More

    ವಯಸ್ಸು 24, ಸಂಬಳ 58 ಲಕ್ಷ, ಒಂಟಿತನ ಕಾಡ್ತಿದೆ; ಗರ್ಲ್‌ಫ್ರೆಂಡ್, ಸ್ನೇಹಿತರು ಇಲ್ಲ..!

    ಬೆಂಗಳೂರು: ಜೀವನ ಎಂದರೆ ಬೇಸರ, ನೋವು, ಸುಖ, ದುಖಃ ಎಲ್ಲವೂ ಇರಬೇಕಾಗುತ್ತದೆ. ಕಂಪನಿಗಳಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳಿಗೆ ಇದ್ಯಾವುದು ಅಳವಡಿಕೆಯಾಗುವುದಿಲ್ಲ. ಕೆಲಸ ಮತ್ತು ಮನೆ ಎಂದು ಜೀವನ ನಡೆಸುತ್ತಾರೆ. ಆದರೆ ಇವರಿಗೆ ದಿನ ಕಳೆದಂತೆ ಜೀವನ ಸಪ್ಪೆ ಎಂದು ಅನುಭವವಾಗ ತೊಡಗುತ್ತದೆ.

    ಹೀಗೆ ಇಲ್ಲೊಬ್ಬ ಬೆಂಗಳೂರಿನ ಯುವಕ ಗರ್ಲ್‌ಫ್ರೆಂಡ್, ಸ್ನೇಹಿತರಿಲ್ಲದೆ ಒಂಟಿತನ ಕಾಡ್ತಿದೆ ಎಂದು ಸೋಶಿಯಲ್​ ಮೀಡಿಯಾ ಮೂಲಕವಾಗಿ ಬೇಸರ ಹೊರಹಾಕಿದ್ದಾನೆ. ಈ ಪೋಸ್ಟ್​​ ಇದೀಗ ಸಖತ್​ ಸುದ್ದಿಯಲ್ಲಿದೆ.

    ಒಂಟಿತನ ಕಾಡ್ತಿದೆ ಎಂದ ಯುವಕನ ಪೋಸ್ಟ್​​ನಲ್ಲಿ ಏನಿದೆ?:
    ನಾನು FAANG ಕಂಪನಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿದ್ದೇನೆ. ನನಗೆ 24 ವರ್ಷ. ಕಳೆದ 2.9 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಉತ್ತಮ ಆದಾಯವಿದೆ. ತೆರಿಗೆ ಬಿಟ್ಟು 58 ಲಕ್ಷ ರೂ ವಾರ್ಷಿಕ ಸಂಬಳವಿದೆ. ಕೆಲಸದ ಜೀವನ ಕೂಡಾ ಹೆಚ್ಚಿನ ಒತ್ತಡವಿಲ್ಲದೆ ಆರಾಮವಾಗಿದೆ. ಆದರೂ ಕೂಡ ನನ್ನ ಜೀವನದಲ್ಲಿ ಒಂಟಿತನ ಕಾಡುತ್ತಿದೆ.

    ನನ್ನ ಜೊತೆ ಕಾಲ ಕಳೆಯಲು ಗರ್ಲ್​ಫ್ರೆಂಡ್ ಇಲ್ಲ. ನನ್ನ ಇತರ ಎಲ್ಲಾ ಸ್ನೇಹಿತರೂ ಅವರ ಜೀವನದಲ್ಲಿ ತೊಡಗಿಕೊಂಡಿದ್ದಾರೆ. ನನ್ನ ವೃತ್ತಿಜೀವನದ ಆರಂಭದಿಂದಲೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ದಿನವೂ ಅದೇ ಕೆಲಸ ಮಾಡುತ್ತಿದ್ದೇನೆ. ಹೊಸ ಸವಾಲು ಮತ್ತು ಬೆಳವಣಿಗೆ ಅವಕಾಶ ಹುಡುಕುವ ಉತ್ಸಾಹವೇ ಇಲ್ಲದಂತಾಗಿದೆ. ಇದರಿಂದಾಗಿ ನನ್ನ ಕೆಲಸದ ಜೀವನ ಕೂಡ ಬೇಸರವಾಗಿದೆ.

    ಇದನ್ನೂ ಓದಿ: ಇದುವರೆಗೆ 9 ಮರಿಗಳಿಗೆ ಜನ್ಮ ನೀಡಿದ್ದ ಆನೆ; 10ನೇ ಹೆರಿಗೆ ವೇಳೆ ಮೃತ್ಯು!
    ನನ್ನ ಜೀವನ ಹೆಚ್ಚು ಆಸಕ್ತಿದಾಯಕ ಎನಿಸಲು ಏನು ಮಾಡಬೇಕು ಎಂದು ದಯವಿಟ್ಟು ಸಲಹೆ ನೀಡಿ. ಜಿಮ್​ಗೆ ಹೋಗು ಎಂಬ ಸಲಹೆ ಬೇಡ. ಯಾಕೆಂದರೆ ನಾನು ಜಿಮ್​ಗೆ ಹೋಗುತ್ತಿದ್ದೇನೆ ಎಂದು ವ್ಯಕ್ತಿ ಪೋಸ್ಟ್ ಮಾಡಿದ್ದಾನೆ
    ಸದ್ಯ ಟ್ವಿಟರ್‌ನಲ್ಲಿ ಶೇರ್ ಮಾಡಿರೋ ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಾ ಕೆಲವು ಸಲಹೆ ನೀಡುತ್ತಿದ್ದಾರೆ.

    ಟಿಕೆಟ್​​ ನೀಡಲು ಕಾಂಗ್ರೆಸ್ ಲಂಚ ಪಡೆದಿದೆ!; ದೂರು ನೀಡಿದ ಶೋಭಾ ಕರಂದ್ಲಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts