More

    ಮೋದಿ-ಯೋಗಿ ಬಿಟ್ಟರೆ ಇನ್ಯಾರು?; 25 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಖರ ಹಿಂದೂವಾದಿಗಳೇ ಅಭ್ಯರ್ಥಿಗಳು!

    ಚಿಕ್ಕಮಗಳೂರು: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖ ಮೂರೂ ರಾಷ್ಟ್ರೀಯ ಪಕ್ಷಗಳಲ್ಲಿ ಭಾರಿ ಚಟುವಟಿಕೆ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್​​ನಲ್ಲಿ ಈಗಾಗಲೇ ಚುರುಕಿನ ಬೆಳವಣಿಗೆ ನಡೆಯುತ್ತಿದೆ. ಅದೇ ರೀತಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್​ ಕೂಡ ಚುರುಕಾಗಿದ್ದಾರೆ.

    25 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಲು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್​ ಮುಂದಾಗಿದ್ದಾರೆ. ಹಿಂದೂಗಳನ್ನು ರಕ್ಷಿಸುವ ಸಲುವಾಗಿ 25 ಪ್ರಖರ ಹಿಂದುತ್ವವಾದಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿರುವುದನ್ನು ಅವರು ಘೋಷಿಸಿದ್ದಾರೆ. ಈ ಮೂಲಕ ದತ್ತಪೀಠ ಮುಕ್ತಿ, ಗೋಹತ್ಯೆ ನಿಷೇಧ, ಮತಾಂತರ ತಡೆ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಜತೆಗೆ ಲವ್​ ಜಿಹಾದ್​ ತೊಲಗಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

    ದತ್ತಪೀಠಕ್ಕೆ ಭೇಟಿ ಕೊಟ್ಟು ಇಂದು ಸುದ್ದಿಗಾರರ ಜತೆ ಮಾತನಾಡಿದ ಮುತಾಲಿಕ್, ಬಿಜೆಪಿ ಹುಟ್ಟಿದ್ದೇ ಹಿಂದುತ್ವಕ್ಕಾಗಿ, ಪ್ರಾಮಾಣಿಕತೆಗಾಗಿ.. ಬಿಜೆಪಿಯವರು 25 ವರ್ಷಗಳಿಂದ ದತ್ತಪೀಠ ಹೋರಾಟದ ಲಾಭ ಪಡೆದಿದ್ದಾರೆ. ಮುಂದಿನ ವರ್ಷ ದತ್ತಪೀಠದ ಅಭಿಯಾನ ಕೊನೆಯಾಗಲಿದೆ ಎಂದಿದ್ದಾರೆ.

    ಲೋಕಸಭೆ-ವಿಧಾನಸಭೆಗಳಲ್ಲಿ ಹಿಂದುಗಳ ರಕ್ಷಣೆಗೆ ಮೋದಿ-ಯೋಗಿ ಬಿಟ್ಟರೆ ಹಿಂದೂಗಳ ಉಳಿವಿಗಾಗಿ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಹಿಂದೂ ಕಾರ್ಯಕರ್ತರು ಕೊಲೆಯಾಗಿದ್ದಾರೆ, ಹಿಂದುತ್ವದ ಹೆಸರಲ್ಲಿ ಗೆದ್ದವರು ಹಿಂದೂಗಳ ರಕ್ಷಣೆ ಮಾಡಲು ಆಗಲಿಲ್ಲ. ಹಾಗಾಗಿ ಪ್ರಖರ ಹಿಂದೂವಾದಿಗಳು, ಸ್ವಾಮೀಜಿಗಳು ರಾಜಕೀಯ ಪ್ರವೇಶ ಮಾಡಿ ಹಿಂದುತ್ವ ಉಳಿಸುತ್ತೇವೆ ಎಂಬುದಾಗಿ ಮುತಾಲಿಕ್ ಘೋಷಿಸಿದ್ದಾರೆ.

    ಮೋದಿ-ಯೋಗಿ ಬಿಟ್ಟರೆ ಇನ್ಯಾರು?; 25 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಖರ ಹಿಂದೂವಾದಿಗಳೇ ಅಭ್ಯರ್ಥಿಗಳು!

    ಯಂತ್ರಕ್ಕೆ ಸೀರೆ ಸಿಲುಕಿ ಪ್ರಾಣ ಕಳ್ಕೊಂಡ ಮಹಿಳೆ; ಗೋವಿನಜೋಳ ರಾಶಿ ಮಷಿನ್​ಗೆ ಸಿಕ್ಕಿ ದೇಹ ಛಿದ್ರ..

    ಪೊಲೀಸ್ ಮನೆಗೇ ಹೊಕ್ಕ ಕಳ್ಳರು; ಪರಾರಿ ಆಗುವಾಗ ಅಡ್ಡಬಂದ ಎಎಸ್​ಐ ಪುತ್ರನಿಗೆ ಗುಂಡೇಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts