More

    ಆಶಾ ಪ್ರಭಾಕರ ಕೋರೆಗೆ ಸಹಕಾರ ರತ್ನ ಪ್ರಶಸ್ತಿ

    ಬೆಳಗಾವಿ: ಆಟೋ ನಗರದ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ-2022 ಕಾರ್ಯಕ್ರಮದಲ್ಲಿ, ಬೆಳಗಾವಿ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಅವರಿಗೆ ‘ಸಹಕಾರ ರತ್ನ ಪ್ರಶಸ್ತಿ ಹಾಗೂ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್‌ಗೆ ಅತ್ಯುತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

    ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ಅನ್ನು 25 ವರ್ಷಗಳಲ್ಲಿ ಕಟ್ಟಿ ಬೆಳೆಸಿದ ಶ್ರೇಯಸ್ಸು ಆಶಾ ಕೋರೆ ಅವರಿಗೆ ಸಲ್ಲುತ್ತದೆ. ಗುಣಾತ್ಮಕ ಸೇವೆಯಿಂದ ಬ್ಯಾಂಕ್ ಸಾವಿರಾರು ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ. ಸಹಕಾರಿ ತತ್ತ್ವಗಳ ಆಧಾರ ಮೇಲೆ ಇಂದಿನ ಎಲ್ಲ ಅಗತ್ಯತೆಗಳನ್ನು ಹೊಂದಿದ್ದು, ಗ್ರಾಹಕರ ಬೇಕು-ಬೇಡಿಕೆಗಳನ್ನು ಪೂರೈಸಿದೆ. ತನ್ನ ಪಾರದರ್ಶಕ ಸೇವೆಯಿಂದ ಜನಾನುರಾಗಿಯಾಗಿದೆ. ಈ ನಿಟ್ಟಿನಲ್ಲಿ ಆಶಾ ಪ್ರಭಾಕರ ಕೋರೆ ಅವರ ಕೊಡುಗೆ ಅನುಪಮ. ಅವರ ಅವಿರತ ಪ್ರಯತ್ನದ ಫಲವಾಗಿ ರಾಜ್ಯಮಟ್ಟದಲ್ಲಿಯೂ ಅತ್ಯುತ್ತಮ ಸಹಕಾರಿ ಮಹಿಳಾ ಬ್ಯಾಂಕ್ ಎಂಬ ಅಭಿದಾನಕ್ಕೂ ಭಾಜನವಾಗಿದೆ. ಆಶಾ ಕೋರೆ ಅವರಿಗೆ ಲಭಿಸಿರುವ ಸಹಕಾರ ರತ್ನ ಪ್ರಶಸ್ತಿಗೆ ರಾಣಿ ಚನ್ನಮ್ಮ ಬ್ಯಾಂಕ್‌ನ ಸರ್ವ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
    ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಜಗದೀಶ ಕವಟಗಿಮಠ, ಡಿ.ಟಿ.ಪಾಟೀಲ , ರಾಜೇಶ್ವರಿ ಸಂಬರಗಿಮಠ, ಆಶಾ ಕೋರೆ, ರತ್ನಪ್ರಭಾ ಬೆಲ್ಲದ, ಪೂಜಾ ಸಾಧುನವರ, ಕೀರ್ತಿ ಮೆಟಗುಡ್ಡ, ಸುವರ್ಣಲತಾ ಬನಸೀಡೆ, ದೀಪಾ ಮುನವಳ್ಳಿ, ಬೇನಾ ಆಚಾರ, ಅರುಂದತಿ ಪಟ್ಟೇದ, ರೂಪಾ ಮುನವಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts