More

    23 ಇಟ್ಟಿಗೆ ಭಟ್ಟಿಗಳ ಮೇಲೆ ದಾಳಿ

    ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ 23 ಅನಧಿಕೃತ ಇಟ್ಟಿಗೆ ಭಟ್ಟಿಗಳ ಮೇಲೆ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮತ್ತು ಹೆಸ್ಕಾಂ ಎಇಇ ವಿನಾಯಕ ಪೇಟಕರ ಬುಧವಾರ ದಾಳಿ ನಡೆಸಿದ್ದಾರೆ.

    ಸನವಳ್ಳಿ ಮತ್ತು ಅಜ್ಜಳ್ಳಿ ಗ್ರಾಮಗಳಲ್ಲಿ ಅನಧಿಕೃತ ಇಟ್ಟಿಗೆ ಬಟ್ಟಿಗಳ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಯೊಂದಿಗೆ ದಾಳಿ ನಡೆಸಿ ಮೂರು ಪಂಪ್ ಸೆಟ್, ವಿದ್ಯುತ್ ತಂತಿ ಮತ್ತು ಇಟ್ಟಿಗೆ ತಯಾರಿ ಮಾಡುವ ಸಲಕರಣೆಗಳನ್ನು ವಶಕ್ಕೆ ಪಡೆದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸವಿಸ್ತಾರ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಗುರುವಾರ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವರದಿ ತಯಾರಿಸಿ ತಹಸೀಲ್ದಾರ್ ಅವರಿಗೆ ನೀಡಿದ್ದಾರೆ. ಕೃಷಿ ಜಮೀನನ್ನು ಬಳಸಿ, ಕೆರೆಯ ನೀರನ್ನು ಅನಧಿಕೃತವಾಗಿ ಬಳಸಿ ಮತ್ತು ಅನಧಿಕೃತವಾಗಿ ವಿದ್ಯುತ್ ಬಳಸಿ ಇಟ್ಟಿಗೆ ತಯಾರಿಸುತ್ತಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

    ಇಟ್ಟಿಗೆ ಭಟ್ಟಿಗಳಲ್ಲಿ ವಿದ್ಯುತ್ ಕಳ್ಳತನ ಮಾಡಿದ್ದಾರೆ. ಎಷ್ಟು ವಿದ್ಯುತ್ ಕಳ್ಳತನವಾಗಿದೆ ಎಂಬುದು ಲೆಕ್ಕಾಚಾರ ಮಾಡಲಾಗುವುದು. ತಹಸೀಲ್ದಾರ್ ನೀಡುವ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಸಲಕರಣೆಗಳನ್ನು ಜಪ್ತಿ ಮಾಡ ಲಾಗಿದೆ. ಜಪ್ತಿ ಮಾಡುವ ವೇಳೆ ವಾಹನ ದಲ್ಲಿದ್ದ ವಿದ್ಯುತ್ ಸಲಕರಣೆಗಳನ್ನು ಕಳುವು ಮಾಡಿದ ಬಗ್ಗೆ ದೂರು ಸಲ್ಲಿಸಲಾಗಿದೆ ಎಂದು ಹೆಸ್ಕಾಂ ಎಇಇ ವಿನಾಯಕ ಪೇಟಕರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts