More

    ವೈದ್ಯರ ಮೇಲಿನ ಹಲ್ಲೆಗೆ ಜೈಲುಶಿಕ್ಷೆ ಸೇರಿ 23 ಮಸೂದೆಗಳು ಅಂಗೀಕಾರಕ್ಕೆ ರೆಡಿ

    ನವದೆಹಲಿ: ಸೋಮವಾರ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ 23 ಹೊಸ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಅವುಗಳಲ್ಲಿ 11 ಮಸೂದೆಗಳು ಸುಗ್ರೀವಾಜ್ಞೆಯ ಬದಲಿಗೆ ಬರಲಿವೆ.

    ವೈದ್ಯರ ಸಹಿತ ಆರೋಗ್ಯ ಕ್ಷೇತ್ರದ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆಗಳನ್ನು ತಡೆಯುವ ಮಸೂದೆ ಅಂಗೀಕಾರವಾಗಿ ಕಾನೂನಾದಾಗ, ಕೋವಿಡ್-19 ನಿಭಾಯಿಸಲು ನಿಯೋಜಿತರಾದ ಆರೋಗ್ಯ ಸಿಬ್ಬಂದಿ ಮೇಲೆ ನಡೆಸುವ ಹಲ್ಲೆ ಅಥವಾ ಕಿರುಕುಳ ಜಾಮೀನುರಹಿತ ಅಪರಾಧವಾಗಲಿದೆ. ಅಪರಾಧಿಗಳಿಗೆ ಏಳು ವರ್ಷವರೆಗೆ ಸೆರೆವಾಸ ಮತ್ತು ಐದು ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ. ವೈದ್ಯರು, ನರ್ಸ್‌ಗಳು ಮತ್ತು ಆಶಾ ಕಾರ್ಯಕರ್ತೆಯರಿಗೂ ಅದು ರಕ್ಷಣೆ ಕಲ್ಪಿಸಲಿದೆ.

    ಇದನ್ನೂ ಓದಿ: ನಮ್ ಲೈಫೇ ಬರ್ನ್ ಆಗ್ಹೋಯ್ತು ಎಂದು ಅಲವತ್ತುಕೊಂಡ ರಾಗಿಣಿ: ವಿಡಿಯೋ ವೈರಲ್

    2020 ಏಪ್ರಿಲ್‌ನಿಂದ ಒಂದು ವರ್ಷದ ವರೆಗೆ ಸಂಸತ್ ಸದಸ್ಯರ ವೇತನದಲ್ಲಿ ಶೇಕಡ 30 ಕಡಿತ ಮಾಡುವುದಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ ಸ್ಥಾನದಲ್ಲಿ ಮಸೂದೆ ಮಂಡನೆಯಾಗಲಿದೆ. ಈ ಹಣವನ್ನು ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಬಳಸಲಾಗುತ್ತದೆ.

    ಇದನ್ನೂ ಓದಿ: ಜಿಎಸ್​ಟಿ ನಷ್ಟಭರ್ತಿಗೆ ಆರ್​ಬಿಐನಿಂದ ಸಾಲ: ಕೇಂದ್ರ ಕೊಟ್ಟ ಮೊದಲ ಆಯ್ಕೆಗೆ ಜೈಕಾರ

    ಪ್ರಮುಖ ಮಸೂದೆಗಳು ಇಂತಿವೆ. ರೈತರ ಉತ್ಪನ್ನಗಳ ಖರೀದಿ ಮತ್ತು ಮಾರಾಟದಲ್ಲಿ ರೈತರು ಹಾಗು ವರ್ತಕರಿಗೆ ಸ್ವಾತಂತ್ರ್ಯ ಕಲ್ಪಿಸುವ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ. ಜಮ್ಮು ಮತ್ತು ಕಾಶ್ಮೀರ ಅಧಿಕೃತ ಭಾಷಾ ಮಸೂದೆ. ಈಗಿರುವ ಉರ್ದು ಮತ್ತು ಇಂಗ್ಲಿಷ್ ಜೊತೆಯಲ್ಲಿ ಕಾಶ್ಮೀರಿ, ಡೋಗ್ರಿ ಮತ್ತು ಹಿಂದಿ ಕೂಡ ಕೇಂದ್ರಾಡಳಿತ ಪ್ರದೇಶದ ಅಧಿಕೃತ ಭಾಷೆಗಳಾಗಲಿವೆ. ಬಹು ರಾಜ್ಯ ಸಹಕಾರಿ ಸಂಘಗಳ ಮಸೂದೆ. (ಏಜೆನ್ಸೀಸ್)

    14 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದ ಕೇಂದ್ರ: ಕರ್ನಾಟಕ ಪಟ್ಟಿಯಲ್ಲಿದೆಯೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts