More

    250 ಎಕರೆ ಹೆಚ್ಚುವರಿ ಭೂಮಿ ಸ್ವಾಧೀನಕ್ಕೆ ಕ್ರಮ | ಕಲಾದಗಿಯಲ್ಲಿ ಯುಕೆಪಿ ವಿಶೇಷ ಗ್ರಾಮಸಭೆ

    ಕಲಾದಗಿ: ಗ್ರಾಮಸ್ಥರ ಬೇಡಿಕೆಯಂತೆ ಕಲಾದಗಿ ಗ್ರಾಮದ ಪುನರ್ವಸತಿಗೆ ಹೆಚ್ಚುವರಿಯಾಗಿ ಬೇಕಾಗುವ 250 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಸರ್ಕಾರದ ಅನುಮೋದನೆಗಾಗಿ ಕಳಿಸಲಾಗುವುದು ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಮತ್ತು ಪುನರ್ವಸತಿ ಅಧಿಕಾರಿ ಎಸ್.ವೈ.ದೊಡಮನಿ ಭರವಸೆ ನೀಡಿದರು.

    ಗ್ರಾಮದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಗ್ರಾಮ ಸಭೆಯಲ್ಲಿ ಅಹವಾಲು ಆಲಿಸಿ ಅವರು ಮಾತನಾಡಿದರು.
    ಕಲಾದಗಿ ಪುನರ್ವಸತಿ ಕೇಂದ್ರಕ್ಕೆ ಗ್ರಾಮವನ್ನು ಸಮರ್ಪಕವಾಗಿ ಸ್ಥಳಾಂತರಿಸಲು, ಸಂತ್ರಸ್ತರಿಗೆ ಪೂರಕ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಲು ಇಲಾಖೆ ಬದ್ಧವಾಗಿದೆ. ನಮ್ಮ ಹಂತದಲ್ಲಿರುವ ಮುಳುಗಡೆ ಸಮಸ್ಯೆಗಳನ್ನು ಕೂಡಲೇ ನಾವೇ ಬಗೆಹರಿಸುತ್ತೇವೆ. ನಮಗೆ ಮೀರಿದ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಯುಕೆಪಿಯ ಇಇ ವಿ.ಜಿ.ಮಿಕ್ಕಲ್ ಮಾತನಾಡಿ, ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರು ಮನೆ ಕಟ್ಟಿಕೊಳ್ಳಲು ಬೇಕಾಗುವ ನೀರಿನ ವ್ಯವಸ್ಥೆ, ರಸ್ತೆ, ವಿದ್ಯುತ್ ಸೇರಿ ಇನ್ನಿತರ ಮೂಲಸೌಕರ್ಯಗಳನ್ನು ಕೂಡಲೇ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

    ಸಭೆಯಲ್ಲಿ ಗ್ರಾಮದ ಸಂತ್ರಸ್ತರ ವಿವಿಧ ಸಮಸ್ಯೆಗಳಿಗೆ ಅಧಿಕಾರಿಗಳು ಉತ್ತರಿಸಿ, ಯಾವುದೇ ಸಂತ್ರಸ್ತರಿಗೂ ಅನ್ಯಾಯವಾಗದಂತೆ ಕ್ರಮ ವಹಿಸಲಾಗುವುದು. ನಿಮ್ಮ ಸಮಸ್ಯೆ ಏನೇ ಇದ್ದರೂ ಅದನ್ನು ಅರ್ಜಿ ನೀಡುವುದರ ಮೂಲಕ ನಮ್ಮ ಗಮನಕ್ಕೆ ತನ್ನಿ. ಯುಕೆಪಿ ನಿಯಮದಂತೆ ಅವುಗಳನ್ನು ಬಗೆಹರಿಸಲಾಗವುದು ಎಂದು ಭರವಸೆ ನೀಡಿದರು.

    ಗ್ರಾಮದ ಮುಖಂಡರಾದ ಎಸ್.ಬಿ.ಅಂಗಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಜಮೀರಹ್ಮದ್ ಜಮಾದಾರ, ಸದಸ್ಯ ಪಕೀರಪ್ಪ ಮಾದರ, ಮುಳುಗಡೆ ಹೋರಾಟ ಸಮಿತಿ ಅಧ್ಯಕ್ಷ ಜೆ.ಡಿ.ಚೌಧರಿ, ಮುಖಂಡರಾದ ಶಿವಣ್ಣ ವಾಘ, ಸಲೀಂಶೇಖ, ಎಇಇ ಎಂ.ಜಿ.ಕೆಂದೊಳಿ, ಇಇ ವಿ.ಜಿ.ಮಿಕ್ಕಲ್, ಪಿಡಿಒ ಸಿ.ಎಚ್.ಪವಾರ ವೇದಿಕೆಯಲ್ಲಿದ್ದರು. ಯುಕೆಪಿಯ ವಿ.ಎಚ್.ಸಂಕಣ್ಣವರ, ಎನ್.ಪಿ.ಕರಡಿ, ಡಿ.ಆರ್.ನದಾಫ್, ಪ್ರವೀಣ ಈಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts