More

    26ರಂದು ಸಿದ್ಧಾರ್ಥ ಹೃದಯ ಕೇಂದ್ರ ಆರಂಭ

    ತುಮಕೂರು: ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ‘ಸಿದ್ಧಾರ್ಥ ಹೃದಯ ಕೇಂದ್ರ’ ಸ್ಥಾಪಿಸಿದ್ದು ಅ.26ರಿಂದ ಸೇವೆಗೆ ಲಭ್ಯವಾಗಲಿದೆ.

    ನಗರದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಡಾ.ಜಿ.ಪರಮೇಶ್ವರ್, ಭಾರತದಲ್ಲಿ ಹೃದಯ ರೋಗದಿಂದ ಸಾವಿನ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರಿಗೆ ನೆರವಾಗಲೆಂದು ಅತ್ಯಾಧುನಿಕ ಹೃದಯ ತಪಾಸಣಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.

    ಹೃದಯ ತಜ್ಞ ಡಾ.ತಮೀಮ್ ನೇತೃತ್ವದ ಕಾರ್ಡಿಯಾಕ್ ಪ್ರಾಂಟಿಡಾ ಸಂಸ್ಥೆ ಸಹಯೋಗದಲ್ಲಿ ಸಿದ್ಧಾರ್ಥ ಕಾರ್ಡಿಯೊ ಸೆಂಟರ್ ಆರಂಭಿಸಲಾಗುತ್ತಿದೆ, ಶಸಚಿಕಿತ್ಸೆಯ ಕೇಂದ್ರ ಕೂಡ ಶ್ರೀದಲ್ಲೇ ಆರಂಭಿಸಲಿದ್ದೇವೆ, ಬೆಂಗಳೂರು, ದಾವಣಗೆರೆ ಅವಲಂಭಿಸಿರುವ ಜನರಿಗೆ ತುಮಕೂರಿನಲ್ಲಿ ಸೇವೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬೆಂಗಳೂರಿನ ಖಾಸಗಿ ಆಸ್ಪತ್ರೆ ದರಕ್ಕಿಂತ ಕಡಿಮೆ ದರದಲ್ಲಿ ನಾವು ಸೇವೆ ನೀಡುವ ಚಿಂತನೆದೆ, ಆಯುಷ್ಮಾನ್ ಭಾರತ್ ಹಾಗೂ ವಿಮೆ, ಇಎಸ್‌ಐ ವ್ಯಾಪ್ತಿಗೆ ಒಳಪಡುತ್ತಿದ್ದು ಜನೊಪಯೋಗಿಯಾಗಲಿದೆ ಎಂದು ಭರವಸೆ ನೀಡಿದರು.

    ಸಂಸ್ಥೆ ಆರಂಭವಾಗಿ 32 ವರ್ಷ ಕಳೆದಿದ್ದು, ನಾವು ಎಲೆ ಮಾರೆಯ ಕಾಯಂತೆ ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆ ಮಾಡಿಕೊಂಡು ಬಂದಿದ್ದೇವೆ. ಡಾ.ಎಚ್.ಎಂ.ಗಂಗಾಧರಯ್ಯ, ಡಾ.ಜಿ.ಶಿವಪ್ರಕಾಶ್ ಈ ಸಂಸ್ಥೆಯ ಏಳ್ಗೆಗೆ ದುಡಿದಿದ್ದಾರೆ ಎಂದು ಸ್ಮರಿಸಿದರು. 150 ಜನ ವಿದ್ಯಾರ್ಥಿಗಳು, 50 ಪಿಜಿ ಹಾಗೂ 100 ನರ್ಸಿಂಗ್ ವಿದ್ಯಾರ್ಥಿಗಳು ಪ್ರತಿವರ್ಷ ಓದಿ ಹೊರಗೆ ಬರುತ್ತಿದ್ದು ಈ ವರೆಗೆ 5 ಸಾವಿರು ವದ್ಯರು ನಮ್ಮ ಸಂಸ್ಥೆಯ ಉತ್ಪನ್ನವಾಗಿದ್ದು ನಮ್ಮಕೊಡುಗೆ ಎಂದರು.

    ಜನರಲ್ ಮೆಡಿಸಿನ್, ಸರ್ರಿ, ಒಬಿಜಿ, ಆರ್ಥೊಪಿಡಿಕ್, ರೇಡಿಯಾಲಜಿ, ಡನಕಾಲಜಿ ಹಾಗೂ ಇತರೆ ವಿಷಯಗಳಲ್ಲಿ ಪಿಜಿ ಇದೆ, 200ಕ್ಕೂ ಹೆಚ್ಚು ವದ್ಯರಿಂದ ಜನರಿಗೂ ಚಿಕಿತ್ಸೆ ಲಭ್ಯವಾಗುತ್ತಿದೆ. ಸಂಸ್ಥೆ ವಾಣಿಜ್ಯ ಉದ್ದೇಶ ಹೊಂದ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಜನರಿಗೆ ಶೋಷಣೆಯಾಗಬಾರದು ಎಂದು ನಿರ್ಧರಿಸಿದ್ದೇವೆ ಎಂದರು.

    ರೇಡಿಯಾಲಜಿ ವಿಭಾಗವನ್ನು ಅತ್ಯುನ್ನತ ದರ್ಜೆಯ ಸೇವೆ ನೀಡಲಾಗುತ್ತಿದೆ, ಕರೊನಾ ಪತ್ತೆಗೆ ಒಂದು ಕೋಟಿ ರೂ. ವೆಚ್ಚದ ಲ್ಯಾಬೋರೇಟರಿ ಆರಂಭಿಸಲಾಗಿದೆ ಎಂದರು, ಪ್ರತಿನಿತ್ಯ ಮುನ್ನೂರು ಸ್ಯಾಂಪಲ್ಸೃ್ ಪರೀಕ್ಷೆ ನಡೆಸಲಾಗುತ್ತಿದೆ, ಸರ್ಕಾರದ ದರ ಮಾತ್ರ ಪಡೆಯಲಾಗುತ್ತಿದೆ ಎಂದು ತಿಳಿಸಿದರು. ಕಾರ್ಡಿಯಕ್ ಪ್ರೊಂಟಿಡಾ ಸಂಸ್ಥೆಯ ಡಾ.ತಮೀಮ್ ಅಹ್ಮದ್, ಪ್ರಾಚಾರ್ಯ ಡಾ.ಶ್ರೆನಿವಾಸ್, ಸಿಇಒ ದೇವದಾಸ್, ಡಾ.ಪ್ರಭಾಕರ್ ಇದ್ದರು.

    ಆಸ್ಪತ್ರೆಯಲ್ಲಿ ಅತ್ಯುನ್ನತ ಸೇವೆ: ಆಸ್ಪತ್ರೆಯಲ್ಲಿ ಎಂಟು ಹಾಸಿಗೆಯ ಲೇಟೆಸ್ಟ್ ಐಸಿಯು ಆರಂಭಿಸಲಾಗಿದ್ದು, ಜನರು ಬಳಸಿಕೊಳ್ಳಬಹುದು. ಭವಿಷ್ಯದಲ್ಲಿ ಅಗತ್ಯಕ್ಕೆ ತಕ್ಕಂತೆ ಸೇವೆ ವಿಸ್ತರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿದಿನ 7 ಲಕ್ಷ ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಕರೊನಾ ನಂತರ ಇದರ ಸಂಖ್ಯೆ ಹೆಚ್ಚಾಗುತ್ತಿದೆ, ಈ ಸಮಸ್ಯೆ ಬಗ್ಗೆ ಗಂಭೀರವಾಗಿ ಯೋಚಿಸಿ ನಮ್ಮ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಗೆ ಅತ್ಯುನ್ನತ ಸೇವೆ ಆರಂಭಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts