More

    ಬೆಂಗಳೂರಿನಾದ್ಯಂತ 21 ಕೀಟ ಕೆಫೆ

    ಬೆಂಗಳೂರು: ಸಸ್ಯಶಾಸ್ತೀ ತೋಟವಾಗಿರುವ ಲಾಲ್‌ಬಾಗ್ ನಲ್ಲಿ ಕೀಟ ಸಂರಕ್ಷಣೆಗಾಗಿ ತೋಟಗಾರಿಕೆ ಇಲಾಖೆಯು ಹೊಸ ಪರಿಕಲ್ಪನೆಯೊಂದಿಗೆ ‘ಕೀಟ ಕೆಫೆ’ ಕೀಟಗಳಿಗೊಂದು ಮರದ ಮನೆ ನಿರ್ಮಿಸಿದ್ದು, ಇದೀಗ ಇದೇ ಮಾದರಿಯಲ್ಲಿ ಬೆಂಗಳೂರಿನಾದ್ಯಂತ ಪ್ರಮುಖ ಸಸ್ಯೋದಾನಗಳಲ್ಲಿ 21 ಕೀಟ ಕೆಫೆ ನಿರ್ಮಿಸಲು ಇಂಡಿಯಾ ಫೌಂಡೇಷನ್ ಹಾಗೂ ಈವೈ ಗ್ಲೋಬಲ್ ಡೆಲಿವರಿ ಸರ್ವಿಸಸ್ ಮುಂದಾಗಿವೆ.

    ಕೀಟಗಳ ರಕ್ಷಣೆಯ ಜೊತೆಗೆ ಒಟ್ಟಾರೆ ಪರಿಸರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಂಸ್ಥೆಗಳು ಕೈಜೋಡಿಸಿವೆ. ಈ ಯೋಜನೆಯು ಒಟ್ಟು ಮೂರು ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಮೊದಲಿಗೆ ದೊಡ್ಡಸಾಗರೆ ಬೊಟಾನಿಕಲ್ ಗಾರ್ಡ್‌ನ್‌ನಲ್ಲಿ 7 ಕೆಫೆಗಳನ್ನು ಪ್ರಾರಂಭಿಸುವುದು, ನಂತರ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 6 ಹಾಗೂ ಕಬ್ಬನ್ ಉದ್ಯಾನದಲ್ಲಿ 8 ಕೀಟ ಕೆಫೆಗಳನ್ನು ಮೇ ತಿಂಗಳೊಳಗೆ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಕಾರ್ಯದಲ್ಲಿ 300ಕ್ಕೂ ಅಧಿಕ ಸ್ವಯಂ ಸೇವಕರು ಶ್ರಮದಾನ ಮಾಡುತ್ತಿದ್ದು, ಇದಕ್ಕೆ ಇನ್ನೂ 150 ಸ್ವಯಂ ಸೇವಕರು ಕೈಜೋಡಿಸಲಿದ್ದಾರೆ.

    ಕೀಟಗಳಿಗೆ ಆಶ್ರಯ ತಾಣ:ಈ ಕೀಟ ಕೆಫೆ ಪರಿಸರ ಸ್ನೇಹಿ ರಚನೆಗಳಾಗಿದ್ದು, ಮರುಬಳಕೆ ಮಾಡಿದ ಜಾಲಿ ಹಾಗೂ ನೀಲಗಿರಿಯಂತಹ ಬಾಳಕೆ ಬರುವ ಮರ, ಮಣ್ಣು ಮತ್ತು ಬಿದಿರಿನಿಂದ ತಯಾರಿಸಲಾಗುತ್ತದೆ. ಇವು ಅಸಂಖ್ಯಾತ ಬಗೆಯ ಕ್ರಿಮಿ, ಕೀಟ, ದುಂಬಿಗಳಿಗೆ ನೈಸರ್ಗಿಕ ಆಹಾರ ಪಡೆಯಲು ಹಾಗೂ ಸಂತಾನೋತ್ಪತ್ತಿ ಮತ್ತು ಅವುಗಳ ವೃದ್ಧಿಗಾಗಿ ಸಂರಕ್ಷಿತ ಹಾಗೂ ಸುರಕ್ಷಿತ ನೆಲೆ ಸೇರಿ ಸರ್ವ ರೀತಿಯಿಂದಲೂ ಕೀಟಗಳಿಗೆ ಉತ್ತಮ ಆಶ್ರಯ ತಾಣವಾಗಲಿವೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

    ಒಂದು ವರ್ಷದಲ್ಲಿ ಅಧ್ಯಯನ ವರದಿ:ಇಂಡಿಯಾ ಫೌಂಡೇಷನ್ ಸ್ಥಾಪಕ ಡೇವಿಡ್ ಕುಮಾರ್ ಮಾತನಾಡಿ, ಕೀಟಗಳಿಗೆ ಈ ಸುರಕ್ಷಿತವಾದ ಗೂಡುಗಳನ್ನು ನಿರ್ಮಿಸುವ ಮೂಲಕ ಕೇವಲ ಪರಾಗಸ್ಪರ್ಶಕ್ರಿಯೆ ಮತ್ತು ಕೀಟಗಳ ಆಹಾರ ಸುಭದ್ರತೆಗೆ ಬೆಂಬಲ ಒದಗಿಸುವುದಷ್ಟೇ ಅಲ್ಲ ನಮ್ಮ ಭೂಮಿಯ ಒಟ್ಟಾರೆ ಆರೋಗ್ಯಕ್ಕೆ ಕೋಡುಗೆ ನೀಡುವುದಾಗಿದೆ. ಈ ನಿಟ್ಟಿನಲ್ಲಿ ಕೀಟ ಕೆಫೆಗಳ ಕುರಿತು ಮೈಸೂರು ತೋಟಗಾರಿಕೆ ಕಾಲೇಜ್ ಆ್ ಹಾರ್ಟಿಕಲ್ಚರ್ ಸಹಯೋಗದಲ್ಲಿ ಕೀಟಶಾಸಜ್ಞರು ಮತ್ತು ವಿದ್ಯಾರ್ಥಿಗಳು ಅಧ್ಯಯನ ನಡೆಸಿ ಒಂದು ವರ್ಷದಲ್ಲಿ ವರದಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.

    ಐವೈ ಗ್ಲೋಬಲ್ ಡೆಲಿವರಿ ಸರ್ವಿಸಸ್‌ನ ಆಪರೇಟಿಂಗ್ ಆಫೀಸರ್ ಮನೇಶ್ ಪಟೇಲ್, ಜಗತ್ತಿನಲ್ಲಿರುವ ಪರಿಸರದ ಹೆಜ್ಜೆ ಗುರುತುಗಳೊಂದಿಗೆ ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಕಾರ್ಯದಲ್ಲಿ ತಮ್ಮೊಂದಿಗೆ ಕೈಜೋಡಿಸಿರುವ ಇಂಡಿಯಾ ಫೌಂಡೇಷನ್ ಅಭಿನಂದನೆ ಸಲ್ಲಿಸಿದ್ದಾರೆ.

    ಕೀಟ ಕೆಫೆ ವಿನ್ಯಾಸ:ಮರದ ಫ್ರೇಮ್ ಗಳಿಂದ ಕಮಾನು ರೀತಿಯಲ್ಲಿ ಸಣ್ಣ ಮನೆಯಾಕಾರದಲ್ಲಿ ‘ಕೀಟ ಕೆಫೆ’ ವಿನ್ಯಾಸಗೊಳಿಸಲಾಗಿದೆ. ಇದನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಪ್ರತಿ ವಿಭಾಗದಲ್ಲೂ ಸಣ್ಣ, ಮಧ್ಯಮ ಮರದ ತುಂಡುಗಳು, ಒಣ ಹುಲ್ಲು, ವಿವಿಧ ರೀತಿಯ ಸಸ್ಯಗಳ ಕಟ್ಟಿಗೆಯನ್ನು ಜೋಡಿಸಿ ಭದ್ರಪಡಿಸಲಾಗಿದೆ. ಈ ರಚನೆಯು ಎಲ್ಲಾ ಬಗೆಯ ಕೀಟಗಳು, ದುಂಬಿಗಳು ನೆಲೆಸಲು ಮೂಲ ನೆಲೆ ಕಲ್ಪಿಸಲಿದೆ. ಸಂತಾನೋತ್ಪತ್ತಿ ಹಾಗೂ ಅವುಗಳ ವೃದ್ಧಿ ಮತ್ತು ಬೆಳವಣಿಗೆಗೆ ಪೂರಕವಾಗಿ ನಿರ್ಮಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts