More

    24 ಗಂಟೆಯೊಳಗೆ ಅಪಹರಣಕಾರರನ್ನು ಸೆರೆಹಿಡಿದ ಪೊಲೀಸರು : ಬ್ಯಾಂಕ್ ಮ್ಯಾನೇಜರ್ ತಂದೆ ಅಪಹರಿಸಿ 25 ಲಕ್ಷ ರೂ.ಗೆ ಬೇಡಿಕೆ

    ಹಾರೋಹಳ್ಳಿ : ಬ್ಯಾಂಕ್ ಮ್ಯಾನೇಜರ್ ತಂದೆಯನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಹಾರೋಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
    ಬಿಹಾರ ರಾಜ್ಯದವರಾದ ಪರಮೇಶ್ವರ್ ಮೆಹತೊ (74) ಅಪಹರಣವಾಗಿದ್ದವರು. ಮರಳವಾಡಿ ಹೋಬಳಿ ಗಾದಾರನಹಳ್ಳಿಯ ಜಿ.ಆರ್.ಸಂತೋಷಗೌಡ (30), ಕೆ.ವಿನಯ್ ಕುಮಾರ್ (27), ಅವರೇಮಾಳರಾಂಪುರ ಗ್ರಾಮದ ವಸಂತಕುಮಾರ್ ಬಂಧಿತರು. ಮಂಗಳವಾರ ಬೆಳಗಿನ ಜಾವ ಗಾದಾರನಹಳ್ಳಿ ಬಳಿಯ ವೀರಭದ್ರೇಶ್ವರ ದೇವಸ್ಥಾನದ ಬಳಿ ವಾಕಿಂಗ್ ಮಾಡುತ್ತಿದ್ದ ಪರಮೇಶ್ವರ್ ಮೆಹತೊ ಅವರನ್ನು ಆರೋಪಿಗಳು ಅಪಹರಿಸಿದ್ದರು.

    ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನ ಬ್ಯಾಂಕ್ ಆ್ ಬರೋಡಾ ಶಾಖೆಯಲ್ಲಿ ಮ್ಯಾನೇಜರ್ ಆಗಿರುವ ಮೆಹತೊ ಪುತ್ರ ರಾಧಾಕೃಷ್ಣ ಪ್ರಸಾದ್ ಅವರು ಗಾದಾರನಹಳ್ಳಿ ಬಳಿ ಜಮೀನು ಖರೀದಿಸಿ ಎಸ್ಟೇಟ್ ಮಾಡಿಕೊಂಡಿದ್ದು, ಕರೊನಾ ಹಿನ್ನೆಲೆಯಲ್ಲಿ ಅಲ್ಲೇ ವಾಸವಿದ್ದಾರೆ. ಕುಟುಂಬ ಸದಸ್ಯರ ಚಲನವಲನ ಗಮನಿಸುತ್ತಿದ್ದ ಸಂತೋಷ್‌ಗೌಡ ಮತ್ತು ವಿನಯ್ ಕುಮಾರ್ ಸ್ನೇಹಿತ ವಸಂತ ಕುಮಾರ್‌ನ ಜತೆ ಸೇರಿ ಹಣದ ಆಸೆಗಾಗಿ ಅಪಹರಿಸಿ 25 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ವಿಷಯ ಯಾರಿಗಾದರೂ ತಿಳಿಸಿದರೆ ತಂದೆಯನ್ನು ಕೊಲ್ಲುವುದಾಗಿಯೂ ಬೆದರಿಸಿದ್ದರು. ಈ ಸಂಬಂಧ ರಾಧಾಕೃಷ್ಣ ಪ್ರಸಾದ್ ಮಂಗಳವಾರ ಬೆಳಗ್ಗೆ 10 ಗಂಟೆಯಲ್ಲಿ ಹಾರೋಹಳ್ಳಿ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು.

    ಅಪಹರಣಕಾರರ ಜಾಡು ಬೆನ್ನತ್ತಿದ್ದ ಹಾರೋಹಳ್ಳಿ ಸಿಪಿಐ ರಾಮಪ್ಪ ಬಿ.ಗುತ್ತೇರ್ ಮತ್ತು ಎಸ್‌ಐ ಮುರಳಿ ನೇತೃತ್ವದ ತಂಡ ಅಪಹರಣಕಾರರ ಮೊಬೈಲ್ ಲೋಕೇಷನ್ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಗಟ್ಟಿಗುಂದ ಕಾಡಿನಲ್ಲಿರುವುದು ತಿಳಿದುಬಂತು. ಎಸ್‌ಐ ಮುರಳಿ ನೇತೃತ್ವದ ತಂಡ ಬುಧವಾರ ಬೆಳಗಿನ ಜಾವ 4 ಗಂಟೆಯಲ್ಲಿ ಕಾಡಿನಲ್ಲಿ ಶೋಧ ಕಾರ್ಯದಲ್ಲಿದ್ದಾಗ ಪೊಲೀಸ್ ವಾಹನ ಕಂಡು ಆರೋಪಿಗಳು ಮೆಹತೊ ಅವರನ್ನು ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬಂಧಿಸಿದ್ದು, ಕಾರು, ಒಂದು ಮೊಬೈಲ್ ೆನ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಮೋಹನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪ್ರಕರಣವನ್ನು 24 ಗಂಟೆಗಳಲ್ಲಿಯೇ ಭೇದಿಸಿದ ಪೊಲೀಸರ ಕಾರ್ಯಕ್ಕೆ ಎಸ್ಪಿ ಗಿರೀಶ್ ಮತ್ತು ಡಿವೈಎಸ್‌ಪಿ ಮೋಹನ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಬೋರೇಗೌಡ, ಸತೀಶ, ಮಧು, ಮಾಳಪ್ಪ, ಶ್ರೀನಿವಾಸ್, ಶ್ರೀಕಾಂತ್ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts