More

    21, 22ರಂದು ಅಕ್ಕಮಹಾದೇವಿ, ಬಸವ ಜಯಂತಿ

    ಮೈಸೂರು: ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ವಿವಿಧ ಲಿಂಗಾಯತ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ಹೊಸಮಠದಲ್ಲಿ ಏ.21, 22ರಂದು ಅಕ್ಕಮಹಾದೇವಿ ಮತ್ತು ಬಸವ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿದೆ.


    ಹೊಸಮಠದ ನಟರಾಜ ಸಭಾ ಭವನದಲ್ಲಿ ಜಯಂತಿ ಕುರಿತು ಭಾನುವಾರ ಪೂರ್ವಭಾವಿ ಸಭೆ ನಡೆಯಿತು ಏ.21ರಂದು ಅಕ್ಕಮಹಾದೇವಿ ಜಯಂತಿ ಅಂಗವಾಗಿ ಬೆಳಗ್ಗೆ 10ಕ್ಕೆ ಶ್ರೀ ನೀಲಕಂಠ ಸ್ವಾಮಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಮೈಸೂರು ತಾಲೂಕಿನ ಅಂದಾಜು 500 ಮಹಿಳೆಯರಿಗೆ ಲಿಂಗದೀಕ್ಷೆ ಹಮ್ಮಿಕೊಂಡಿದ್ದು, 20 ಸ್ಥಳೀಯ ಮಠಾಧೀಶರು ಭಾಗವಹಿಸಲಿದ್ದಾರೆ. ಸಂಜೆ 4ಕ್ಕೆ ಅಕ್ಕಮಹಾದೇವಿ ಜಯಂತಿ ಸಭಾ ಕಾರ್ಯಕ್ರಮ, ಸಂಜೆ 7 ಪಿ.ಲಂಕೇಶ್ ರಚನೆಯ ‘ಸಂಕ್ರಾಂತಿ’ ನಾಟಕ ಪ್ರದರ್ಶನ ಇರಲಿದೆ.


    22ರಂದು ಬೆಳಗ್ಗೆ 10ಕ್ಕೆ ಧ್ವಜಾರೋಹಣ ಬಳಿಕ ಬಸವ ಜಯಂತಿಯ ಸಭಾ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ 2.30 ಸಂಜೆ 5.30 ಸಂಘಟನೆಗಾಗಿ ಸಂವಾದ ಇರಲಿದೆ. 50 ಜನ ಸಮಾನ ಮನಸ್ಕರು ಸಂಘಟನೆ ಕುರಿತು ಚರ್ಚಿಸುವರು.


    ಸಂಜೆ 6ಕ್ಕೆ ಹೊಸಮಠದ ಆವರಣದಿಂದ ಬಸವಮೂರ್ತಿ ಮೆರವಣಿಗೆ ಹೊಸಮಠದಿಂದ ಪ್ರಾರಂಭವಾಗಲಿದ್ದು, ರಾಮಾನುಜ ರಸ್ತೆ, ಬಸವೇಶ್ವರ ರಸ್ತೆ ಸಹಿತ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ ಎಂದು ಬಸವ ಜಯಂತಿ ಆಚರಣಾ ಸಮಿತಿ ಸಂಚಾಲಕ ಮಹದೇವಪ್ಪ ತಿಳಿಸಿದರು.


    ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಕೇಂದ್ರ, ರೈತ ಸಂಘಟನೆಗಳು, ರಾಷ್ಟ್ರೀಯ ಬಸವ ಬಳಗ, ಲಿಂಗಾಯತ ಸಮುದಾಯ, ಲಿಂಗಾಯತ ಸಾಂಸ್ಕೃತಿಕ ಸಮಿತಿ, ಸಜ್ಜನ ಸಂಘ, ಕಿತ್ತೂರು ರಾಣಿ ಚೆನ್ನಮ್ಮ ಸಂಘ, ಮೈಸೂರು ಆರ್ಟ್ಸ್ ಗ್ಯಾಲರಿ, ಕನ್ನಡ ಕಲಾಕೂಟ, ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts