More

    25 ಹೊಸ ರೆಮ್​ಡೆಸಿವಿರ್ ಉತ್ಪಾದನಾ ಘಟಕಗಳು ; ದಿನಕ್ಕೆ 3 ಲಕ್ಷ ವಯಲ್ ಗುರಿ !

    ನವದೆಹಲಿ : ದೇಶದಲ್ಲಿ ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ರೆಮ್ಡೆಸಿವಿರ್​ ಇಂಜೆಕ್ಷನ್​ಗಳ ಉತ್ಪಾದನೆಯನ್ನು ದುಪ್ಪಟ್ಟು ಪ್ರಮಾಣಕ್ಕಿಂತ ಹೆಚ್ಚಿಸಲಾಗಿದೆ. ಶೀಘ್ರದಲ್ಲೇ ದಿನವೊಂದಕ್ಕೆ 3 ಲಕ್ಷ ರೆಮ್ಡೆಸಿವಿರ್​​ನ ವಯಲ್​​ಗಳನ್ನು ಉತ್ಪಾದಿಸುವ ಸಾಮರ್ಥ್ಯ ಸಾಧಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನಸೂಖ್ ಮಾಂಡವೀಯ ಹೇಳಿದ್ದಾರೆ.

    ಏಪ್ರಿಲ್ 12 ರ ನಂತರದಲ್ಲಿ ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ರೆಮ್ಡೆಸಿವಿರ್​ ಇಂಜೆಕ್ಷನ್​ಗಳನ್ನು ಉತ್ಪಾದಿಸಲು 25 ಹೊಸ ಉತ್ಪಾದನಾ ಘಟಕಗಳನ್ನು ಅನುಮೋದಿಸಲಾಗಿದೆ. ಈ ಮುನ್ನ ತಿಂಗಳಿಗೆ 40 ಲಕ್ಷ ವಯಲ್​ಗಳ ಉತ್ಪಾದನೆಯಾಗುತ್ತಿತ್ತು. ಅದೇ ಈಗ 90 ಲಕ್ಷಕ್ಕೂ ಹೆಚ್ಚು ವಯಲ್​ಗಳ ಉತ್ಪಾದನಾ ಸಾಮರ್ಥ್ಯ ಸೃಷ್ಟಿಸಲಾಗಿದೆ ಎಂದಿದ್ದಾರೆ.

    ಕರೊನಾ ರೋಗಿಗಳಿಗೆ ಅಗತ್ಯವಾದ ಈ ಔಷಧವನ್ನು ಪೂರೈಕೆ ಮಾಡುವಲ್ಲಿ ನಾವು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ ಎಂದು ಮಾಂಡವೀಯ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts