More

    ಪರೀಕ್ಷೆ ಎದುರಿಸಿದ 231 ಅಂಗವಿಕಲರು

    ಚಿತ್ರದುರ್ಗ:ಜಿಲ್ಲಾದ್ಯಂತ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ವಿಷಯದಲ್ಲಿ 231 ಅಂಗವಿಕಲ ವಿದ್ಯಾರ್ಥಿಗಳ ಪೈಕಿ 61 ಮಂದಿ ಒಂಬತ್ತನೇ ತರಗತಿ ಸೇರಿ ಇತರೆ ವಿದ್ಯಾರ್ಥಿಗಳ ಸಹಾಯ ಪಡೆದು ಪರೀಕ್ಷೆ ಎದುರಿಸಿದರು.

    ದೃಷ್ಟಿ ದೋಷವುಳ್ಳ, ಕಿವಿ ಕೇಳದ, ಕೈ ಇಲ್ಲದ, ಮಾತು ಬಾರದ ಸೇರಿ ಶೇ.75ಕ್ಕಿಂತ ಹೆಚ್ಚು ಅಂಗವಿಕಲತೆ ಇರುವ ವಿದ್ಯಾರ್ಥಿಗಳಿಗೆ ಬೇರೆ ವಿದ್ಯಾರ್ಥಿಗಳ ಸಹಾಯ ಪಡೆದು ಪರೀಕ್ಷೆ ಬರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಅನುವು ಮಾಡಿಕೊಟ್ಟಿತ್ತು.

    ಬರೆಯಲು ಸಾಧ್ಯವಾಗದೆ, ಸಹಾಯಕರ ಮೂಲಕ ಪರೀಕ್ಷೆ ಎದುರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳ, ವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಅದರಂತೆ ಮುಂಚಿತವಾಗಿಯೇ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳನ್ನು ಪರಿಗಣಿಸಿ, ಆ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿತ್ತು.

    ಎಲ್ಲ ಅಂಗವಿಕಲ ವಿದ್ಯಾರ್ಥಿಗಳಿಗೆ ನೆಲಮಹಡಿಯಲ್ಲೇ 20ಕ್ಕೂ ಅಧಿಕ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥಿತವಾಗಿ ಅನುಕೂಲ ಮಾಡಿಕೊಡಲಾಗಿತ್ತು. ಅಲ್ಲದೆ, 1 ಗಂಟೆ ಹೆಚ್ಚುವರಿ ಸಮಯ ಕೂಡ ನೀಡಿದ್ದರಿಂದ ಅವರೆಲ್ಲರೂ ಸಂತಸದಿಂದ ಪರೀಕ್ಷೆ ಎದುರಿಸಿದರು. ಚಿತ್ರದುರ್ಗ ತಾಲೂಕಿನಲ್ಲಿ 108 ಅಂಗವಿಕಲ ವಿದ್ಯಾರ್ಥಿಗಳ ಪೈಕಿ 94 ಮಂದಿ ಹಾಜರಾಗಿ, 14 ಮಂದಿ ಗೈರಾಗಿದ್ದರು. 28 ಮಂದಿ ಇತರೆ ವಿದ್ಯಾರ್ಥಿಗಳ ಸಹಾಯ ಪಡೆದುಕೊಂಡರು.

    ಅದೇ ರೀತಿ ಹಿರಿಯೂರು ತಾಲೂಕಿನಲ್ಲಿ 38 ಅಂಗವಿಕಲ ವಿದ್ಯಾರ್ಥಿಗಳಿದ್ದು, ಈ ಪೈಕಿ ಐವರು, ಗುರುವಾರ ಬೈಕ್‌ನಿಂದ ಬಿದ್ದು ಕೈಗೆ ಪೆಟ್ಟು ಮಾಡಿಕೊಂಡ ಒಬ್ಬ ವಿದ್ಯಾರ್ಥಿ ಸೇರಿ ಒಟ್ಟು 6 ಮಂದಿ, ಮೊಳಕಾಲ್ಮುರು 51ರ ಪೈಕಿ ದೃಷ್ಟಿದೋಷವುಳ್ಳ 8, ಹೊಸದುರ್ಗ 18ರ ಪೈಕಿ 12, ಚಳ್ಳಕೆರೆ 4ರ ಪೈಕಿ ಇಬ್ಬರು, ಹೊಳಲ್ಕೆರೆ 12ರ ಪೈಕಿ ಐವರು ವಿದ್ಯಾರ್ಥಿಗಳಿಗೆ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ನೆರವಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts