More

    21 ಜನರ ಬಂಧನ, 27 ವಾಹನ ಜಪ್ತಿ

    ಬೆಳಗಾವಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೆ, ಕಳ್ಳಬಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗಿದ್ದು, 15 ದಿನಗಳಲ್ಲಿ ಅಬಕಾರಿ ಇಲಾಖೆ ಜಿಲ್ಲಾದ್ಯಂತ 353 ಕಡೆ ದಾಳಿ ನಡೆಸಿದ್ದು, 37 ಪ್ರಕರಣ ದಾಖಲಿಸಿಕೊಂಡು 21 ಜನರನ್ನು ಬಂಧಿಸಿದೆ.

    ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಹಲವು ತಂಡ ರಚಿಸಿಕೊಂಡು 24*7 ಕಾರ್ಯಪ್ರವೃತ್ತವಾಗಿರುವ ಅಬಕಾರಿ ಇಲಾಖೆ, ಈ ವರೆಗೆ 12,340 ಲೀಟರ್ ಮದ್ಯ, 27 ಲೀಟರ್ ಗೋವಾ ಮದ್ಯ, 40 ಲೀಟರ್ ಸೇಂಧಿ, 50 ಲೀಟರ್ ಬೆಲ್ಲದ ಕೊಳೆ, 17,280 ಲೀ. ಸಂತ್ರಾ, 10 ಲೀ. ಖಾಜು ಹಾಗೂ 5,37.900 ಲೀ. ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡಿದೆ. ಅಲ್ಲದೆ, 25 ಬೈಕ್, 1 ಆಟೋರಿಕ್ಷಾ, 2 ಗೂಡ್ಸ್ ವಾಹನ ಸೇರಿ ಒಟ್ಟು 22 ಲಕ್ಷ ರೂ. ಮೌಲ್ಯದ 27 ವಾಹನ ಜಪ್ತಿ ಮಾಡಿದ್ದಾರೆ.

    ನಿರಂತರವಾಗಿ ಅಬಕಾರಿ ದಾಳಿ, ಹಗಲು-ರಾತ್ರಿ ಗಸ್ತು, ರಸ್ತೆಗಾವಲು, ವಾಹನಗಳ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿಯವರೆಗೆ ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ಜಿಲ್ಲಾದ್ಯಂತ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ವಾರ್ತಾ ಇಲಾಖೆ ಸೇರಿ ಇತರ ಇಲಾಖೆಗಳಿಗೆ ಒಟ್ಟೂ 91,502 ಲೀಟರ್ ಸ್ಯಾನಿಟೈಸರ್ ಹಂಚಿಕೆ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಬಸವರಾಜ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts