More

    ಆರ್ಯನ್​ ಖಾನ್​ ಕೇಸಲ್ಲಿ 25 ಕೋಟಿ ರೂ. ವಸೂಲಿ ಆರೋಪ; ಎನ್​ಸಿಬಿ ಅಧಿಕಾರಿ ವಿರುದ್ಧ ತನಿಖೆ ಆರಂಭ

    ಮುಂಬೈ: ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನಲ್ಲಿ ಶಾರುಖ್​ ಖಾನ್​ ಪುತ್ರನನ್ನು ಬಂಧಿಸಿದ ನಂತರ ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಅಧಿಕಾರಿ ಸಮೀರ್ ವಾಂಖೇಡೆ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಇದೀಗ ಎನ್​ಸಿಬಿ ವಿಜಿಲೆನ್ಸ್​ ತನಿಖೆ ನಡೆಸುತ್ತಿದೆ.

    ಡ್ರಗ್ಸ್​ ದಾಳಿ ಕೇಸಿನಲ್ಲಿ ಸ್ವತಂತ್ರ ಸಾಕ್ಷಿಯಾಗಿರುವ ಪ್ರಭಾಕರ್​ ಸೈಲ್​ 25 ಕೋಟಿ ರೂಪಾಯಿ ವಸೂಲಿ ದಂಧೆ ನಡೆಯುತ್ತಿದ್ದು, ಎನ್​ಸಿಬಿ ವಲಯ ನಿರ್ದೇಶಕರೂ ಪ್ರಕರಣದ ತನಿಖಾಧಿಕಾರಿಯೂ ಆದ ವಾಂಖೇಡೆ ಅವರು ಅದರ ಭಾಗವಾಗಿದ್ದಾರೆ ಎಂದು ಭಾನುವಾರ ಅಫಿಡೆವಿಟ್​​ನಲ್ಲಿ ಹೇಳಿದ್ದರು. ತನಿಖಾಧಿಕಾರಿಗಳು ತಮ್ಮಿಂದ ಖಾಲಿ ಕಾಗದಗಳ ಮೇಲೆ ಸಹಿ ಪಡೆದಿದ್ದಾರೆ ಎಂದೂ ಆರೋಪಿಸಿದ್ದರು.

    ಇದನ್ನೂ ಓದಿ: ಮುಂಬೈ ಡ್ರಗ್ಸ್​ ಕೇಸ್​: ‘ನನ್ನನ್ನು ಟಾರ್ಗೆಟ್​ ಮಾಡ್ತಿದಾರೆ, ಬೆದರಿಕೆ ಹಾಕ್ತಿದಾರೆ’ ಎಂದ ಎನ್​ಸಿಬಿ ಅಧಿಕಾರಿ

    ಎನ್​ಸಿಬಿಯ ಉತ್ತರ ಭಾಗದ ಡೆಪ್ಯುಟಿ ಡೈರೆಕ್ಟರ್​ ಜನರಲ್​(ಡಿಡಿಜಿ) ಗ್ಯಾನೇಶ್ವರ್​ ಸಿಂಗ್​ ಅವರ ನೇತೃತ್ವದಲ್ಲಿ ಈ ಭ್ರಷ್ಟಾಚಾರದ ಆರೋಪದ ತನಿಖೆ ಆರಂಭವಾಗಿದೆ. “ಸಾರ್ವಜನಿಕವಾಗಿ ಲಭ್ಯವಿರುವ ಅಫಿಡೆವಿಟ್​​ ಮತ್ತು ಸೌತ್​ ವೆಸ್ಟ್​ ರೀಜನ್​ ಡಿಡಿಜಿ ಅವರಿಂದ ಬಂದ ವರದಿಯ ಆಧಾರದ ಮೇಲೆ ನಾವು ವಿಜಿಲೆನ್ಸ್​ ಎಂಕ್ವೈರಿ ಆರಂಭಿಸಿದ್ದೇವೆ” ಎಂದು ಮುಂಬೈ ತಲುಪಿರುವ ಸಿಂಗ್​ ಹೇಳಿದ್ದಾರೆ.

    ಸಮೀರ್​ ವಾಂಖೇಡೆ ಅವರು ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನ ಮುಖ್ಯಸ್ಥರಾಗಿ ಮುಂದುವರಿಯುವರೇ ಎಂಬ ಪ್ರಶ್ನೆಗೆ, “ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಈಗಿನ್ನೂ ತನಿಖೆ ಆರಂಭಿಸಿದ್ದೇವೆ. ಮೊದಲು ಆರೋಪಗಳನ್ನು ತನಿಖೆ ಮಾಡೋಣ” ಎಂದಿದ್ದಾರೆ. ಇದೇ ಹಿನ್ನೆಲೆಯಲ್ಲಿ ದೆಹಲಿ ತಲುಪಿದ್ದಾರೆ ಎನ್ನಲಾದ ವಾಂಖೇಡೆ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದು, ತಮ್ಮನ್ನು ದುರುದ್ದೇಶಪೂರ್ವಕವಾಗಿ ಟಾರ್ಗೆಟ್​ ಮಾಡಲಾಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್)

    ಇಂದು ಹೈಕೋರ್ಟಲ್ಲಿ ಶಾರುಖ್​ ಪುತ್ರನ ಜಾಮೀನು ಪ್ರಕರಣ; ಮಾಜಿ ಅಟೋರ್ನಿ ಜನರಲ್​ ವಕಾಲತ್ತು

    ಇನ್ನು ರಾಜ್ಯದಲ್ಲಿ ಹಿಂಗಾರು ಮಳೆ ಶುರು… 2 ದಿನ ನಿರಂತರ ವರ್ಷಧಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts