More

    ಶಿಕ್ಷಕರು ಮತ್ತು ಪೊಲೀಸರ ನಡುವೆ ಘರ್ಷಣೆ: 23 ಜನರಿಗೆ ಗಾಯ

    ಚಂಡೀಗಢ: ಅಧಿಕ ವೇತನ ಮತ್ತು ಉದ್ಯೋಗ ಭದ್ರತೆಗಾಗಿ ಆಗ್ರಹಿಸಿ ವೃತ್ತಿಶಿಕ್ಷಣ ಶಿಕ್ಷಕರು ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ 15 ಜನ ಪ್ರತಿಭಟನಾಕಾರರು ಮತ್ತು 8 ಜನ ಪೊಲೀಸರಿಗೆ ತೀವ್ರ ಗಾಯಗಳುಂಟಾಗಿರುವ ಪ್ರಸಂಗ ವರದಿಯಾಗಿದೆ.

    ಹರಿಯಾಣದ ಹಲವು ಜಿಲ್ಲೆಗಳಲ್ಲಿ ಹರಿಯಾಣ ವೊಕೇಷನಲ್ ಟೀಚರ್ಸ್​ ಅಸೋಸಿಯೇಷನ್​ ನೇತೃತ್ವದಲ್ಲಿ ವೃತ್ತಿಪರ ಶಿಕ್ಷಕರಿಗೆ ಹೆಚ್ಚಿನ ವೇತನ ನೀಡುವಂತೆ ಹಾಗೂ ಉದ್ಯೋಗ ನೀಡುವಲ್ಲಿ ಗುತ್ತಿಗೆದಾರರ ಪಾತ್ರವನ್ನು ವಿರೋಧಿಸಿ ‘ಮಹಾ ಆಂದೋಲನ್​’ ನಡೆಯುತ್ತಿದೆ. ಸೋಮವಾರ ಸಂಜೆ ಪಂಚಕುಲದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಶಿಕ್ಷಕರ ಗುಂಪು ಚಂಡೀಗಡದ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿ ತಡೆಯುವ ಪ್ರಯತ್ನ ನಡೆಸಿದರು.

    ಇದನ್ನೂ ಓದಿ: ಕ್ರಿಕೆಟ್​ ಬೆಟ್ಟಿಂಗ್​, ಜೂಜಿನಲ್ಲಿ ಹಣ ಕಳೆದ; ಸಾಲಬಾಧೆ ತಾಳದೆ ಸಾವಿಗೆ ಶರಣಾದ

    ಹೋರಾಟಗಾರರು ಇದಕ್ಕೆ ಮಣಿಯದ ಕಾರಣ ಲಾಠಿ ಚಾರ್ಜ್​ ಮತ್ತು ವಾಟರ್​ ಕ್ಯಾನನ್​ಗಳ ಪ್ರಯೋಗಕ್ಕೆ ಪೊಲೀಸರು ಮುಂದಾದರು. ರೊಚ್ಚಿಗೆದ್ದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಮಾರಾಮಾರಿಯಲ್ಲಿ ಮೂವರು ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಎಂಟು ಜನ ಪೊಲೀಸರಿಗೆ ಗಾಯಗಳುಂಟಾದವು. ಪ್ರತಿಭಟನಾಕಾರರಲ್ಲಿ 15 ಜನರಿಗೆ ಗಾಯಗಳುಂಟಾದವು ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

    ಫಾಲ್ಕೆ ಪ್ರಶಸ್ತಿ ಪಡೆದ ರಜನೀಕಾಂತ್;​ ಕರ್ನಾಟಕ ಸಾರಿಗೆ ಬಸ್​ ಚಾಲಕನ್ನನ್ನು ನೆನೆದರು!

    ಬನಿಯನ್ನಲ್ಲಿ ಬ್ಲೂಟೂತ್​ ಡಿವೈಸ್​! ಪರೀಕ್ಷೆಯಲ್ಲಿ ನಕಲು ಮಾಡಲು ಹೈಟೆಕ್​ ಮಾರ್ಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts