More

    ಗುಪ್ತಚರ ದಳದಲ್ಲಿ ಸೇವೆ ಸಲ್ಲಿಸಲು ಅವಕಾಶ…ಯುಜಿ-ಪಿಜಿ ಪಾಸ್ ಆದವರಿಗೆ ಆದ್ಯತೆ

    ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ಆಡಳಿತಕ್ಕೆ ಒಳಪಡುವ ಗುಪ್ತಚರ ದಳವು 1887ರಲ್ಲಿ ಸೆಂಟ್ರಲ್ ಸ್ಪೆಷಲ್ ಬ್ರ್ಯಾಂಚ್ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು. ದೇಶದ ಆಂತರಿಕ ಭದ್ರತೆಯ ಹೊಣೆ ಹೊತ್ತಿದ್ದು, ಕೌಂಟರ್ ಇಂಟೆಲಿಜೆನ್ಸ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ವಿಶ್ವದ ಹಳೆಯ ಗುಪ್ತಚರ ದಳ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರಸ್ತುತ ಇಂಟೆಲಿಜೆನ್ಸ್ ಆಫೀಸರ್‌ಗಳಾಗಿ ಕೆಲಸ ಮಾಡಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಇಲ್ಲಿನ ಮಾಹಿತಿ ಆಧಾರಿಸಿ ಅರ್ಜಿ ಸಲ್ಲಿಸಬಹುದು.

    ಒಟ್ಟು ಹುದ್ದೆ: 226

    ಹುದ್ದೆ ಹೆಸರು
    ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್-2/ಟೆಕ್ನಿಕಲ್

    ಹುದ್ದೆ ವಿವರ
    ಡಿಸಿಪ್ಲಿನ್ ಹುದ್ದೆ
    ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇನ್ಫಾರ್ಮೆಷನ್ ಟೆಕ್ನಾಲಜಿ 79
    ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ಸ್ 147

    ಶೈಕ್ಷಣಿಕ ಅರ್ಹತೆ
    ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಬಿಇ/ಬಿ.ಟೆಕ್ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್ಸ್/ಎಲೆಕ್ಟ್ರಾನಿಕ್ಸ್/ಫಿಸಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಜತೆಗೆ 2021/22/23ರ ಗೇಟ್ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ಸ್/ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇನ್ಫಾರ್ಮೆಷನ್ ಟೆಕ್ನಾಲಜಿ ವಿಷಯದಲ್ಲಿ ತೇರ್ಗಡೆಯಾಗಿರುವವರು ಅರ್ಜಿ ಸಲ್ಲಿಸಲು ಅರ್ಹರು.

    ವಯೋಮಿತಿ
    ಕನಿಷ್ಠ 18 ವರ್ಷ 2024 ಜನವರಿ 12ಕ್ಕೆ 27 ವರ್ಷ ಮೀರದವರು ಅರ್ಜಿ ಸಲ್ಲಿಸಬಹುದು.

    ವೇತನ
    ಕೇಂದ್ರ ಸರ್ಕಾರದ ವೇತನ ಶ್ರೇಣಿಯ ಅಡಿಯಲ್ಲಿ ಪೇ ಲೆವೆಲ್ 7ರ ಅನ್ವಯ 44,900ರೂ.-1,42,400ರೂ. ನಿಗದಿಪಡಿಸಲಾಗಿದೆ.

    ಅರ್ಜಿ ಶುಲ್ಕ
    ಸಾಮಾನ್ಯ/ಒಬಿಸಿ/ಆರ್ಥಿಕವಾಗಿ ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳು 100ರೂ. ಅರ್ಜಿ ಶುಲ್ಕ ಪಾವತಿಸಬೇಕಿದ್ದು, 100ರೂ. ಪ್ರೊಸೆಸ್ಸಿಂಗ್ ಶುಲ್ಕ ಎಲ್ಲ ವರ್ಗದವರಿಗೂ ಅನ್ವಯವಾಗಲಿದೆ.

    ಆಯ್ಕೆ ಹೇಗೆ?
    2021/22/23ರಲ್ಲಿ ನಡೆದ ಗೇಟ್ ಪರೀಕ್ಷೆಯಲ್ಲಿ ಅಭ್ಯರ್ಥಿಯು ಗಳಿಸಿರುವ ಅಂಕದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ, ನೇರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಗೇಟ್ ಸ್ಕೋರ್ 1000ಕ್ಕೆ ನಿಗದಿಯಾಗಿದ್ದು, ಸಂದರ್ಶನಕ್ಕೆ 175 ಅಂಕ ನಿಯೋಜಿಸಲಾಗಿದೆ.

    ಹೀಗೆ ಅರ್ಜಿ ಸಲ್ಲಿಸಿ…
    www.mha.gov.in ಮುಖೇನ ಅರ್ಜಿ ಸಲ್ಲಿಕೆಗೆ ಅವಕಾಶ.

    ಅರ್ಜಿ ಸಲ್ಲಿಕೆ ದಿನಾಂಕ
    23.12.2023
    12.01.2024

    ಹೆಚ್ಚಿನ ಮಾಹಿತಿಗೆ ಇಲ್ಲಿ ಪರಿಶೀಲಿಸಿ
    mha.gov.in 

    ಅಧಿಸೂಚನೆಗೆ 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts