More

    ಸಬ್ಸಿಡಿ ಆಮಿಷವೊಡ್ಡಿ 23 ಲಕ್ಷ ಧೋಖಾ..!

    ಬೆಂಗಳೂರು : ರಾಜ್ಯ ಸರ್ಕಾರದಿಂದ ಅನುದಾನ ಮತ್ತು ಸಬ್ಸಿಡಿ ಕೊಡಿಸುವುದಾಗಿ ಆಮಿಷವೊಡ್ಡಿ 23 ಲಕ್ಷ ರೂ. ಕಮಿಷನ್ ಪಡೆದು ವಂಚನೆ ಮಾಡಿರುವ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಸಂಬಂಧ ಎಸ್.ಆರ್.ನಗರ ಮಿಷನ್ ರಸ್ತೆ ಜಿ.ತೇಜಸ್ವಿನಿ, ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ತಾವರೆಕೆರೆ ಬೈಚುಗುಪ್ಪೆ ನಿವಾಸಿಗಳಾದ ಗಂಗಲಕ್ಷ್ಮಿ ಮತ್ತು ಶ್ರೀನಿವಾಸರಾಜ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    2021ರಲ್ಲಿ ಗಂಗಲಕ್ಷ್ಮಿ ಪರಿಚಯವಾಗಿ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳು ಗೊತ್ತಿದ್ದಾರೆ. ಅವರ ಕಡೆಯಿಂದ ಕೋಟ್ಯಂತರ ರೂ. ಅನುದಾನ ಕೊಡಿಸಿ ಅದರಲ್ಲಿ ಶೇ.70 ರಿಂದ 80 ಸಬ್ಸಿಡಿ ಕೊಡಿಸುತ್ತೆನೆ. ಅದರಲ್ಲಿ ಶೇ.20 ವಾಪ್ ಕೊಡಬೇಕು ನಂಬಿಸಿದ್ದಳು. ಆನಂತರ ಕುಮಾರ್ ಎಂಬಾತನನ್ನು ಪರಿಚಯ ಮಾಡಿಸಿದಳು.

    ಇದಾದ ಮೇಲೆ ಅಧಿಕಾರಿಗಳಿಗೆ ಹಣ ಕೊಡಬೇಕೆಂಬ ನೆಪದಲ್ಲಿ ಹಂತ ಹಂತವಾಗಿ 23 ಲಕ್ಷ ರೂ. ಪಡೆದುಕೊಂಡು ಯಾವುದೇ ಅನುದಾನ ಬಿಡುಗಡೆ ಮಾಡಿಸಿಲ್ಲ. ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳಿದಾಗ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತೇಜಸ್ವಿನಿ ಆರೋಪ ಮಾಡಿದ್ದಾರೆ.

    ಹಣ ಪಡೆದು ಮೋಸ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಸಂತ್ರಸ್ತೆ ಮನವಿ ಮಾಡಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts