More

    ಮಹಾಮಾರಿಯನ್ನೇ ಮೈಮೇಲೆ ಎಳ್ಕೊಂಡ್ರು ಪೊಲೀಸರು!

    ವಿಜಯಪುರ: ದರೋಡೆಕೋರರನ್ನು ಹೆಡೆ ಮುರಿ ಕಟ್ಟಿ ತರುವ ಭರದಲ್ಲಿ ಪೊಲೀಸರು ಮಹಾಮಾರಿಯನ್ನೇ ಹೊತ್ತು ತಂದಿದ್ದಾರೆ ! ಹೌದು, ವಿಜಯಪುರ ಪೊಲೀಸ್ ಸಿಬ್ಬಂದಿ ಹಿಡಿದುಕೊಂಡು ಬಂದ ಮೂವರು ದರೋಡೆಕೋರರ ಪೈಕಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ತೀವ್ರ ಆತಂಕ ಸೃಷ್ಠಿಸಿದೆ. ಈಗಾಗಲೇ ಆರೋಪಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಂಪರ್ಕ ಹೊಂದಿರುವ 24 ಪೊಲೀಸರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಎಸ್‌ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

    ಘಟನೆ ವಿವರ: ಜೂ. 17 ರಂದು ಹಿರೇಬೇವನೂರ ಗ್ರಾಮದ ಸಾಯಬಣ್ಣ ಸುಬ್ಬಣ್ಣ ಹರಣಶಿಕಾರಿ (45), ಪರಮಾನಂದ ಹಣಮಂತ ಹರಣಶಿಕಾರಿ (23), ಕಿಟ್ಯಾ ಆನಂದ ಹರಣಶಿಕಾರ ಎಂಬುವರನ್ನು ದರೋಡೆ ಪ್ರಕರಣದಡಿ ಬಂಧಿಸಲಾಗಿತ್ತು. ಸದರಿ ಆರೋಪಿಗಳು ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಉಮರ್ಗಾ ತಾಲೂಕಿನ ತುರೋಲಿಯ ಹಾಗೂ ಪ್ರಸ್ತುತ ಹೈದ್ರಾಬಾದ್‌ನಲ್ಲಿ ವಾಸವಾಗಿರುವ ಸುನೀಲ ಜಾಧವ ದಂಪತಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಬಂಗಾರ ಕೊಡುವ ಆಮಿಷವೊಡ್ಡಿ ಕಬ್ಬಿನ ಜಮೀನಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿ 9 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿದ್ದರು. ಆರೋಪಿಗಳ ಪತ್ತೆಗೆ ನಿಯೋಜನೆಯಾಗಿದ್ದ ಪೊಲೀಸ್ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ಇನ್ನುಳಿದವರ ಪತ್ತೆಗೆ ಜಾಲ ಬೀಸಿತ್ತು.

    ಇದನ್ನೂ ಓದಿ: ಹಸು, ಗಂಗಾ, ಗೀತೆ ಇವುಗಳು ಭಾರತದ ಐಡೆಂಟಿಟಿ

    ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗಿ!
    ಸದರಿ ಆರೋಪಿಗಳ ಬಗ್ಗೆ ವಿವರಣೆ ನೀಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ರಾಮ ಅರಸಿದ್ದಿ ಮತ್ತಿತರರ ಹಿರಿಯ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ್ದರು. ಹೀಗಾಗಿ ಸುದ್ದಿಗಾರರಿಗೂ ನಡುಕ ಶುರುವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸದರಿ ಸುದ್ದಿಗೋಷ್ಠಿ ನಂತರ ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಸುದ್ದಿಗೋಷ್ಠಿಗೆ ಸದರಿ ಸುದ್ದಿಗಾರರು ಹಾಜರಾಗಿದ್ದಾರೆ. ಸದರಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಸಹ ಭಾಗವಹಿಸಿದ್ದರು. ಒಟ್ಟಾರೆ ಬಂಧಿತ ದರೋಡೆಕೋರರಿಗೆ ಸೋಂಕು ದೃಢಪಟ್ಟಿರುವುದು ವ್ಯಾಪಕ ಆತಂಕಕ್ಕೆ ಕಾರಣವಾಗಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

    VIDEO: ಖಂಡಗ್ರಾಸ ಸೂರ್ಯಗ್ರಹಣ: ಪೊಲೀಸರಿಗೆ ಉದ್ದಿನ ವಡಾ, ಬಡವರಿಗೆ ನೀರು ಕೊಡಿ ಒಳ್ಳೆಯದಾಗತ್ತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts