More

    ಹೆಸ್ಕಾಂಗೆ 21.67 ಕೋಟಿ ರೂಪಾಯಿ ಹಾನಿ

    ವಿರೂಪಾಕ್ಷಯ್ಯ ಜಿ.ಎಸ್. ಹುಬ್ಬಳ್ಳಿ
    ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಸುರಿದ ಭಾರಿ ಮಳೆ, ಗಾಳಿ ಮತ್ತು ಪ್ರವಾಹದಿಂದಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ 21.67 ಕೋಟಿ ರೂಪಾಯಿ ಹಾನಿಯಾಗಿದೆ.

    ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಾದ ಧಾರವಾಡ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಹಾವೇರಿಯಲ್ಲಿ 2023ರ ಏಪ್ರಿಲ್‌ನಿಂದ ಜುಲೈವರೆಗೆ ಸುರಿದ ಭಾರಿ ಮಳೆ, ಗಾಳಿ, ನೆರೆ, ಪ್ರವಾಹದಿಂದ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ (ಟಿಸಿ) ಹಾಗೂ ವಿದ್ಯುತ್ ತಂತಿ ಹಾಳಾಗಿವೆ.

    10,508 ಕಂಬ ಹಾನಿ: ಹೆಸ್ಕಾಂ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿ 539 ಕಂಬಗಳು ಹಾನಿಯಾಗಿವೆ. ಗದಗ-280, ಹಾವೇರಿ-1,307, ಉತ್ತರ ಕನ್ನಡ-4,346, ಬೆಳಗಾವಿ-1,925, ವಿಜಯಪುರ- 1,003, ಬಾಗಲಕೋಟೆ- 1,108 ಕಂಬಗಳು ನೆಲಕ್ಕುರುಳಿ ಹಾನಿಯಾಗಿವೆ.

    ಕೆಟ್ಟು ನಿಂತ 1130 ಟಿಸಿ: ಧಾರವಾಡ-28, ಹಾವೇರಿ-23, ಉತ್ತರ ಕನ್ನಡ-544, ಬೆಳಗಾವಿ-127, ವಿಜಯಪುರ-209, ಬಾಗಲಕೋಟೆ-199 ವಿದ್ಯುತ್ ಪರಿವರ್ತಕಗಳು (ಟಿಸಿ) ಹಾನಿಯಾಗಿವೆ.

    98 ಕಿಮೀ ವಿದ್ಯುತ್ ತಂತಿ: ಧಾರವಾಡ-0.57 ಕಿಮೀ, ಹಾವೇರಿ-0.41 ಕಿಮೀ, ಉತ್ತರ ಕನ್ನಡ- 66.64 ಕಿಮೀ, ಬೆಳಗಾವಿ-2.10 ಕಿಮೀ ವಿಜಯಪುರ-7.24 ಕಿಮೀ ಬಾಗಲಕೋಟೆ-21.50 ಕಿ.ಮೀಟರ್‌ನಷ್ಟು ವಿದ್ಯುತ್ ತಂತಿ ಹಾನಿಯಾಗಿದೆ. ವಿದ್ಯುತ್ ಕಂಬ ಬಿದ್ದಿರುವುದರಿಂದ 10 ಕೋಟಿ ರೂ. ನಷ್ಟ, ಟಿಸಿಗಳು ಕೆಟ್ಟಿದ್ದರಿಂದ 11 ಕೋ.ರೂ., ಲೈನ್‌ಗಳಲ್ಲಿನ ತಂತಿ ಹಾಳಾಗಿರುವುದರಿಂದ 43 ಲಕ್ಷ ರೂ., ಇನ್ನಿತರ ವಿದ್ಯುತ್ ಪರಿಕರಗಳ ಹಾನಿ 24 ಲಕ್ಷ ರೂ. ಸೇರಿ ಒಟ್ಟು 21.67 ಕೋಟಿ ರೂ. ನಷ್ಟವಾಗಿದೆ.

    ಉತ್ತರ ಕನ್ನಡದಲ್ಲಿ ಹೆಚ್ಚು ಹಾನಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 4,346 ವಿದ್ಯುತ್ ಕಂಬ ಮುರಿದು ಬಿದ್ದಿದ್ದು 544 ವಿದ್ಯುತ್ ಪರಿವರ್ತಕ ಹಾನಿಯಾಗಿವೆ. 66.64 ಕಿಮೀ ನಷ್ಟು ವಿದ್ಯುತ್ ಲೈನ್‌ನಲ್ಲಿ ತಂತಿ ಹಾನಿಗೊಳಗಾಗಿದೆ.

    ಮುಂಗಾರು ಹಂಗಾಮಿನಲ್ಲಿ 2023ರ ಏಪ್ರಿಲ್‌ನಿಂದ ಜುಲೈವರೆಗೆ ಸುರಿದ ಭಾರಿ ಮಳೆ, ಗಾಳಿ ಮತ್ತು ಪ್ರವಾಹದಿಂದಾಗಿ ಮುರಿದು ಬಿದ್ದ ವಿದ್ಯುತ್ ಕಂಬ ಹಾಗೂ ಟಿಸಿಗಳನ್ನು ತೆರವುಗೊಳಿಸಿ ಹೊಸ ಕಂಬ ಮತ್ತು ಟಿಸಿಗಳನ್ನು ಅಳವಡಿಸಲಾಗಿದೆ. ಶೇ. 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಕಡೆಗಳಲ್ಲಿ ಎರಡ್ಮೂರು ದಿನಗಳಲ್ಲಿ ಹೊಸ ವಿದ್ಯುತ್ ಕಂಬ, ಟಿಸಿ ಅಳವಡಿಸುವ ಕಾರ್ಯ ಪೂರ್ಣಗೊಳಿಸಲಾಗುವುದು.
    I ಮಹಮ್ಮದ ರೋಷನ್ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts