More

    ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ಯೋಜನೆ – 2301 ಅನರ್ಹ ಫಲಾನುಭವಿಗಳಿಗೆ ನೋಟಿಸ್

    ಕಾರವಾರ: ತಪ್ಪು ಮಾಹಿತಿ ನೀಡಿ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ಯೋಜನೆಯಲ್ಲಿ ವರ್ಷಕ್ಕೆ 6 ಸಾವಿರ ರೂ. ಪಡೆದ ಜಿಲ್ಲೆಯ ಕೆಲವರಿಗೆ ಶಾಕ್ ಕಾದಿದೆ. ಆದಾಯ ತೆರಿಗೆ ಪಾವತಿಸುತ್ತಿರುವ ಜಿಲ್ಲೆಯ 2301 ಕಿಸಾನ್ ಸಮ್ಮಾನ ಯೋಜನೆಯ ಫಲಾನುಭವಿಗಳಿಗೆ ಕೃಷಿ ಇಲಾಖೆ ನೋಟಿಸ್ ನೀಡಲಾರಂಭಿಸಿದೆ.

    ರೈತರ ಉದ್ಧಾರಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯ ಫಲಾನುಭವಿ ಯಾಗಲು ಹಲವು ನಿಬಂಧನೆ ವಿಧಿಸಲಾಗಿತ್ತು. ಅದರಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರು ಈ ಸೌಲಭ್ಯ ಪಡೆಯಲು ಅರ್ಹರಲ್ಲ ಎಂಬ ನಿಬಂಧನೆಯೂ ಇದೆ. ಆದರೆ, ಹಲವು ಆದಾಯ ತೆರಿಗೆದಾರರು ತಪ್ಪು ಮಾಹಿತಿ ನೀಡಿ ಕಳೆದ ಎರಡು ವರ್ಷಗಳಿಂದ ಹಣ ಪಡೆದಿರುವುದನ್ನು ಕೇಂದ್ರ ಸರ್ಕಾರ ಗುರುತಿಸಿದೆ.
    ಜಿಲ್ಲೆಯ 2301 ಜನರ ಪಟ್ಟಿಯನ್ನು ಕೇಂದ್ರ ಕೃಷಿ ಇಲಾಖೆಗೆ ಕಳಿಸಿಕೊಟ್ಟಿದ್ದು, ಆಯಾ ತಾಲೂಕಿನ ಕೃಷಿ ಇಲಾಖೆ ಅಧಿಕಾರಿಗಳು ಅವರಿಗೆ ನೋಟಿಸ್ ಜಾರಿ ಮಾಡಿ ಪಡೆದ ಹಣವನ್ನು ಡಿಡಿ ಮೂಲಕ ಸಂಬಂಧಪಟ್ಟ ಕೃಷಿ ಅಧಿಕಾರಿಗೆ ಹಿಂತಿರುಗಿಸುವಂತೆ ಸೂಚಿಸಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 1.66 ಲಕ್ಷ ರೈತರು ಕಿಸಾನ್ ಸಮ್ಮಾನ ಯೋಜನೆಯಲ್ಲಿ ಹೆಸರು ನೋಂದಾಯಿಸಿ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂ. ಸಹಾಯಧನವನ್ನು ಪಡೆದಿದ್ದಾರೆ.


    ಸರ್ಕಾರದ ಸೂಚನೆಯಂತೆ ತಪ್ಪು ಮಾಹಿತಿ ನೀಡುವವರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ನಂತರ ಹಣ ವಸೂಲಾತಿ ಮಾಡಲಾಗುವುದು. | ಹೊನ್ನಪ್ಪ ಗೋವಿಂದ ಗೌಡ ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts