More

    2660 ಕ್ವಿಂಟಾಲ್ ಬೀಜ, 2360 ಟನ್ ರಸಗೊಬ್ಬರ ದಾಸ್ತಾನು

    ಹಾನಗಲ್ಲ: ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಸಂಸದ ಶಿವಕುಮಾರ ಉದಾಸಿ ಸೋಮವಾರ ಬೊಮ್ಮನಹಳ್ಳಿಯಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಬೊಮ್ಮನಹಳ್ಳಿ, ಮಾರನಬೀಡ, ಬೆಳಗಾಲಪೇಟೆ, ಚಿಕ್ಕಾಂಶಿಹೊಸೂರ, ಅಕ್ಕಿಆಲೂರು, ತಿಳವಳ್ಳಿ ಮತ್ತು ಆಡೂರು ಗ್ರಾಮಗಳಲ್ಲಿ ರಿಯಾಯತಿ ದರದಲ್ಲಿ ಭತ್ತ, ಸೋಯಾಬಿನ್, ಗೋವಿನಜೋಳ ಹಾಗೂ ಶೆಂಗಾ ಬೀಜಗಳನ್ನು ವಿತರಿಸಲಾಗುತ್ತದೆ. ಒಟ್ಟು 7150 ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆಯಿದೆ. 2660 ಕ್ವಿಂಟಾಲ್ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ತಾಲೂಕಿನಲ್ಲಿ 16700 ಹೆಕ್ಟೇರ್ ಗೋವಿನಜೋಳ, 20,600 ಹೆಕ್ಟೇರ್ ಭತ್ತ, 2700 ಹೆಕ್ಟೇರ್ ಸೋಯಾಬಿನ್, 450 ಹೆಕ್ಟೇರ್ ಶೇಂಗಾ, 2500 ಹೆಕ್ಟೇರ್ ಕಬ್ಬು ಮತ್ತು 6000 ಹೆಕ್ಟೇರ್ ಹತ್ತಿ ಬಿತ್ತನೆಯ ಗುರಿ ಹೊಂದಲಾಗಿದೆ. ತಾಲೂಕಿನಲ್ಲಿ 2360 ಟನ್ ರಸಗೊಬ್ಬರ ದಾಸ್ತಾನು ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ಹೆಚ್ಚು ಶುಂಠಿ ಬೆಳೆಯುತ್ತಿದ್ದು, ಬೆಳೆ ವಿಮೆ ಯೋಜನೆಯಡಿ ಈ ಬೆಳೆ ಪರಿಗಣಿಸುವಂತೆ ಕೃಷಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಬೊಮ್ಮನಹಳ್ಳಿಯಲ್ಲಿರುವ ಕೃಷಿ ಇಲಾಖೆಯ ಕಟ್ಟಡದ ಆವರಣದಲ್ಲಿ ಗೋದಾಮು, ಆವರಣ ಗೋಡೆ ನಿರ್ವಣಕ್ಕೆ ಮಂಜೂರಾತಿ ದೊರಕಿದೆ ಎಂದರು.

    ಜಿಲ್ಲೆಯಲ್ಲಿ ಒಟ್ಟು 19 ರೈತ ಸಂಪರ್ಕ ಕೇಂದ್ರಗಳಲ್ಲಿ 13000 ಕ್ವಿಂಟಾಲ್ ಬೀಜಗಳನ್ನು ಸಂಗ್ರಹಿಸಿಡಲಾಗಿದೆ. ಜಿಲ್ಲೆಯಲ್ಲಿ 45 ವಿತರಣೆ ಕೇಂದ್ರಗಳಿದ್ದು, ಸದ್ಯ 19 ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 45,000 ಮೆ. ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಹಾವೇರಿ ಜಿಲ್ಲೆಯಲ್ಲಿ 1,84,223 ರೈತ ಫಲಾನುಭವಿಗಳು, ಗದಗ ಜಿಲ್ಲೆಯಲ್ಲಿ 1,31,701 ಫಲಾನುಭವಿಗಳು ಹಣ ಪಡೆದಿದ್ದಾರೆ. ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ 162 ಕಿ.ಮೀ. ರಸ್ತೆ ಕಾಮಗಾರಿಯ ನಿರ್ವಣಕ್ಕೆ 130 ಕೋಟಿ ರೂ.ಗಳಿಗೆ ಮಂಜೂರಾತಿ ದೊರಕಿದೆ. ಜಿಲ್ಲೆಯಲ್ಲಿ ನಕಲಿ ಬೀಜಗಳನ್ನು ಖರೀದಿಸಿ ಆರ್ಥಿಕ ಸಮಸ್ಯೆಗೆ ಒಳಗಾಗದೇ ಮಾನ್ಯತೆ ಪಡೆದ ಬಿತ್ತನೆ ಬೀಜ ಖರೀದಿಸಬೇಕು ಎಂದರು. ತಾಪಂ ಸದಸ್ಯ ಶಂಕ್ರಣ್ಣ ಪ್ಯಾಟಿ, ಜಿ.ಪಂ. ಮಾಜಿ ಸದಸ್ಯರಾದ ಪದ್ಮನಾಭ ಕುಂದಾಪುರ, ರಾಜಣ್ಣ ಪಟ್ಟಣದ, ರಾಜು ಗೌಳಿ, ನಿಂಗಪ್ಪ ಗೊಬ್ಬೇರ, ಯಲ್ಲಪ್ಪ ಮಂಡಕ್ಕಿ, ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ ಕಡ್ಲೇರ, ಕೃಷಿ ಅಧಿಕಾರಿ ಪ್ರಿಯಾ ಬೆಟಗೇರಿ, ಕೃಷಿ ಕಾರ್ವಿುಕ ರೈತ ಸಂಘದ ಅಧ್ಯಕ್ಷ ಎಂ.ಎಸ್. ಪಾಟೀಲ, ರವಿ ಕಲಾಲ, ಲೋಕೇಶಪ್ಪ ಹೊಳಲದ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts