More

    ತುಮಕೂರು ಜಿಲ್ಲೆಯಲ್ಲಿ 214 ಜನರಿಗೆ ಕರೊನಾ ಸೋಂಕು ದೃಢ ; 277 ಮಂದಿ ಚೇತರಿಕೆ

    ತುಮಕೂರು: ಜಿಲ್ಲೆಯಲ್ಲಿ ಕರೊನಾ ಅತಂಕ ಮುಂದುವರಿದಿದ್ದು, ಬುಧವಾರ 214 ಜನರಿಗೆ ಸೋಂಕು ತಗುಲಿದೆ. ಗುಣಮುಖರಾದ 277 ಜನರು ಆಸ್ಪತ್ರೆಯಿಂದ ಮನೆಗೆ ವಾಪಸಾದರು. ಒಟ್ಟು ಪ್ರಕರಣಗಳ ಸಂಖ್ಯೆ 17387ಕ್ಕೇರಿದ್ದು, 2340 ಸಕ್ರಿಯ ಪ್ರಕರಣಗಳಾಗಿವೆ. ಏಳು ಜನರನ್ನು ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 368 ಆಗಿದೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಜನರನ್ನು ಭಯಕ್ಕೆ ದೂಡಿದ್ದು, ಜಿಲ್ಲಾಡಳಿತ ಬಡವರ ಆರೋಗ್ಯವನ್ನು ಉದಾಸೀನ ಮಾಡಿದೆ ಎಂಬ ದೂರು ಜೋರಾಗಿದೆ.

    ಚಿಕ್ಕನಾಯಕನಹಳ್ಳಿ ತಾಲೂಕಿನ 6, ಗುಬ್ಬಿ 19, ಕೊರಟಗೆರೆ, ಕುಣಿಗಲ್ ತಲಾ 8, ಮಧುಗಿರಿ 18, ಪಾವಗಡ 11, ಶಿರಾ 27, ತಿಪಟೂರು 17, ತುರುವೇಕೆರೆ 3 ಹಾಗೂ ತುಮಕೂರು ತಾಲೂಕಿನಲ್ಲಿ 97 ಜನರಿಗೆ ಸೋಂಕು ದೃಢವಾಗಿದೆ. 125 ಪುರುಷರು, 89 ಮಹಿಳೆಯರಲ್ಲಿ 60 ವರ್ಷ ಮೇಲ್ಪಟ್ಟ 46 ಜನರನ್ನು ಕರೊನಾ ಸ್ಪರ್ಶಿಸಿದ್ದು ಇವರ ಸಂಪರ್ಕಿತರನ್ನು ಗುರುತಿಸಿ ಚಿಕಿತ್ಸೆ ನೀಡುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.

    ತುಮಕೂರು ಶಿರಾಗೇಟ್ 70 ವರ್ಷದ ವೃದ್ಧೆ, ಪಾವಗಡ ತಾಲೂಕು ರೊಪ್ಪದ 78 ವರ್ಷದ ವೃದ್ಧ, ನೀಲಮ್ಮನಹಳ್ಳಿಯ 80 ವರ್ಷದ ವೃದ್ಧ, ತುಮಕೂರು ತಾಲೂಕು ದೊಡ್ಡೇರಿಯ 60 ವರ್ಷದ ವೃದ್ಧ, ಶಿರಾ ಕೆ.ಆರ್.ಬಡಾವಣೆಯ 52 ವರ್ಷದ ಮಹಿಳೆ, ಬೋರಸಂದ್ರದ 65 ವರ್ಷದ ವೃದ್ಧ ಹಾಗೂ ತಿಪಟೂರು ತಾಲೂಕು ವೆಂಕಟಾಪುರದ 55 ವರ್ಷದ ಪುರುಷ ಕರೊನಾಗೆ ಬಲಿಯಾಗಿದ್ದಾರೆ.

    ಪೊಲೀರಿಂದ ಜಾಗೃತಿ (ಮಧುಗಿರಿ): ಪೊಲೀಸ್ ಇಲಾಖೆಯಿಂದ ಪಟ್ಟಣದಲ್ಲಿ ಸಾರ್ವಜನಿಕರಿಗೆ ಕರೊನಾ ಜಾಗೃತಿ ಮೂಡಿಸಲು ಬುಧವಾರ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಮಳೆಯ ಸಿಂಚನದ ನಡುವೆಯೂ ಪೊಲೀಸರು ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿದ್ದು ವಿಶೇಷವಾಗಿತ್ತು.

    ಮಧುಗಿರಿ ಡಿವೈಎಸ್ಪಿ ಕಚೇರಿಯಲ್ಲಿ ಜಾಥಾ ಆರಂಭಗೊಂಡ ಜಾಥಾ ದ್ವಿಪಥ ರಸ್ತೆ, ಹೈಸ್ಕೂಲ್ ರಸ್ತೆ, ಡೂಂ ಲೈಟ್ ವೃತ್ತ, ಕೆಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ, ಖಾಸಗಿ ಬಸ್ ನಿಲ್ದಾಣದ ರಸ್ತೆ, ಪೊಲೀಸ್ ಠಾಣೆ ಮುಂಭಾಗದ ಅರಣ್ಯ ಇಲಾಖೆ ರಸ್ತೆ, ದಂಡೂರ ಬಾಗಿಲ ರಸ್ತೆ, ರಾಜಾ ಚಿಕ್ಕಪ್ಪಗೌಡ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಡಿವೈಎಸ್ಪಿ ಕಚೇರಿ ತಲುಪಿತು. ಡಿವೈಎಸ್‌ಪಿ ಎಂ.ಪ್ರವೀಣ್ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ಪರಸ್ಪರ ಅಂತರ, ಮಾಸ್ಕ್, ಸ್ಯಾನಿಟ್ಯೆಸರ್ ಕಡ್ಡಾಯವಾಗಿ ಬಳಸಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಪೊಲೀಸ್ ಇಲಾಖೆ ಜಾಥಾ ನಡೆಸಲಾಗಿದೆ ಎಂದರು.

    ಹಸ್ತಲಾವ ಮಾಡುವ ಬದಲು ನಮಸ್ಕರಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸಪರ ಅಂತರ ಕಾಯ್ದುಕೊಳ್ಳಿ, ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛ ಮಾಡಿಕೊಳ್ಳಿ, ಕರೊನಾ ಸೋಂಕು ನಮ್ಮ ಬಳಿ ಸುಳಿಯದಂತೆ ಎಚ್ಚರ ವಹಿಸಿ ಎಂದು ತಿಳಿಸಿದರು. ಸಿಪಿಐ ಸರ್ದಾರ್, ಬಡವನಹಳ್ಳಿ ಪಿಐ ಹನುಮಂತರಾಯಪ್ಪ, ಪಿಎಸ್‌ಐಗಳಾದ ಕಾಂತರಾಜು, ಮಂಗಳಗೌರಮ್ಮ, ಡಿವೈಎಸ್ಪಿ ಕಚೇರಿ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts