More

    ರಾಜಧಾನಿಯ 260 ಕೇಂದ್ರಗಳಲ್ಲಿ 24 ಗಂಟೆಗಳೂ ಕರೊನಾ ಲಸಿಕೆ ಲಭ್ಯ

    ನವದೆಹಲಿ : ಕರೊನಾ ಲಸಿಕೆ ಅಭಿಯಾನವನ್ನು ಹೆಚ್ಚಿನ ವೇಗದಲ್ಲಿ ಪೂರೈಸಲು ದೆಹಲಿ ಸರ್ಕಾರ ಮುಂದಾಗಿದೆ. ಹೀಗಾಗಿ ನಾಳೆಯಿಂದ ರಾಷ್ಟ್ರದ ರಾಜಧಾನಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಮೂರನೇ ಒಂದು ಭಾಗದಷ್ಟು ಲಸಿಕಾ ಘಟಕಗಳಲ್ಲಿ ಸಾರ್ವಜನಿಕರಿಗೆ 24 ಗಂಟೆಗಳೂ ಕರೊನಾ ಲಸಿಕೆ ಲಭ್ಯವಾಗಲಿದೆ.

    ಎರಡು ವಾರಗಳ ಹಿಂದೆ, ದೆಹಲಿ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ 6 ಲಸಿಕೆ ನೀಡುವ ಘಟಕಗಳನ್ನು ತೆರೆದು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಕರೊನಾ ಲಸಿಕೆ ನೀಡುವಂತೆ ಆದೇಶಿಸಿತ್ತು. ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಲಸಿಕಾ ಘಟಕಗಳಲ್ಲಿ ಮೂರನೇ ಒಂದು ಭಾಗದಷ್ಟು ಘಟಕಗಳನ್ನು ರಾತ್ರಿ 9 ರಿಂದ ಬೆಳಿಗ್ಗೆ 9 ರವರೆಗೂ ತೆರೆದಿಡಿ ಎಂದು ದೆಹಲಿಯ ಆರೋಗ್ಯ ಇಲಾಖೆ ಸಹ ಕಾರ್ಯದರ್ಶಿ ಎಸ್.ಸುನಿಲ್ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಲಸಿಕೆ : 7 ಕೋಟಿ ಡೋಸ್​ಗಳ ಸಾಧನೆ

    ದೆಹಲಿಯ ಆಸ್ಪತ್ರೆಗಳಲ್ಲಿ ಒಟ್ಟು 782 ಲಸಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಆದೇಶದ ಪ್ರಕಾರ 260 ಕೇಂದ್ರಗಳಲ್ಲಿ ಅಹೋರಾತ್ರಿ ಲಸಿಕಾ ಅಭಿಯಾನ ನಡೆಯಲಿದೆ. ಹೀಗೆ ಲಸಿಕೆ ನೀಡುವ ಕಾಲಾವಧಿಯನ್ನು ಹೆಚ್ಚಿಸುವುದರೊಂದಿಗೆ, ಸಮುದಾಯ ಕೇಂದ್ರಗಳಲ್ಲಿ ಮತ್ತು ಶಾಲೆಗಳಲ್ಲಿ ಹೊಸ ಲಸಿಕಾ ಕೇಂದ್ರಗಳನ್ನು ತೆರೆಯುವ ಬಗ್ಗೆಯೂ ದೆಹಲಿ ಸರ್ಕಾರ ಚಿಂತಿಸುತ್ತಿದೆ ಎನ್ನಲಾಗಿದೆ.

    ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆ ನೀಡುವ ಅವಕಾಶ ಕಲ್ಪಿಸಲಾದ ಏಪ್ರಿಲ್ 1 ನೇ ತಾರೀಖಿನಿಂದ ದೆಹಲಿಯಲ್ಲಿ ಪ್ರತಿದಿನ 64,000 ಡೋಸ್​ಗಳನ್ನು ನೀಡಲಾಗುತ್ತಿದೆ. ದೆಹಲಿಯಲ್ಲಿ ಸುಮಾರು 6.5 ಮಿಲಿಯನ್ ಜನರು 45 ವರ್ಷ ಮೇಲ್ಪಟ್ಟ ಗುಂಪಿಗೆ ಸೇರಿದವರಾಗಿದ್ದಾರೆ ಎಂದು ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ. (ಏಜೆನ್ಸೀಸ್)

    90 ಮತದಾರರಿದ್ದ ಬೂತ್​ನಲ್ಲಿ 171 ಮತ ಚಲಾವಣೆ !

    ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ, ಚೇನಬ್ ಬ್ರಿಡ್ಜ್​​ನ ಆರ್ಚ್​ ರೆಡಿ

    ಭ್ರಷ್ಟಾಚಾರ ಆರೋಪ : ಮಹಾ ಗೃಹ ಸಚಿವರ ವಿರುದ್ಧ ಸಿಬಿಐ ತನಿಖೆ ಆದೇಶಿಸಿದ ಹೈಕೋರ್ಟ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts