More

    27, ಮಾ.3 ರಂದು ವಾಹನ ನಿಲುಗಡೆಗೆ ನಿಷೇಧ

    ನಾಪೋಕ್ಲು : ಎಮ್ಮೆಮಾಡು ಮಖಾಂ ಉರುಸ್ ಫೆ.24 ರಿಂದ ನಡೆಯಲಿರುವ ಪ್ರಯುಕ್ತ ಫೆ.27 ಸೋಮವಾರ ಮತ್ತು ಮಾ.3 ಶುಕ್ರವಾರದಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 9ರವರೆಗೆ ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಶೇಖರ್ ಮನವಿ ಮಾಡಿದರು.
    ಉರುಸ್ ಪ್ರಯುಕ್ತ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಎಮ್ಮೆಮಾಡು ಉರುಸ್ ಕಾರ್ಯಕ್ರಮಕ್ಕೆ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಲಿದೆ. ಹೀಗಾಗಿ ಫೆ.27 ಮತ್ತು ಮಾ.3ರಂದು ವಾಹನಗಳ ನಿಲುಗಡೆಗೆ ಬದಲಿ ವ್ಯವಸ್ಥೆ ಮಾಡಲಾಗಿದ್ದು, ನೆಲಜಿ, ಕೊಳಕೇರಿ, ಕಕ್ಕಬ್ಬೆ ಭಾಗದಿಂದ ಸಂತೆಗೆ ಬರುವ ಜನರು ಹಳೆ ತಾಲೂಕು ಸರ್ಕಾರಿ ಶಾಲಾ ಮೈದಾನದಲ್ಲಿ ತಮ್ಮ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇತರ ಕಡೆಗಳಿಂದ ಬರುವ ಸಾರ್ವಜನಿಕರಿಗೆ ಬೇತು ರಸ್ತೆ, ಪೊಲೀಸ್ ಠಾಣಾ ಮೈದಾನ, ನಾಡ ಕಚೇರಿ ಆವರಣ, ಚೆರಿಯ ಪರಂಬು ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
    ಎಮ್ಮೆಮಾಡು ಜಮಾಯತ್ ಅಧ್ಯಕ್ಷ ಅಬೂಬಕರ್ ಸಖಾಫಿ, ಬಿಜೆಪಿ ಮುಖಂಡ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಸಭೆಯಲ್ಲಿ ಮಾತನಾಡಿದರು.
    ನಾಪೋಕ್ಲು ಪೊಲೀಸ್ ಠಾಣೆಯ ಪ್ರಭಾರ ಪಿಎಸ್ ಐ ಗೋಪಾಲಕೃಷ್ಣ, ನಾಪೋಕ್ಲು ಗ್ರಾ.ಪಂ. ಉಪಾಧ್ಯಕ್ಷ ಮಹಮ್ಮದ್, ಸದಸ್ಯರಾದ ಪ್ರತೀಪ್, ಎಮ್ಮೆಮಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಆಲಿ ಕುಟ್ಟಿ, ಎಮ್ಮೆಮಾಡು ಗ್ರಾ.ಪಂ. ಸದಸ್ಯರಾದ ಚಕ್ಕೇರ ಇಸ್ಮಾಯಿಲ್, ಗಫೂರ್, ಯೂಸುಫ್, ಕುಂಡಿಯೊಳಂಡ ರಮೇಶ್ ಮುದ್ದಯ್ಯ, ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಉಪಾಧ್ಯಕ್ಷ ನಾಗರಾಜ್, ಬಜರಂಗ ದಳದ ರಾಧಾಕೃಷ್ಣ ರೈ, ಪ್ರವೀಣ್, ಸಾಬಾ ತಿಮ್ಮಯ್ಯ, ಆಟೋ ಚಾಲಕರು, ವರ್ತಕರು, ಠಾಣೆಯ ಸಿಬ್ಬಂದಿ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts