More

    25 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶ

    ಧಾರವಾಡ: ಅರಣ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು 25 ಲಕ್ಷ ರೂ. ಮೌಲ್ಯದ ಶ್ರೀಗಂಧದ ಕಟ್ಟಿಗೆ ಹಾಗೂ ಕಾರ್, ಬೈಕ್ ವಶಪಡಿಸಿಕೊಂಡು ನಾಲ್ವರನ್ನು ಗುರುವಾರ ಬಂಧಿಸಿದೆ.

    ಚಿಕ್ಕಮಗಳೂರ ಜಿಲ್ಲೆಯ ಕರಗದ್ದೆಯ ಗುರುಮೂರ್ತಿ, ಹಾವೇರಿ ಜಿಲ್ಲೆ ಹೊಸೂರಿನ ಭೀಮಪ್ಪ ಯಲ್ಲಪ್ಪ ಸುಣಗಾರ, ಗದಗ ಜಿಲ್ಲೆಯ ಮುಗಳಿಯ ಮುದುಕಪ್ಪ ಪಡೆಪ್ಪ ಪೂಜೇರಿ ಮತ್ತು ಹಿರಿಯಪ್ಪ ಕರಿಯಪ್ಪ ಹಿರೇಮನಿ ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

    ಆರೋಪಿಗಳು ಶ್ರೀಗಂಧವನ್ನು ಉತ್ತರ ಕನ್ನಡ ಜಿಲ್ಲೆಯಿಂದ ಧಾರವಾಡ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸುಮಾರು 250 ಕೆಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಾರಿಯಾಗಿರುವ ಮೂವರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.

    ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಆರ್.ಎಸ್. ಉಪ್ಪಾರ, ಅರಣ್ಯ ರಕ್ಷಕರಾದ ಎಂ.ಎಂ. ತಲ್ಲೂರ, ಪಿ.ಡಿ. ಮಣಕೂರ, ಸಿಬ್ಬಂದಿ ವಿಠ್ಠಲ ಜೋನಿ, ರಘು ಕುರಿಯವರ, ರಂಗಪ್ಪ ಕೋಳಿ, ಕಲ್ಲಪ್ಪ ಕೆಂಗಾರ, ಚಾಂದಬಾಷಾ ಮುಲ್ಲಾ, ಬಸಪ್ಪ ಕರಡಿ, ನವೀನ ಕ್ಯಾರಕಟ್ಟಿ, ಗವಿಸ್ವಾಮಿ, ಎಸ್. ಶರೂನ್, ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts