More

    ಭದ್ರಾವತಿ ಕ್ಷೇತ್ರದಲ್ಲಿ 2,14,070 ಮತದಾರರು: ಸತ್ಯನಾರಾಯಣ

    ಭದ್ರಾವತಿ: ಲೋಕಸಭಾ ಚುನಾವಣೆಗೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸತ್ಯನಾರಾಯಣ ಹೇಳಿದರು.
    ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ 253 ಮತಗಟ್ಟೆಗಳನ್ನು ತೆರೆಯಲಾಗಿದೆ. 1,03,722 ಪುರುಷ, 1,10,343 ಮಹಿಳಾ ಹಾಗೂ 5 ತೃತೀಯ ಲಿಂಗಿಗಳು ಸೇರಿ ಒಟ್ಟು 2,14,070 ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸಲು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ದಿನಾಂಕದವರೆಗೂ ಅವಕಾಶ ನೀಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ತಾಲೂಕಿನಲ್ಲಿ 3,718 ಯುವ ಮತದಾರರು, 85 ವರ್ಷ ದಾಟಿದ 1,435 ಮತದಾರರು ಇದ್ದಾರೆ. ವೃದ್ಧರು ಮತಗಟ್ಟೆಗಳಿಗೆ ತೆರಳಿ ಮತಹಾಕುವ ಅಗತ್ಯವಿಲ್ಲ. ನಮ್ಮ ಚುನಾವಣಾ ಸಿಬ್ಬಂದಿಯೇ ಅವರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸುವರು. ಮತದಾನ ಪ್ರಕ್ರಿಯೆ ಸುಗಮವಾಗಿ ಸಾಗಲು ಪೊಲೀಸ್ ಇಲಾಖೆ ಸೇರಿ ಒಟ್ಟು 1,500 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಕೆಲ ಮತಗಟ್ಟೆಗಳ ಕಟ್ಟಡಗಳು ಸರಿ ಇಲ್ಲದ ಕಾರಣ ಅವುಗಳನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
    ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನಿಗಾವಹಿಸಲಾಗಿದೆ. ಕೂಡ್ಲಿಗೆರೆ, ಹಳ್ಳಿಕೆರೆ, ಹುಣಸೇಕಟ್ಟೆ, ಹಾಗೂ ಬಿಆರ್‌ಪಿ ಸೇರಿ 4 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಈಗಾಗಲೆ ಚುನಾವಣಾ ನೀತಿ ಸಂಹಿತೆ ಜಾರಿ ಆಗಿರುವುದರಿಂದ ಮನೆ ಮನೆ ಪ್ರಚಾರ, ಧ್ವನಿವರ್ಧಕ ಪರವಾನಗಿ, ಪಕ್ಷದ ಕಚೇರಿ ತೆರೆಯಲು, ಕರಪತ್ರ ವಿತರಿಸಲು, ಮೆರವಣಿಗೆ ನಡೆಸಲು ಸಹಾಯಕ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ. ಮದುವೆ, ದೇವಸ್ಥಾನದ ಕಾರ್ಯಗಳಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ ಅಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳು ನಡೆಯುವಂತಿಲ್ಲ. ಸಾರ್ವಜನಿಕರ ಕುಂದು ಕೊರತೆಗಾಗಿ ಕಂಟ್ರೋಲ್ ರೂಂ: 08282-263466ಗೆ ಕರೆ ಮಾಡಬಹುದು ಎಂದರು.

    ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಕೆ.ಆರ್.ನಾಗರಾಜ್, ಗ್ರೇಡ್-2 ತಹಸೀಲ್ದಾರ್ ಮಂಜಾನಾಯ್ಕ, ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts