ್ಯರು ಪ್ರಶ್ನಿಸಿದ್ದಾರೆ.

    ಸ್ವಂತ ಜಾಗದಲ್ಲಿಯೇ ಕಟ್ಟಡ ನಿರ್ವಣ, ರಿಪೇರಿ, ವಿಸ್ತರಣೆ ಮಾಡುವುದಿದ್ದರೂ ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಹಲವು ಸಕ್ರಮ ಕಟ್ಟಡಗಳು ಅನುಮತಿ ಪಡೆಯದೇ ರಿಪೇರಿ, ವಿಸ್ತರಣೆ ಮಾಡಿದ ಪರಿಣಾಮ ಅವು ಅಕ್ರಮವಾಗಿವೆ. ಆದರೆ, ಅವನ್ನು ಸಕ್ರಮಾತಿ ಮಾಡಲು ನಮ್ಮ ವ್ಯಾಪ್ತಿಯಲ್ಲಿ ಅವಕಾಶವಿಲ್ಲ. ಅವು ಅಕ್ರಮ ಕಟ್ಟಡಗಳಾಗೇ ಉಳಿಯಲಿವೆ. ಆರ್.ಪಿ.ನಾಯ್ಕ ನಗರಸಭೆ ಪೌರಾಯುಕ್ತ

    ನಗರಸಭೆ ಅಧಿಕಾರಿಗಳು ನಿಯಮಾನುಸಾರ ಅಕ್ರಮ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡಿದ್ದು ಸ್ವಾಗತಾರ್ಹ.ಆದರೆ, ಅವುಗಳಿಂದ ದ್ವಿಗುಣ ಕರ ವಸೂಲಾತಿ ಮಾಡಿದ್ದೇಕೆ..? ಈ ಕುರಿತು ನಗರಸಭೆಯಲ್ಲಿ ಠರಾವು ಮಾಡಲಾಗಿದೆಯೇ ಎಂದು ಕಳೆದ ಸಭೆಯಲ್ಲಿ ಮಾಹಿತಿ ಕೇಳಿದ್ದೆ. ಅಲ್ಲದೆ, ಅಪಾರ್ಟ್​ವೆುಂಟ್​ಗಳಿಗೆ ನೋಟಿಸ್ ನೀಡದೇ ಇರುವುದರ ಬಗ್ಗೆಯೂ ಕಳೆದ ಸಭೆಯಲ್ಲಿ ಆಕ್ಷೇಪಿಸಿದ್ದೆ. ಸಮರ್ಪಕ ಉತ್ತರ ಸಿಕ್ಕಿಲ್ಲ. ಮುಂದಿನ ಸಭೆಯಲ್ಲಾದರೂ ಸ್ಪಷ್ಟ ಉತ್ತರ ದೊರೆಯಲಿದೆಯೇ ಕಾದು ನೋಡಬೇಕಿದೆ. | ಸಂದೀಪ ತಳೇಕರ್ ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts