More

    ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆಗಾಗಿ 25 ದೇಶಗಳು ಕ್ಯೂನಲ್ಲಿವೆ

    ವಿಜಯವಾಡ: ಕರೊನಾ ಲಸಿಕಾ ಅಭಿಯಾನದ ಮೊದಲನೇ ಹಂತ ಆರಂಭಿಸಿರುವ ಭಾರತದಲ್ಲಿ ಹಲವರು ಲಸಿಕೆಯ ಬಗ್ಗೆ ಪ್ರಶ್ನೆ ಎತ್ತುತ್ತಾ ಚರ್ಚೆ ಮಾಡುತ್ತಿದ್ದಾರೆ. ಆದರೆ, ಅದೇ ಮೇಡ್ ಇನ್ ಇಂಡಿಯಾ ಲಸಿಕೆಗಳಿಗಾಗಿ ಜಗತ್ತಿನ 25 ದೇಶಗಳು ಸರತಿಯಲ್ಲಿ ಕಾಯುತ್ತಿವೆ. ಈ ಅಧಿಕೃತ ಮಾಹಿತಿಯನ್ನು ಭಾರತದ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ನೀಡಿದ್ದಾರೆ.

    ಭಾರತವು ಈವರೆಗೂ 15 ದೇಶಗಳಿಗೆ ಕರೊನಾ ಲಸಿಕೆಯನ್ನು ಪೂರೈಕೆ ಮಾಡಿದ್ದು, ಲಸಿಕೆ ಪಡೆಯಲು ಇನ್ನೂ 25 ದೇಶಗಳು ಪ್ರಯತ್ನಿಸುತ್ತಿವೆ ಎಂದು ಸಚಿವ ಜೈಶಂಕರ್ ಶನಿವಾರ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ರೀತಿಯಾಗಿ ಲಸಿಕೆಗಳನ್ನು ಒದಗಿಸುತ್ತಿರುವುದು ಭಾರತಕ್ಕೆ ವಿಶ್ವದ ನಕ್ಷೆಯಲ್ಲಿ ಉತ್ತಮ ಸ್ಥಾನಮಾನ ಕೊಟ್ಟಿದೆ ಎಂದಿದ್ದಾರೆ.

    ಇದನ್ನೂ ಓದಿ: ಪಾಕಿಸ್ತಾನದ ಜನರಿಗೂ ತಲುಪಲಿದೆ ಭಾರತದ ಕರೊನಾ ಲಸಿಕೆ

    ಭಾರತದಿಂದ ಲಸಿಕೆ ಪಡೆಯಲು ಮೂರು ಬಗೆಯ ದೇಶಗಳು ಉತ್ಸುಕವಾಗಿವೆ – ಬಡರಾಷ್ಟ್ರಗಳು, ಬೆಲೆಯ ಬಗ್ಗೆ ಸೂಕ್ಷ್ವತೆ ಹೊಂದಿರುವ ರಾಷ್ಟ್ರಗಳು ಮತ್ತು ಲಸಿಕೆ ತಯಾರಿಸುತ್ತಿರುವ ಫಾರ್ಮ ಕಂಪೆನಿಗಳೊಂದಿಗೆ ನೇರವಾಗಿ ವ್ಯವಹರಿಸುತ್ತಿರುವ ಇತರ ರಾಷ್ಟ್ರಗಳು. ಕೆಲವು ಬಡದೇಶಗಳಿಗೆ ಗ್ರ್ಯಾಂಟ್ ರೀತಿಯಾಗಿ ಲಸಿಕೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು, ಮತ್ತೆ ಕೆಲವು ದೇಶಗಳು ಸರ್ಕಾರವು ಲಸಿಕೆ ಕಂಪೆನಿಗಳಿಗೆ ನೀಡುತ್ತಿರುವ ಬೆಲೆಯಲ್ಲೇ ಖರೀದಿಸಲು ಬಯಸುತ್ತಿವೆ. ಇನ್ನು ಕೆಲವು ದೇಶಗಳು ಲಸಿಕೆ ತಯಾರಿಸುತ್ತಿರುವ ಭಾರತೀಯ ಕಂಪೆನಿಗಳೊಂದಿಗೆ ನೇರ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂದು ಜೈಶಂಕರ್ ವಿವರಿಸಿದ್ದಾರೆ.

    ಕೋವಿಡ್ ಹಿನ್ನೆಲೆಯಲ್ಲಿ ಜನರು ನಮ್ಮ ಔಷಧಗಳನ್ನು ನಂಬುತ್ತಿರುವುದು, ಖರೀದಿಸುತ್ತಿರುವುದು ಭಾರತಕ್ಕೆ ಔಷಧ ಕ್ಷೇತ್ರದ ಬೃಹತ್ ಶಕ್ತಿಯಾಗಿ ಹೊರಹೊಮ್ಮುವ ಅವಕಾಶವನ್ನು ನೀಡಿದೆ. ಆಯುಷ್ಮಾನ್ ಭಾರತ್ ಕಾರ್ಯಕ್ರಮವೂ ನಡೆಯುತ್ತಿರುವ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಉತ್ಪಾದನೆಗೆ ಇರುವ ಅವಕಾಶವನ್ನು ಕಂಡುಕೊಳ್ಳಬೇಕು. ಭಾರತ ‘ಐಟಿ ಪವರ್’ ಆದಂತೆಯೇ ‘ಫಾರ್ಮ ಪವರ್’ ಮತ್ತು ‘ಮೆಡಿಕಲ್ ಪವರ್’ ಆಗಲು ಸಾಧ್ಯವಿದೆ ಎಂದಿದ್ದಾರೆ.

    ಇದನ್ನೂ ಓದಿ: ‘ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನಕ್ಕಾಗಿ ಬೇಡ ಒತ್ತಾಯ..’; ರತ್ನದಂಥ ಮಾತಾಡಿದ ರತನ್ ಟಾಟಾ

    ಭಾರತ ಸರ್ಕಾರವು ತುರ್ತು ಬಳಕೆಗೆ ಅನುಮೋದಿಸಿರುವ ಎರಡು ಕರೊನಾ ಲಸಿಕೆಗಳೆಂದರೆ – ಭಾರತ್ ಬಯೋಟೆಕ್​ನ ಕೋವಾಕ್ಸಿನ್ ಮತ್ತು ಸೀರಮ್ ಇನ್ಸ್​ಟಿಟ್ಯೂಟ್​​ನ ಕೋವಿಶೀಲ್ಡ್​. ಜನವರಿ 16 ರಿಂದ ಆರೋಗ್ಯ ಸೇವೆಯಲ್ಲಿ ತೊಡಗಿರುವವರಿಗೆ ಮತ್ತು ಇತರ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುತ್ತಿದೆ.(ಏಜೆನ್ಸೀಸ್)

    ಅರ್ಧ ಕೋಟಿ ಭಾರತೀಯರಿಗೆ ತಲುಪಿದ ಕರೊನಾ ಲಸಿಕೆ ; ಉತ್ತರಪ್ರದೇಶದಲ್ಲಿ ಅತಿಹೆಚ್ಚು ಫಲಾನುಭವಿಗಳು

    ಪ್ರಧಾನಿ ಮೋದಿ ಜೊತೆ ಕಾಡಿನಲ್ಲಿ ಚಹಾ ಕುಡಿದ ಕ್ಷಣಗಳನ್ನು ನೆನೆದ ಬೇರ್ ಗ್ರಿಲ್ಸ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts